ಉತ್ತರಪ್ರದೇಶದಲ್ಲಿನ ರಾ. ಸ್ವ ಸಂಘದ ಕಾರ್ಯಾಲಯವನ್ನು ಬಾಂಬ್‌ನಿಂದ ಹಾರಿಸುವುದಾಗಿ ಬೆದರಿಕೆ ಹಾಕಿದ್ದ ರಾಜ ಮಹಮ್ಮದನ ಬಂಧನ

ಉತ್ತರಪ್ರದೇಶದಲ್ಲಿನ ಲಕ್ಷ್ಮಣಪುರಿ ಹಾಗೂ ಉನ್ನಾವಿನ ನಡುವಿನಲ್ಲಿರುವ ನವಾಬಗಂಜದಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯವನ್ನು ಬಾಂಬನಿಂದ ಹಾರಿಸುವುದಾಗಿ ಬೆದರಿಸಿದ ಪ್ರಕರಣದಲ್ಲಿ ಪೊಲೀಸರು ತಮಿಳುನಾಡಿನ ಪುದುಕೊಟ್ಟಾಯಿಯಿಂದ ರಾಜ ಮಹಮ್ಮದನನ್ನು ಬಂಧಿಸಿದ್ದಾರೆ.

ತಮಿಳುನಾಡು ಪೊಲೀಸರಿಂದ ೫೦೦ ವರ್ಷ ಪ್ರಾಚೀನ ವಿಗ್ರಹ ವಶ

ಪೊನಾಮಲ್ಲೆ ಪಟ್ಟಣದ ಬಳಿ ೫೦೦ ವರ್ಷಗಳಷ್ಟು ಹಳೆಯದಾದ ಹಸಿರು ಕಲ್ಲಿನಿಂದ ತಯಾರಿಸಿದ ವಿಗ್ರಹವನ್ನು ಪೊಲೀಸರ ‘ವಿಗ್ರಹ ಇಲಾಖೆ’ ವಶಪಡಿಸಿಕೊಂಡಿದೆ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಕ್ತವಾಚಲಂ ಮತ್ತು ಬಕಿಯಾರಾಜ ಎಂಬಿಬ್ಬರನ್ನು ಬಂಧಿಸಿದೆ.

ಹಿಂದಿ ಭಾಷೆಗಿಂತ ಇಂಗ್ಲಿಷ್ ಗೆ ಹೆಚ್ಚು ಬೆಲೆಯಿದೆ ! – ತಮಿಳುನಾಡಿನ ಶಿಕ್ಷಣ ಸಚಿವರು

ಹಿಂದಿ ಭಾಷೆಗಿಂತ ಇಂಗ್ಲಿಷ್ ಭಾಷೆಗೆ ಹೆಚ್ಚು ಬೆಲೆಯಿದೆ, ಆದ್ದರಿಂದ ಹಿಂದಿ ಇದು ಐಚ್ಛಿಕವಾಗಬೇಕು. ಆದರೆ ಅನಿವಾರ್ಯ ಆಗಬಾರದು. ಯಾರು ಹಿಂದಿ ಮಾತನಾಡುತ್ತಾರೆ, ಅವರು ಕ್ಷುಲ್ಲಕ ಕೆಲಸದಲ್ಲಿದ್ದಾರೆ (ನೌಕರಿ). ಹಿಂದಿ ಮಾತನಾಡುವ ಜನರು ನಮ್ಮ ಕಡೆ ಪಾನಿಪುರಿ ಮಾರುತ್ತಾರೆ, ಎಂಬ ಸಂತಾಪಜನಕ ಹೇಳಿಕೆ ತಮಿಳುನಾಡಿನ ಶಿಕ್ಷಣ ಸಚಿವರು ಪೋನಮುಡಿ ನೀಡಿದರು.

ಮದುರೈಯ ಪಟ್ಟಿನಪ್ರವೇಶಂ ಪಲಕ್ಕಿ ಯಾತ್ರೆಗೆ ಅನುಮತಿ !

