ಅಮೃತಸರದಲ್ಲಿ ಗಡಿ ಭದ್ರತಾ ದಳದ ಕೇಂದ್ರ ಕಚೇರಿಯಲ್ಲಿ ಓರ್ವ ಸೈನಿಕನಿಂದ ಸಹವರ್ತಿ ಸೈನಿಕರ ಮೇಲೆ ನಡೆಸಿರುವ ಗುಂಡಿನ ದಾಳಿಯಲ್ಲಿ ೪ ಜನ ಸೈನಿಕರು ಸಾವನ್ನಪ್ಪಿದ್ದರೆ ಇಬ್ಬರಿಗೆ ಗಾಯ

ಗುಂಡಿನ ದಾಳಿ ನಡೆಸಿದ ಸೈನಿಕನು ತನ್ನ ಮೇಲೆ ಗುಂಡು ಹಾರಿಸಿ ಆತ್ಮಹತ್ಯೆ

ಇಂತಹ ಘಟನೆಗಳನ್ನು ತಡೆಯಲಿಕ್ಕೆ ಸರಕಾರ ಯಾವ ಹೆಜ್ಜೆ ಇಡುವುದು ?

ಸಾಂಧರ್ಭಿಕ ಚಿತ್ರ

ಅಮೃತಸರ (ಪಂಜಾಬ) – ಇಲ್ಲಿಯ ಗಡಿ ಭದ್ರತಾ ದಳದ ಕೇಂದ್ರ ಕಚೇರಿಯಲ್ಲಿ ಮಾರ್ಚ್ ೬ ರಂದು ಬೆಳಿಗ್ಗೆ ಊಟದ ಕೋಣೆಯಲ್ಲಿ ೧೪೪ ಬಟಾಲಿಯನ್ ಸೈನಿಕರು ತಿಂಡಿ ತಿನ್ನುತ್ತಿದ್ದರು. ಆ ಸಮಯದಲ್ಲಿ ಓರ್ವ ಸೈನಿಕನು ಸಿಟ್ಟಿನಿಂದ ಮನಬಂದಂತೆ ಗುಂಡಿನ ದಾಳಿ ನಡೆಸಿದನು.

(ಸೌಜನ್ಯ : ND TV)

ಈ ಗುಂಡಿನ ದಾಳಿಯಲ್ಲಿ ೪ ಸೈನಿಕರು ಸಾವನ್ನಪ್ಪಿದ್ದರು ಹಾಗೂ ಇತರ ೨ ಸೈನಿಕರು ಗಾಯಗೊಂಡವರು. ನಂತರ ಗುಂಡಿನ ದಾಳಿ ನಡೆಸುವ ಸೈನಿಕನು ತನ್ನ ಮೇಲೆಯೂ ಗುಂಡುಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡನು. ಈ ಸೈನಿಕರಲ್ಲಿ ಪರಸ್ಪರರಲ್ಲೇ ಕೆಲಸದ ವಿಚಾರವಾಗಿ ವಾಗ್ವಾದ ನಡೆದಿತ್ತು.