* ಹಿಂದೂಗಳಲ್ಲಿ ಹಿಂದುತ್ವದ ಬಗ್ಗೆ ಆಗುತ್ತಿರುವ ಜಾಗೃತಿಯಿಂದಲೇ ಕೇಜ್ರಿವಾಲ್ ಇವರಿಗೆ ಮತಾಂತರ ನಿಷೇಧ ಕಾನೂನಿನ ಮಹತ್ವವನ್ನು ಗಮನಕ್ಕೆ ಬಂದಿದೆ, ಎಂಬುದು ಗಮನದಲ್ಲಿಟ್ಟುಕೊಳ್ಳಿ !- ಸಂಪಾದಕರು
* ಈಗ ಕೇಜ್ರಿವಾಲ್ ಇವರು ಲವ್ ಜಿಹಾದ್, ಸಮಾನ ನಾಗರಿಕ ಕಾನೂನು, ಜನಸಂಖ್ಯೆ ನಿಯಂತ್ರಣ, ಬಾಂಗ್ಲಾದೇಶಿ ಮುಸ್ಲಿಮರ ನುಸುಳುವಿಕೆ ಇತ್ಯಾದಿಗಳ ಬಗ್ಗೆಯೂ ಮಾತನಾಡಬೇಕು ! – ಸಂಪಾದಕರು |
ಜಾಲಂಧರ್ (ಪಂಜಾಬ್) – ಧರ್ಮವು ಎಲ್ಲರ ವೈಯಕ್ತಿಕ ವಿಷಯವಾಗಿದೆ. ಯಾವುದೇ ದೇವತೆಯನ್ನು ಪೂಜಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಭಯ ತೋರಿಸಿ ಯಾರನ್ನಾದರೂ ಮತಾಂತರ ಮಾಡುವುದು ಅಯೋಗ್ಯವಾಗಿದೆ. ಮತಾಂತರದ ವಿರುದ್ಧ ಕಾನೂನು ಮಾಡುವುದು ಅವಶ್ಯಕವಾಗಿದೆ; ಆದರೆ ಇಂತಹ ಕಾನೂನಿನ ಮೂಲಕ ಯಾರನ್ನೂ ಹೆದರಿಸಿ ತೊಂದರೆ ನೀಡಬಾರದು, ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಅವರು ಇಲ್ಲಿ ನಡೆದ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
“A law should definitely be made against religious conversions, but nobody should be wrongly harassed through this,” said Arvind Kejriwal.
(@PankajJainClick /@kamaljitsandhu) #ArvindKejriwal #News https://t.co/0gFRYjFZEx— IndiaToday (@IndiaToday) January 29, 2022