ಪಂಜಾಬಿನ ಕಾಂಗ್ರೆಸ್ ಮುಖ್ಯಮಂತ್ರಿ ಚರಣಜೀತ ಸಿಂಗ ಚನ್ನೀ ಹಾಗೂ ಪ್ರದೇಶಾಧ್ಯಕ್ಷ ನವಜ್ಯೋತಸಿಂಗ ಸಿದ್ಧೂ ಸೋಲು !

ಅಮೃತಸರ – ಪಂಜಾಬನಲ್ಲಿ ಆಢಳಿತಾರೂಢ ಕಾಂಗ್ರೆಸ ಹೀನಾಯವಾಗಿ ಸೋಲು ಕಂಡಿದೆ. ಜೊತೆಗೆ ರಾಜ್ಯದ ಮುಖ್ಯಮಂತ್ರಿ ಚರಣಜೀತ ಸಿಂಗ ಚನ್ನೀ ಹಾಗೂ ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷ ನವಜ್ಯೋತಸಿಂಗ ಸಿದ್ಧೂರವರು ಸೋತಿದ್ದಾರೆ. ಶಿರೊಮಣೀ ಅಕಾಲಿ ದಲದ ಪ್ರಮುಖ ಸುಖಬೀರ ಸಿಂಗ ಬಾದಲ ಹಾಗೂ ಪಕ್ಷದ ಮುಖಂಡರಾದ ವಿಕ್ರಮಜೀತ ಸಿಂಗ ಮಜೀಠಿಯಾರವರು ಕೂಡ ಸೋತಿದ್ದಾರೆ. ನವಜ್ಯೋತಸಿಂಗ ಸಿದ್ಧೂರವರು ಸೋತನಂತರ ಟ್ವಿಟ ಮಾಡಿ, ‘ಜನರ ಧ್ವನಿಯು ಪ್ರತ್ಯಕ್ಷ ಭಗವಂತನ ಧ್ವನಿಯಾಗಿರುತ್ತದೆ, ಪಂಜಾಬಿನ ಜನರು ನೀಡಿರುವ ತೀರ್ಮಾನವನ್ನು ಸ್ವೀಕರಿಸುತ್ತೇನೆ. ಆಮ ಆದಮೀ ಪಕ್ಷಕ್ಕೆ ಅಭಿನಂದನೆಗಳು.’ ಹೆಳಿದ್ದಾರೆ.

ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ ಅಮರಿಂದರ ಸಿಂಗ ಸೋಲು

ಕಾಂಗ್ರೆಸ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹಾಗೂ ಈಗ ಕಾಂಗ್ರೆಸ ಅನ್ನು ತೊರೆದು ತಮ್ಮ ಸ್ವಂತ ಪಕ್ಷವನ್ನು ಸ್ಥಾಪಿಸುವ ಕ್ಯಾಪ್ಟನ ಅಮರಿಂದರ ಸಿಂಹರವರು ಪಟಿಯಾಳಾ ಚುನಾವಣಾ ಕ್ಷೇತ್ರದಿಂದ ೧೯ ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಿಂದ ಸೋತಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ೫೨ ಸಾವಿರ ಮತಗಳಿಂದ ಜಯಿಸಿದ್ದರು.

ಉತ್ತರಾಖಂಡನ ಮುಖ್ಯಮಂತ್ರಿಗಳಾದ ಪುಷ್ಕರಸಿಂಗ ಧಾಮಿ ಸೋಲು !

ಉತ್ತರಾಖಂಡನಲ್ಲಿ ಭಾಜಪದ ಮುಖ್ಯಮಂತ್ರಿ ಪುಷ್ಕರಸಿಂಗ ಧಾಮೀಯವರು ಸೋತಿದ್ದಾರೆ. ಖಟಿಮಾ ಚುನಾವಣಾ ಕ್ಷೇತ್ರದ ಕಾಂಗ್ರೆಸ್ಸ್‌ನ ಅಭ್ಯರ್ಥಿ ಭುವನ ಕಾಪಡೀಯವರು ಧಾಮಿಯವರನ್ನು ೬ ಸಾವಿರ ಮತಗಳಿಂದ ಸೋಲಿಸಿದ್ದಾರೆ.

