ಜಲಂಧರ (ಪಂಜಾಬ) ಇಲ್ಲಿ ಗೋಹತ್ಯೆ ಮಾಡಿ ಎಸೆದ ಹಸುವಿನ ತಲೆ ಪತ್ತೆಯಾಗಿದ್ದರಿಂದ ಉದ್ವಿಘ್ನ !

ವಿಚಾರಣೆಯ ಆದೇಶ ನೀಡಿದ ಭಾವೀ ಮುಖ್ಯಮಂತ್ರಿ ಭಗವಂತ ಮಾನ !

ಸರಕಾರವು ಕೇವಲ ವಿಚಾರಣೆ ಮಾಡಿ ನಿಲ್ಲದೆ ಸಂಬಂಧಪಟ್ಟವರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಬೇಕು ! – ಸಂಪಾದಕರು

ಜಲಂಧರ (ಪಂಜಾಬ) – ಇಲ್ಲಿನ ವರಿಯಾಣಾ ಗ್ರಾಮದಲ್ಲಿ ೪ ಹಸುಗಳನ್ನು ಕೊಂದು ಅವುಗಳ ತಲೆಗಳನ್ನು ಎಸೆದಿರುವುದು ಪತ್ತೆಯಾಗಿದ್ದರಿಂದ ಬಿಗುವಿನ ವಾತಾವರಣ ನಿರ್ಮಣವಾಗಿದೆ. ಬಜರಂಗ ದಳ, ಶಿವಸೇನಾ ಹಾಗೂ ಹಿಂದು ಸಂಘಟನೆಗಳು ಇಲ್ಲಿ ರಸ್ತೆಯಲ್ಲಿ ಆಂದೋನಲ ಮಾಡಿದರು. ಅದಕ್ಕೆ ರಾಜ್ಯದ ಭಾವೀ ಮುಖ್ಯಮಂತ್ರಿಗಳಾದ ಭಗವಂತ ಮಾನರವರು ಗೋಹ್ಯತ್ಯೆಯ ಘಟನೆಯನ್ನು ನಿಷೇಧಿಸಿ ವಿಚಾರಣೆ ನಡೆಸಲು ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ನೀಡಿದರು. ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯದಲ್ಲಿನ ಹೊಶಿಯಾಪೂರನಲ್ಲಿ ೧೮ ಹಸುಗಳ ತಲೆ ಪತ್ತೆಯಾಗಿತ್ತು.