ತಮಿಳುನಾಡಿನ ಮದುರೈಯ ಧರ್ಮಪುರಂ ಅಧೀನಮ್ ಪಟ್ಟಿನಪ್ರವೇಶಂ ಎಂಬ ಪಲಕ್ಕಿ ಯಾತ್ರೆಗೆ ಅನುಮತಿ ನಿರಾಕರಿಸುವ ಆದೇಶವನ್ನು ತಮಿಳುನಾಡಿನ ದ್ರಮುಕ (ದ್ರಾವಿಡ ಮುನ್ನೇತ್ರ ಕಳಗಂ) ಸರಕಾರ ಹಿಂಪಡೆದಿದೆ. ಇದಕ್ಕೂ ಮೊದಲು ಮಹಿಲಾದೂಥರಾಯಿ ಕಂದಾಯ ಇಲಾಖೆ ಅಧಿಕಾರಿ ಜೆ ಬಾಲಾಜಿ ಇವರು ಅನುಮತಿಯನ್ನು ನಿರಾಕರಿಸಿದ್ದರು.

ಸರಕಾರಿ ಶಾಲೆಗಳಲ್ಲಿ ನಡೆಯುವ ಮತಾಂತರದ ಬಗ್ಗೆ ಮಾರ್ಗಸೂಚಿಯನ್ನು ಏಕೆ ಸಿದ್ಧಪಡಿಸಲಿಲ್ಲ ?

ತಮಿಳುನಾಡಿನ ದ್ರಮುಕ ಸರಕಾರವು ಹಿಂದೂ ವಿರೋಧಿಯಾಗಿದ್ದರಿಂದ ಅದು ಎಷ್ಟು ಸತ್ಯವಾದ ಮಾಹಿತಿಯನ್ನು ನೀಡುವುದು ಎಂಬುದರ ಬಗ್ಗೆಯೇ ಸಂದೇಹವಿದೆ. ಆದುದರಿಂದ ಈಗ ಕೇಂದ್ರ ಸರಕಾರವೇ ಈ ಎಲ್ಲವುಗಳ ವಿಚಾರಣೆ ನಡೆಸಿ ಸತ್ಯವನ್ನು ಜನತೆಯ ಎದುರು ತರಬೇಕಿದೆ !

ತಮಿಳುನಾಡುನಲ್ಲಿ ರಥಯಾತ್ರೆಯ ಸಮಯದಲ್ಲಿ ವಿದ್ಯುತ್ ಅವಘಡದಿಂದ ೧೧ ಜನರ ಸಾವು ಮತ್ತು ೧೫ ಜನರಿಗೆ ಗಾಯ

ಲ್ಲಿಯ ಒಂದು ಧಾರ್ಮಿಕ ರಥಯಾತ್ರೆಯ ಸಮಯದಲ್ಲಿ ನಡೆದಿರುವ ಅಪಘಾತದಲ್ಲಿ ೧೧ ಜನರು ಸಾವನ್ನಪ್ಪಿದ್ದಾರೆ ಮತ್ತು ೧೫ ಜನರು ಗಾಯಗೊಂಡಿದ್ದಾರೆ. ಈ ಘಟನೆ ಬೆಳಿಗ್ಗಿನ ಜಾವ ೩ ಗಂಟೆಯ ಸಮಯದಲ್ಲಿ ನಡೆದಿದೆ. ರಥಯಾತ್ರೆಯಲ್ಲಿ ರಥದ ಕಳಸ ವಿದ್ಯುತ್ ತಂತಿಗೆ ತಾಗಿದ್ದರಿಂದ ಈ ಘಟನೆ ನಡೆದಿದೆ. ಈ ಅವಘಡದಲ್ಲಿ ೭ ಜನರು ಸಾವನ್ನಪ್ಪಿದ್ದರೆ, ೪ ಜನರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು.

