ಹಿಂಸಾಚಾರ ನಿಲ್ಲಿಸಿ, ಇಲ್ಲದಿದ್ದರೆ ಪರಿಣಾಮವನ್ನು ಎದುರಿಸಿ !

ಮಣಿಪುರದ ಮುಖ್ಯಮಂತ್ರಿಯವರ ಎಚ್ಚರಿಕೆ !

ಇಂಫಾಲ (ಮಣಿಪುರ) – ಹಿಂಸಾಚಾರ ನಿಲ್ಲಿಸಿ, ಇಲ್ಲದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿ, ಎಂದು ಮಣಿಪುರದ ಮುಖ್ಯಮಂತ್ರಿ ಬೀರೇನ ಸಿಂಹ ಇವರು ಹಿಂಸಾಚಾರ ನಡೆಸುವವರಿಗೆ ಎಚ್ಚರಿಕೆ ನೀಡಿದ್ದಾರೆ. ಅವರು ಹಿಂಸಾಚಾರದಲ್ಲಿನ ಸಂತ್ರಸ್ಥರನ್ನು ಭೇಟಿಯಾದ ನಂತರ ಅವರು ಮಾತನಾಡುತ್ತಿದ್ದರು.

೧. ಮುಖ್ಯಮಂತ್ರಿ ಬೇರೇನ ಸಿಂಹ ಇವರು ಮಾತು ಮುಂದುವರಿಸುತ್ತಾ, ನಾನು ಸಶಸ್ತ್ರ ಮೇಯಿತೇಯಿ ಜನರಿಗೆ ಕರೆ ನೀಡುತ್ತೇನೆ, ಅವರು ಯಾರ ಮೇಲೆ ಕೂಡ ದಾಳಿ ನಡೆಸಬಾರದು ಮತ್ತು ಶಾಂತಿ ಕಾಪಾಡಬೇಕು, ಆಗಲೇ ರಾಜ್ಯದ ಪರಿಸ್ಥಿತಿ ಮೊದಲಿನಂತೆ ಆಗಬಹುದು, ಎಂದರು

೨. ಸಂತ್ರಸ್ಥರ ಭೇಟಿ ಮಾಡಿದ ನಂತರ ಮುಖ್ಯಮಂತ್ರಿಯ ಬೇರೇನ ಸಿಂಹ ಇವರು, ನಾನು ಕೆಲವು ಸಹಾಯ ಡೇರೆಗಳಿಗೆ ಭೇಟಿ ನೀಡಿದ್ದೇನೆ; ಆದರೆ ಈಗಲೂ ಅನೇಕ ಜನರು ಸಂತ್ರಸ್ತರಾಗಿದ್ದಾರೆ. ಸರಕಾರ ಅವರಿಗಾಗಿ ಮನೆ ಕಟ್ಟಿಕೊಡುವುದು. ಸುಮಾರು ೪ ಸಾವಿರ ಮನೆಗಳನ್ನು ಕಟ್ಟಲಾಗುವುದೆಂದೂ ಅವರು ಹೇಳಿದರು.