ಉತ್ತರಾಖಂಡನಲ್ಲಿ ಕಾಂಗ್ರೆಸನ ಮುಖಂಡ ಹರೀಶ ರಾವತ ಸೋಲು !

ಉತ್ತರಾಖಂಡದಲ್ಲಿ ಕಾಂಗ್ರೆಸನ ಮಾಜಿ ಮುಖ್ಯಮಂತ್ರಿ ಹರೀಶ ರಾವತರವರು ರಾಜ್ಯದ ಲಾಲ ಕುವಾ ಚುನಾವಣಾ ಕ್ಷೇತ್ರದಿಂದ ೧೦ ಸಾವಿರ ಮತಗಳಿಂದ ಸೋತಿದ್ದಾರೆ.

ಸೋಲುವ ಮುನ್ನವೇ ಕಾರ್ಯಕರ್ತರಿಗೆ ಪ್ರಿಯಾಂಕಾ ವಾಡ್ರಾರವರ ಸಂದೇಶ !
ನಮಗೆ ಧೈರ್ಯದಿಂದ ಹಾಗೂ ಹೊಸ ಊರ್ಜೆಯಿಂದ ಮುನ್ನಡೆಯಬೇಕಿದೆ !

ಉತ್ತರಪ್ರದೇಶದಲ್ಲಿ ಕಾಂಗ್ರೆಸಗೆ ನಿರೀಕ್ಷಣೆಯಂತೆ ಯಶಸ್ಸು ಸಿಗುವುದಿಲ್ಲ, ಎಂಬದು ಚುನಾವಣೋತ್ತರ ನಡೆದ ಸಮೀಕ್ಷೆಯಿಂದ ತಿಳಿದು ಬಂದಿತ್ತು. ಅದರ ಹಿನ್ನಲೆಯಲ್ಲಿ ಕಾಂಗ್ರೆಸ್ಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾಡ್ರಾರವರು ಮತ ಎಣಿಕೆಯ ಹಿಂದಿನ ದಿನ ಪಕ್ಷದ ಕಾರ್ಯಕರ್ತರಿಗೆ ಟ್ವಿಟ ಮಾಡಿ ಸಂದೇಶ ನೀದರು. ಅದರಲ್ಲಿ ಅವರು, ‘ರಾಜ್ಯದಲ್ಲಿ ದೀರ್ಘಕಾಲದಿಂದ ಕಾಂಗ್ರೆಸ್ಸ್‌ನ ಸರಕಾರವಿಲ್ಲ ನೀವು ಯಾವ ರೀತಿ ಜನರಿಗಾಗಿ ಹೋರಾಟ ನಡೆಸಿದಿರಿ ಹಾಗೂ ನಿಜವಾದ ರಾಜಕಾರಣದ ಉದ್ಧೇಶವಾಗಿರುವ ಜನಸೇವೆಗಾಗಿ ಕಟಿಬದ್ಧರಾಗಿರುವುದರಿಂದ, ನನಗೆ ತುಂಬಾ ಅಭಿಮಾನವಾಗಿದೆ. ಜನಾದೇಶವನ್ನು ಗೌರವಿಸಿ ದೇಶ ಹಾಗೂ ರಾಜ್ಯದ ಮೇಲಿನ ನಿಷ್ಠೆ ಹಾಗೂ ಸಮರ್ಪಣೆಯ ಭಾವದಿಂದ ಹೋರಾಟ ಮುಂದುವರೆಸುವ ಸಿದ್ಧತೆಯನ್ನು ನಾವು ಮಾಡಬೇಕಾಗುತ್ತದೆ. ನಮ್ಮ ಹೋರಾಟ ಈಗಷ್ಟೇ ಪ್ರಾರಂಭವಾಗಿದೆ. ನಮಗೆ ಧೈರ್ಯದಿಂದ ಹಾಗೂ ಹೊಸ ಊರ್ಜೆಯಿಂದ ಮುನ್ನಡೆಯಬೇಕಾಗಿದೆ.’ ಎಂದು ಹೇಳಿದರು.