ಜಾತ್ಯತೀತ ಭಾರತದಲ್ಲಿ ತಮಿಳು ನಾಡಿನಲ್ಲಿ ಶಿಕ್ಷಣದ ಹೆಸರಿನಲ್ಲಿ ಕ್ರೈಸ್ತ ಪಂಥದ ಪ್ರಸಾರ !

ದಕ್ಷಿಣ ಭಾರತದಲ್ಲಿ ಹಿಂದೂಗಳ ಮತಾಂತರದ ಪ್ರಕರಣಗಳು ಈಗ ನಿತ್ಯದ ವಿಷಯವಾಗಿದೆ. ಕ್ರೈಸ್ತರಿಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಹಿಂದೂಗಳ ಮತಾಂತರ ಮಾಡುವ ಕೇಂದ್ರಗಳಾಗಿವೆ. ಅಲ್ಲೇ ತಮಿಳುನಾಡಿನಲ್ಲಿ ಹಿಂದೂ ವಿರೋಧಿ ಷಡ್ಯಂತ್ರ ತಾರಕ್ಕೇರಿದೆ.

‘ನನಗೆ ರಾಮ ಪರಿಚಯವಿಲ್ಲ ಮತ್ತು ರಾಜ್ಯದಲ್ಲಿ ರಾಮನ ದೇವಸ್ಥಾನವೂ ಇಲ್ಲ !’ (ಅಂತೆ)

ತಮಿಳುನಾಡಿನಲ್ಲಿರುವ ಕಾಂಗ್ರೆಸ್ಸಿನ ಮಹಿಳಾ ಶಾಸಕಿಯಾದ ಜ್ಯೋತಿಮಣಿಯವರು ‘ನನಗೆ ಭಗವಾನ ರಾಮನ ಪರಿಚಯವಿಲ್ಲ ಮತ್ತು ರಾಜ್ಯದಲ್ಲಿ ರಾಮನ ದೇವಸ್ಥಾನವೂ ಇಲ್ಲ’ ಎಂಬಂತಹ ಹೇಳಿಕೆಯನ್ನು ನೀಡಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗಿದೆ.

ಕನ್ಯಾಕುಮಾರಿಯಲ್ಲಿ ಶಾಲಾ ವಿದ್ಯಾರ್ಥಿಗಳ ಮತಾಂತರಕ್ಕೆ ಯತ್ನಿಸಿದ ಕ್ರೈಸ್ತ ಶಿಕ್ಷಕಿ ಅಮಾನತು

ಕನ್ನಟ್ಟುವಿಳೈ ಸರಕಾರಿ ಪ್ರೌಢಶಾಲೆಯಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಿ ಮತಾಂತರಕ್ಕೆ ಯತ್ನಿಸಿದ ಶಿಕ್ಷಕಿಯ ವಿರುದ್ಧ ೬ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ಪೋಷಕರು ಮುಖ್ಯೋಪಾಧ್ಯಾಯರಿಗೆ ದೂರು ನೀಡಿದ್ದಾರೆ.

ಚೆನ್ನೈಯಲ್ಲಿರುವ ‘ಅಯೋಧ್ಯಾ ಮಂಡಪಮ್‌’ ಎಂಬ ಧಾರ್ಮಿಕ ಸ್ಥಳದ ಸರಕಾರೀಕರಣ !

ತಮಿಳುನಾಡು ಸರಕಾರದ ಧಾರ್ಮಿಕ ದತ್ತಿ ವಿಭಾಗವು ಚೆನ್ನೈಯಲ್ಲಿರುವ ಪಶ್ಚಿಮ ಮಾಂಬಲಮ್‌ನಲ್ಲಿರುವ ‘ಅಯೋಧ್ಯಾ ಮಂಡಪಮ್‌’ವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ೬೪ ವರ್ಷ ಹಳೆದಾದ ಈ ಧಾರ್ಮಿಕ ಸ್ಥಳಕ್ಕೆ ‘ಅಯೋಧ್ಯಾ ಅಶ್ವಮೇಧ ಮಹಾ ಮಂಡಪಮ್‌’ ಎಂದು ಕರೆಯಲಾಗುತ್ತದೆ.