ಮಣಿಪುರದಲ್ಲಿ ಸೇನಾ ನೆಲೆಯ ಮೇಲೆ ಜನಸಮೂಹದಿಂದ ದಾಳಿ ಮತ್ತು ಶಸ್ತ್ರಾಸ್ತ್ರ ದೋಚುವ ಪ್ರಯತ್ನ !

ನೂರಾರು ಜನರ ಗುಂಪು ‘ಇಂಡಿಯನ್ ರಿಸರ್ವ್ ಬೆಟಾಲಿಯನ್” ನೆಲೆಯ ಮೇಲೆ ದಾಳಿ ಮಾಡಿ ಅಲ್ಲಿನ ಶಸ್ತ್ರಾಸ್ತ್ರಗಳನ್ನು ದೋಚಲು ಪ್ರಯತ್ನಿಸಲಾಯಿತು; ಆದರೆ ಬೆಟಾಲಿಯನ್ ಸೈನಿಕರು ಪ್ರತಿಕಾರ ಮಾಡುತ್ತಾ ಆ ಗುಂಪನ್ನು ತಡೆದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ವ್ಯಕ್ತಿಯು ಸಾವನ್ನಪ್ಪಿದನು.

ಕುಕಿ ಕ್ರೈಸ್ತರ ಗುಂಡಿನ ದಾಳಿಗೆ ೩ ಮೈತೇಈ ಹಿಂದೂಗಳ ಸಾವು !

ಮಣಿಪುರದಲ್ಲಿ ಕಳೆದ ೨ ತಿಂಗಳಿಂದ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಲಾಗದ ಸ್ಥಿತಿ, ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ !

ಮಣಿಪುರದ ಗಲಭೆ ಪೀಡಿತ ಪ್ರದೇಶಗಳಿಗೆ ಹೋಗುತ್ತಿದ್ದ ರಾಹುಲ್ ಗಾಂಧಿಗೆ ಪೊಲೀಸರಿಂದ ತಡೆ

ಸುಮಾರು ೨ ತಿಂಗಳಿನಿಂದ ಗಲಭೆ ನಡೆಯುತ್ತಿರುವ ಮಣಿಪುರದಲ್ಲಿ ೨ ದಿನಗಳ ಪ್ರವಾಸಕ್ಕೆ ತೆರಳಲಿದ್ದ ರಾಹುಲ್ ಗಾಂಧಿಯವರನ್ನು ಇಂಫಾಲ್ ಬಳಿ ಪೊಲೀಸರು ತಡೆದಿದ್ದಾರೆ. ಇಲ್ಲಿಂದ ೨೦ ಕಿ.ಮೀ ದೂರದಲ್ಲಿರುವ ವಿಷ್ಣುಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಭೆಯ ಹಿನ್ನೆಲೆಯಲ್ಲಿ ಪೊಲೀಸರು ರಾಹುಲ್ ಗಾಂಧಿಯವರನ್ನು ಮುಂದೆ ಹೋಗಲು ಬಿಡಲಿಲ್ಲ.

ಮಣಿಪುರದಲ್ಲಿ ಹಿಂಸಾಚಾರ ನಡೆಸುವವರಿಂದ ರಾಜಾರೋಷವಾಗಿ ನಿಷೇಧಿತ ಚೀನಾದ ಬೈಕಗಳ ಉಪಯೋಗ

ನಡೆಯುತ್ತಿರುವ ಹಿಂಸಾಚಾರದಲ್ಲಿ ನಿಷೇಧಿತ ಚೀನಾದ ‘ಕೆನಬೋ ಬೈಕ್’ಅನ್ನು ರಾಜಾರೋಷವಾಗಿ ಉಪಯೋಗಿಸಲಾಗುತ್ತಿದೆ. ಉಖರುಲ್ ಮತ್ತು ಕಮಜಾಂಗ್ ಈ ಹಿಂಸಾಚಾರ ಪೀಡಿತ ಗುಡ್ಡಗಾಡ ಜಿಲ್ಲೆಯಲ್ಲಿ ಈ ವಾಹನಗಳ ಉಪಯೋಗ ಆಗುತ್ತಿರುವುದು ಕಂಡು ಬಂದಿದೆ. ವಿಶೇಷ ಗಮನ ನೀಡುವ ಅವಶ್ಯಕತೆ ಇಲ್ಲದಿರುವ ಈ ಬೈಕ್ ಕೇವಲ ೨೫ ಸಾವಿರ ರೂಪಾಯಿಗೆ ದೊರೆಯುತ್ತದೆ.

