ಒಳ್ಳೆಯ ಅಂಕ ಪಡೆಯಲು ಯೇಸುವನ್ನು ಆರಾಧಿಸಲು ವಿದ್ಯಾರ್ಥಿಗಳಿಗೆ ಒತ್ತಾಯ !
ಚೆನ್ನೈ (ತಮಿಳುನಾಡು) – ದಕ್ಷಿಣ ಭಾರತದಲ್ಲಿ ಹಿಂದೂಗಳ ಮತಾಂತರದ ಪ್ರಕರಣಗಳು ಈಗ ನಿತ್ಯದ ವಿಷಯವಾಗಿದೆ. ಕ್ರೈಸ್ತರಿಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಹಿಂದೂಗಳ ಮತಾಂತರ ಮಾಡುವ ಕೇಂದ್ರಗಳಾಗಿವೆ. ಅಲ್ಲೇ ತಮಿಳುನಾಡಿನಲ್ಲಿ ಹಿಂದೂ ವಿರೋಧಿ ಷಡ್ಯಂತ್ರ ತಾರಕ್ಕೇರಿದೆ. ರಾಜ್ಯದಲ್ಲಿ ಶಿಕ್ಷಣದ ಹೆಸರಿನಲ್ಲಿ ಕ್ರೈಸ್ತ ಪಂಥದ ಪ್ರಚಾರ ರಾಜಾರೋಷವಾಗಿ ನಡೆಯುತ್ತಿದೆ. ‘ಒಳ್ಳೆಯ ಅಂಕ ಪಡೆಯಲು ಯೇಸುವಿನ ಆರಾಧನೆ ಮಾಡಿ. ಹಿಂದೂ ಸೈತಾನ’ ಎಂದು ಹೇಳಿ ವಿದ್ಯಾರ್ಥಿಗಳನ್ನು ಗುರಿಪಡಿಸಲಾಗುತ್ತಿದೆ. ರಾಜ್ಯದ ತಿರುನೆಲ್ವೇಲಿಯಲ್ಲಿ ರಂಜನ (ಹೆಸರು ಬದಲಾಯಿಸಲಾಗಿದೆ) ಇವನು ಈ ಮತಾಂತರ ಪ್ರಕರಣದ ಮಾಹಿತಿ ನ್ಯೂಸ್ ೧೮ ಸಮಾಚಾರ ವಾಹಿನಿಗೆ ನೀಡಿದ್ದಾರೆ.
೩೦ ವಯಸ್ಸಿನ ರಂಜನ್ ಹೇಳಿದ್ದೇನೆಂದರೆ, ಶಾಲೆಯಲ್ಲಿ ಅವರಿಗೆ ಒಳ್ಳೆಯ ಅಂಕ ಗಳಿಸಲು ಯೇಸುವಿನ ಆರಾಧನೆ ಮಾಡುವ ಸಲಹೆ ನೀಡಲಾಗಿತ್ತು. ‘ಅವರು ಯೇಸುವನ್ನು ಬಿಟ್ಟು ಬೇರೆ ಯಾವುದೇ ದೇವರ ಉಪಾಸನೆ ಮಾಡಬಾರದು. ಇದರಿಂದ ಅವರಿಗೆ ಯಾವುದೇ ಶಾರೀರಿಕ ಸಮಸ್ಯೆ ಉದ್ಭವಿಸುವುದಿಲ್ಲ ಮತ್ತು ಅವರು ಜೀವನದಲ್ಲಿ ಯಾವುದೇ ಕ್ಷೇತ್ರದಲ್ಲಿ ಎಂದು ಪರಾಭವಗೊಳ್ಳುವುದಿಲ್ಲ”. ರಂಜನ್ ಅವರ ತಂದೆ ಹೇಳಿದ್ದು, ಯಾವಾಗ ಅವರಿಗೆ ಈ ಘಟನೆಯ ಮಾಹಿತಿ ಸಿಕ್ಕಿತು, ಆಗ ಅವರು ತಕ್ಷಣ ಅವರ ಮಗನನ್ನು ಶಾಲೆಯಿಂದ ಬಿಡಿಸಿ ಬೇರೆ ಶಾಲೆಗೆ ಸೇರಿಸಿದರು. ಈ ಪ್ರಕರಣದಲ್ಲಿ ಅವರು ಮೊದಲೇ ಶಾಲೆಯ ಆಡಳಿತಕ್ಕೆ ದೂರು ನೀಡಿದ್ದರು. ಆದರೆ ಯಾರೂ ಗಂಭೀರವಾಗಿ ಕ್ರಮ ಕೈಗೊಳ್ಳಲಿಲ್ಲ.
ಕೆಲವು ದಿನಗಳ ಮೊದಲು ಕನ್ಯಾಕುಮಾರಿಯಲ್ಲಿ ಒಂದು ಶಾಲೆಯ ೬ ನೇ ತರಗತಿಯ ವಿದ್ಯಾರ್ಥಿನಿ ಶಾಲೆಯ ಆಡಳಿತದ ಹತ್ತಿರ ದೂರು ದಾಖಲಿಸಿದ್ದು ಆದರೆ ಆಕೆಯ ಶಾಲೆಯ ಒಬ್ಬ ಶಿಕ್ಷಕ ಆಕೆಯ ಮತ್ತು ಆಕೆಯ ಸಹಪಾಠಿಗಳಿಗೆ ಬೈಬಲ್ ಓದಲು ಹೇಳಿದರು ಮತ್ತು ಹಿಂದೂಗಳ ದೇವತೆಗಳ ಮೂರ್ತಿ ಅಂದರೆ ಸೈತಾನನೆಂದು ಹೇಳಿದರು. ಈ ಘಟನೆಯ ಬಗ್ಗೆ ಪ್ರಸಾರ ಮಾಧ್ಯಮದಲ್ಲಿ ಪ್ರಸಾರವಾದ ನಂತರ ಆ ಶಿಕ್ಷಕನನ್ನು ಶಾಲೆಯಿಂದ ಅಮಾನತುಗೊಳಿಸಲಾಯಿತು. ನ್ಯೂಸ್ ೧೮ ಸಮಾಚಾರ ವಾಹಿನಿಯ ಈ ವಿಶೇಷ ವರದಿಯ ಪ್ರಕಾರ ಶಿಕ್ಷಣದ ಹೆಸರಿನಲ್ಲಿ ಧರ್ಮದ ಪ್ರಚಾರ ಇದು ಕೇವಲ ಶಾಲೆಗೆ ಅಷ್ಟೇ ಸೀಮಿತವಾಗಿರುವುದಿಲ್ಲ. ಮನೆ ಪಾಠದ ವರ್ಗಗಳಲ್ಲಿಯೂ ಇದು ನಡೆಯುತ್ತದೆ. ಮತಾಂತರದ ವಿರುದ್ಧ ಕೆಲಸ ಮಾಡುವ ಭಾಸ್ಕರ ಎಂಬವರು ‘ಪ್ರತಿ ವಾರ ಅವರ ಹತ್ತಿರ ಮತಾಂತರದ ಕನಿಷ್ಠ 2 /೩ ಪ್ರಕರಣಗಳು ಬರುತ್ತವೆ’ ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.