ಪ್ರಭು ಶ್ರೀರಾಮಚಂದ್ರರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣ ಆಧ್ಯಾಪಕಿಯನ್ನು ಕೆಲಸದಿಂದ ತೆಗೆದುಹಾಕಿದ ಪಂಜಾಬ ವಿಶ್ವವಿದ್ಯಾಲಯ !

ಹಿಂದೂಗಳು ಮಾಡಿದ ವಿರೋಧದಿಂದ ಕ್ರಮ ಕೈಗೊಂಡ ವಿಶ್ವವಿದ್ಯಾಲಯ !

ಪಂಜಾಬ – ಇಲ್ಲಿನ ‘ಲವಲೀ ಪ್ರೊಫೆಶನಲ ಯುನಿವರ್ಸಿಟಿ’ ಎಂಬ ಖ್ಯಾತ ಖಾಸಗಿ ವಿಶ್ವವಿದ್ಯಾಲಯದ ಗುರಸಂಗ ಪ್ರೀತ ಕೌರ ಎಂಬ ಹೆಸರಿನ ಅಧ್ಯಾಪಕಿಯನ್ನು ಕೆಲಸದಿಂದ ತೆಗೆದುಹಾಕಲಾಯಿತು. ಗುರಸಂಗ ಪ್ರೀತರವರು ಪ್ರಭು ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಹಿಂದೂಗಳು ಖಂಡಿಸಿದ ಬಳಿಕ ವಿಶ್ವವಿದ್ಯಾಲಯವು ಮೇಲಿನ ಕ್ರಮ ಕೈಗೊಂಡಿದೆ.

೧. ಗುರಸಂಗ ಪ್ರೀತ ಕೌರರವರು ಶ್ರೀರಾಮನ ಬಗ್ಗೆ ಮಾಡಿದ ಆಕ್ಷೇಪಾರ್ಹ ಹೇಳಿಕೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಯಿತು.

೨. ಈ ವಿಡಿಯೊದಲ್ಲಿ ‘ರಾವಣನು ಒಳ್ಳೆಯ ವ್ಯಕ್ತಿ ಎಂದು ಹೇಳಲಾಗಿದ್ದು ಪ್ರಭು ಶ್ರೀರಾಮನನ್ನು ‘ಧೂರ್ತ’ ಎಂದು ಹೇಳಲಾಗಿದೆ. ಸೀತೆಯನ್ನು ಅಪಹರಿಸಿಕೊಂಡು ಹೋಗುವುದರ ಹಿಂದೆ ಪ್ರಭು ಶ್ರೀರಾಮನೇ ಆಗಿದ್ದು ಕಾರಣವಿಲ್ಲದೆ ರಾವಣನನ್ನು ಹೊಣೆ ಮಾಡಲಾಯಿತು. ಹೀಗಿದ್ದರೂ ಕೂಡ ಸಂಪೂರ್ಣ ಜಗತ್ತು ಇಂದು ಪ್ರಭು ಶ್ರೀರಾಮನನ್ನೇ ಪೂಜಿಸುತ್ತದೆ’, ಎಂಬ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.

೩. ಈ ವಿಡಿಯೊವನ್ನು ನೋಡಿದ ಬಳಿಕ ಹಿಂದೂಗಳು ಸಾಮಾಜಿಕ ಮಾಧ್ಯಮಗಳಲ್ಲಿ ಗುರಸಂಗ ಪ್ರೀತ ಕೌರರವರಿಗೆ ತರಾಟೆಗೆ ತೆಗೆದುಕೊಳ್ಳಲಾಯಿತು. ಇದನ್ನು ಗಣನೆಗೆ ತೆಗೆದುಕೊಂಡ ವಿಶ್ವವಿದ್ಯಾಲಯವು ಅವರನ್ನು ಕೆಲಸದಿಂದ ತೆಗೆದು ಹಾಕಿತು. ‘ಗುರುಸಿಂಗ ಪ್ರೀತ ಕೌರರವರು ನೀಡಿದ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು ವಿಶ್ವವಿದ್ಯಾಲಯವು ಅದನ್ನು ಬೆಂಬಲಿಸುವುದಿಲ್ಲ’, ಎಂದು ವಿಶ್ವವಿದ್ಯಾಲಯವು ಹೇಳಿದೆ.

ಸಂಪಾದಕೀಯ ನಿಲುವು

ಧರ್ಮಹಾನಿಯನ್ನು ತಡೆಯಲು ತಕ್ಷಣ ಸಾಮಾಜಿಕ ಮಾಧ್ಯಮದಿಂದ ಖಂಡಿಸಿದ ಧರ್ಮಪ್ರೇಮಿ ಹಿಂದೂಗಳಿಗೆ ಅಭಿನಂದನೆಗಳು !

ಪ್ರಾಧ್ಯಾಪಕರೇ ಹಿಂದೂ ದೇವತೆಗಳ ವಿಷಯದಲ್ಲಿ ಆಕ್ಷೇಪಾರ್ಹ ಹೇಳಿಕೆಯನ್ನು ನೀಡುತ್ತಿದ್ದರೆ, ಅವರ ವಿದ್ಯಾರ್ಥಿಗಳ ಮೇಲೆ ಯಾವ ರೀತಿಯ ಪರಿಣಾಮವಾಗುತ್ತದೆ, ಎಂಬ ಬಗ್ಗೆ ವಿಚಾರ ಮಾಡದೆ ಇರುವುದು ಒಳಿತು !