ಪಟಿಯಾಲ (ಪಂಜಾಬ) ಇಲ್ಲಿಯ ಗುರು ಕಿ ಸರಾಯ ಎಂಬ ಸಿಖ್ ಧಾರ್ಮಿಕ ಸ್ಥಳವನ್ನು ಮಸಿದಿಯಾಗಿಸಿರುವ ಅನುಮಾನ !

ಪಟಿಯಾಲಾ (ಪಂಜಾಬ) – ಇಲ್ಲಿಯ ಗುಜರಾನವಾಲಾ ಭಾಗದಲ್ಲಿ ಗುರು ಕಿ ಸರಾಯ ಎಂಬ ಧಾರ್ಮಿಕ ಸ್ಥಳವನ್ನು ಮಸೀದಿಯಾಗಿ ರೂಪಾಂತರಿಸಲಾಗಿದೆ ಎಂದು ಆರೋಪ ಹಿಂದೂಗಳಿಂದ ಮಾಡಲಾಗಿದೆ,ಆದರೆ ಮುಸಲ್ಮಾನರ ಹೇಳಿಕೆಯ ಪ್ರಕಾರ, ೭೫ ವರ್ಷಗಳ ಹಿಂದೆ ಇಲ್ಲಿ ಮಸೀದಿ ಇತ್ತು, ಈಗ ಕೇವಲ ಅದಕ್ಕೆ ಹೊಸ ಸ್ವರೂಪ ನೀಡಲಾಗಿದೆ.

೧. ಹಿಂದೂಗಳ ಪ್ರಕಾರ, ವಿಭಜನೆಯ ಮೊದಲು ಇಲ್ಲಿ ಸಿಖ್ ಪರಿವಾರಗಳು ನೆಲೆಸಿದ್ದವು ಮತ್ತು ಅವರು ಈ ಸ್ಥಳದ ಉಸ್ತುವಾರಿ ನಡೆಸುತ್ತಿದ್ದರು. ಆ ಪರಿವಾರಗಳನ್ನು ಮುಸಲ್ಮಾನರು ಬೆದರಿಸಿ ಓಡಿಸಿದರು ಮತ್ತು ಆ ಜಾಗವನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡರು. ಕೆಲವು ಕಾಲದ ನಂತರ ಅಲ್ಲಿ ಮಸೀದಿ ಕಟ್ಟಿದರು. ಮೊದಲು ಅಲ್ಲಿ ಸಿಖ್ಖರ ಪವಿತ್ರ ಚಿಹ್ನೆಗಳನ್ನು ತೆರವುಗೊಳಿಸಿ ಇಸ್ಲಾಮಿ ಚಿಹ್ನೆಗಳನ್ನು ಅಳವಡಿಸಲಾಯಿತು.

೨. ಈ ವಾದ ನ್ಯಾಯಾಲಯಕ್ಕೆ ಹೋಗಿರುವುದರಿಂದ, ೨೦೧೭ ರಲ್ಲಿ ಮುಸಲ್ಮಾನರು ಇದು ಅವರ ಜಾಗವೆಂದು ಸಾಬೀತುಪಡಿಸಲು ವಿಫಲರಾದರು. ಆದ್ದರಿಂದ ನ್ಯಾಯಾಲಯವು ಅದರ ನಂತರ ಸಿಖ್ಖರ ಪರವಾಗಿ ನಿರ್ಣಯ ನೀಡಿತ್ತು. ಆದರೂ ಕೂಡ ಅಲ್ಲಿ ಈಗಲು ನಮಾಜ ಪಠಿಸಲಾಗುತ್ತದೆ. (ನ್ಯಾಯಾಲಯ ಆದೇಶ ನೀಡಿದ್ದರೂ, ಅದನ್ನು ಪಾಲಿಸದೇ ಇರುವವರು ಮೇಲೆ ಸರಕಾರ ಯಾವ ಕ್ರಮ ಕೈಗೊಳ್ಳಬೇಕು ? – ಸಂಪಾದಕರು)

೩. ಈ ವಿಷಯವಾಗಿ ಗುಜರಾನವಾಲಾ ಮಸೀದಿಯ ಅಧ್ಯಕ್ಷ ಅತರ್ ಹುಸೇನ್ ಎಂಬವರು ‘ಇದಕ್ಕೆ ಸಂಬಂಧಿಸಿದ ನಮ್ಮ ದಾಖಲೆಗಳನ್ನು ಉಪವಿಭಾಗಾಧಿಕಾರಿಗಳ ಕಡೆಗೆ ಒಪ್ಪಿಸಿದ್ದೇವೆ’ ಎಂದಿದ್ದಾರೆ.

೪. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮೇ ೯ ರಂದು ಎರಡು ಪಕ್ಷಗಳನ್ನೂ ದಾಖಲೆಗಳ ಸಹಿತ ಚರ್ಚೆಗಾಗಿ ಕರೆದಿದ್ದಾರೆ.