ಮಣಿಪುರದಲ್ಲಿ ಸಮೂಹದ ಒತ್ತಡದಿಂದ ಬಂಧಿಸಿದ್ದ ನಿಷೇಧಿತ ಸಂಘಟನೆಯ ೧೨ ಜನರ ಬಿಡುಗಡೆ !

ಮಣಿಪುರದಲ್ಲಿ ಇಲ್ಲಿಯವರೆಗೆ ೧೨೦ ಜನರು ಸಾವನ್ನಪ್ಪಿದ್ದಾರೆ ಹಾಗೂ ೩ ಸಾವಿರಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.

ಹಿಂಸಾಚಾರ ನಿಲ್ಲಿಸಿ, ಇಲ್ಲದಿದ್ದರೆ ಪರಿಣಾಮವನ್ನು ಎದುರಿಸಿ !

ಹಿಂಸಾಚಾರ ನಿಲ್ಲಿಸಿ, ಇಲ್ಲದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿ, ಎಂದು ಮಣಿಪುರದ ಮುಖ್ಯಮಂತ್ರಿ ಬೀರೇನ ಸಿಂಹ ಇವರು ಹಿಂಸಾಚಾರ ನಡೆಸುವವರಿಗೆ ಎಚ್ಚರಿಕೆ ನೀಡಿದ್ದಾರೆ.

ಮಣಿಪುರದಲ್ಲಿ ಕೇಂದ್ರಿಯ ರಾಜ್ಯಮಂತ್ರಿ ರಾಜಕುಮಾರ ರಂಜನ‌ರ ಮನೆಗೆ ಬೆಂಕಿ ಹಚ್ಚಿದ ಕುಕಿ ಕ್ರೈಸ್ತರು !

ಮಣಿಪುರದಲ್ಲಿ ಹಿಂದೂ ಮೈತೇಈ ಸಮಾಜದ ಮೇಲಾಗುತ್ತಿರುವ ಹಲ್ಲೆಗಳು ಇನ್ನೂ ಮುಂದುವರೆದಿದ್ದು, ಜೂನ್ ೧೫ ರ ರಾತ್ರಿ ಕುಕಿ ಕ್ರೈಸ್ತರ ಗುಂಪೊಂದು ಕೇಂದ್ರಿಯ ರಾಜ್ಯಮಂತ್ರಿ ರಾಜಕುಮಾರ ರಂಜನ ಸಿಂಗ್ ಅವರ ಮನೆಯ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದೆ.

ಮ್ಯಾನ್ಮಾರ್‌ನಿಂದ ಮಣಿಪುರಕ್ಕೆ ನುಗ್ಗಿದ ೩೦೦ ಸಶಸ್ತ್ರ ಭಯೋತ್ಪಾದಕರು

ಅವುಗಳನ್ನು ಪತ್ತೆ ಹಚ್ಚಲು ಭದ್ರತಾ ವ್ಯವಸ್ಥೆಗಳು ಡ್ರೋನ್‌ಗಳನ್ನು ಬಳಸುತ್ತಿವೆ.

ಮಣಿಪುರದಲ್ಲಿ ಇದುವರೆಗೆ ೯೦೦ ಶಸ್ತ್ರಾಸ್ತ್ರಗಳು ವಶ

ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರದ ನಂತರ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಇದುವರೆಗೆ ಒಟ್ಟು ೯೦೦ ಶಸ್ತ್ರಾಸ್ತ್ರಗಳು ಮತ್ತು ೧೧ ಸಾವಿರದ ೫೧೮ ನಾಡು ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಣಿಪುರದಲ್ಲಿ ಹಿಂಸಾಚಾರ ಮುಂದುವರಿಕೆ !

ಮಣಿಪುರದಲ್ಲಿ ಕಳೆದ ತಿಂಗಳಿನಿಂದ ಪ್ರಾರಂಭವಾಗಿರುವ ಹಿಂಸಾಚಾರ ನಿಂತಿಲ್ಲ. ಕೇಂದ್ರ ಗೃಹಸಚಿವ ಅಮಿತ ಶಹಾ ಇವರ ಪ್ರವಾಸದ ಬಳಿಕವೂ ಇಲ್ಲಿ ಹಿಂಸಾಚಾರ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಮೈತೇಯಿ ಮತ್ತು ಕುಕಿ ಪಂಗಡದವರ ಗ್ರಾಮಗಳಲ್ಲಿ ನಡೆದ ಆಕ್ರಮಣದಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ.