ಫಿರೋಜಪುರ (ಪಂಜಾಬ್) ಗಡಿಯಲ್ಲಿ ಪಾಕಿಸ್ತಾನದಿಂದ ಬಂದಿದ್ದ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಪತ್ತೆ

ಪಾಕಿಸ್ತಾನವನ್ನು ನಾಶಪಡಿಸದ ಹೊರತು ಇಂತಹ ಘಟನೆಗಳನ್ನು ನಿಲ್ಲಿಸುವುದು ಅಸಾಧ್ಯ, ಎಂಬುದನ್ನು ಭಾರತ ಅರಿತುಕೊಳ್ಳಬೇಕು !

ಫಿರೋಜಪುರ (ಪಂಜಾಬ್) – ಇಲ್ಲಿನ ಗಡಿಯಲ್ಲಿ ಪಾಕಿಸ್ತಾನದಿಂದ ಕಳುಹಿಸಲಾದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಗಡಿ ಭದ್ರತಾ ಪಡೆಯು ಮಾರ್ಚ್ ೧೦ ರಂದು ವಶಪಡಿಸಿಕೊಂಡಿವೆ. ಇವುಗಳಲ್ಲಿ ೫ ‘ಎಕೆ ೪೭’ ರೈಫಲ್‌ಗಳು, ೩ ಅಮೆರಿಕಾದ ‘ಕೋಲಟ್-೮’ ರೈಫಲ್‌ಗಳು, ೫ ಪಿಸ್ತೂಲುಗಳು, ೧೦ ಮ್ಯಾಗಜೀನ್‌ಗಳು ಮತ್ತು ದೊಡ್ಡ ಪ್ರಮಾಣದ ಜೀವಂತ ಮದ್ದುಗುಂಡುಗಳು ಸೇರಿವೆ. ಮಾರ್ಚ್ ೯ ರಂದು, ಗಡಿ ಭದ್ರತಾ ಪಡೆ ಪಾಕಿಸ್ತಾನದಿಂದ ಪ್ರವೇಶಿಸಿದ ಡ್ರೋನ್ (ಮಾನವ ರಹಿತ ವೈಮಾನಿಕ ವಾಹನ) ಹೊಡೆದುರುಳಿಸಿತು.