ಮಣಿಪುರದಲ್ಲಿ ಸಮೂಹದ ಒತ್ತಡದಿಂದ ಬಂಧಿಸಿದ್ದ ನಿಷೇಧಿತ ಸಂಘಟನೆಯ ೧೨ ಜನರ ಬಿಡುಗಡೆ !

ಇಂಪಾಲ (ಮಣಿಪುರ) – ಮಣಿಪುರದಲ್ಲಿ ಕಳೆದ ೫೪ ದಿನಗಳಿಂದ ಹಿಂಸಾಚಾರ ನಡೆಯುತ್ತಲೇ ಇದೆ. ಜೂನ್ ೨೪ ರಂದು ೧ ಸಾವಿರ ೨೦೦ ಕ್ಕಿಂತಲೂ ಹೆಚ್ಚಿನ ಸ್ಥಳೀಯ ಮಹಿಳೆಯರು ಭದ್ರತಾ ಪಡೆಯ ವಶದಲ್ಲಿರುವ ‘ಕಾಂಗಲೆಯಿ ಯಾವೊಲ್ ಕನ್ನ ಲುಪ ‘(ಕೆ.ವೈ.ಕೆ.ಎಲ್.) ಈ ಸಂಘಟನೆಯ ೧೨ ಜನರನ್ನು ಬಿಡುಗಡೆ ಮಾಡಿಸಿದ್ದಾರೆ. ಹಾಗೂ ಅವರ ಒತ್ತಡದಿಂದ ಭದ್ರತಾ ಪಡೆಯ ಶೋಧ ಅಭಿಯಾನ ಕೂಡ ನಿಲ್ಲಿಸಲಾಗಿದೆ. ಈ ಸಮಯದಲ್ಲಿ ಮಹಿಳೆಯರಿಗೆ ತೊಂದರೆ ಆಗಬಾರದೆಂದು ಭದ್ರತಾ ಪಡೆಯು ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೆ.ವೈ.ಕೆ.ಎಲ್. ಈ ಸಂಘಟನೆಯನ್ನು ನಿಷೇಧಿಸಲಾಗಿದೆ. ರಕ್ಷಣೆ ಇಲಾಖೆಯ ಜನಸಂಪರ್ಕ ಅಧಿಕಾರಿಗಳು, ಇಥಮ ಗ್ರಾಮದಲ್ಲಿ ಬೇಹುಗಾರಿಕೆಯ ಮಾಹಿತಿಯ ನಂತರ ಸೈನ್ಯದಿಂದ ಶೋಧ ಅಭಿಯಾನ ಮುಂದುವರೆಸಿದ್ದರು. ಜನರಿಗೆ ಯಾವುದೇ ರೀತಿ ಅಡಚಣೆ ಬರಬಾರದೆಂದು ಸಂಪೂರ್ಣ ಪರಿಸರ ಪ್ರತಿಬಂಧಿಸಲಾಗಿದೆ. ಭದ್ರತಾ ಪಡೆಯು ಇಲ್ಲಿ ಬೃಹತ್ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ವಶಪಡಿಸಿಕೊಂಡಿದೆ ಹಾಗೂ ಕೆ.ವೈ.ಕೆ.ಎಲ್. ನ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದರ ಮಾಹಿತಿ ದೊರೆತನಂತರ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಅಲ್ಲಿಗೆ ತಲುಪಿ ಸೈನ್ಯದ ಮೇಲೆ ಒತ್ತಡ ಹೇರಿ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲು ಅನಿವಾರ್ಯಗೊಳಿಸಿದ್ದಾರೆ.

ಮಣಿಪುರದಲ್ಲಿ ಇಲ್ಲಿಯವರೆಗೆ ೧೨೦ ಜನರು ಸಾವನ್ನಪ್ಪಿದ್ದಾರೆ ಹಾಗೂ ೩ ಸಾವಿರಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಲ್ಲಿ ಇಲ್ಲಿಯವರೆಗೆ ೧೨೦ ಜನರು ಸಾವನ್ನಪ್ಪಿದ್ದಾರೆ. ಹಾಗೂ ೩ ಸಾವಿರಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಇದರ ಹಿನ್ನೆಲೆಯಲ್ಲಿ ಜೂನ್ ೨೪ ರಂದು ಕೇಂದ್ರ ಗೃಹಸಚಿವ ಅಮಿತ್ ಶಾಹ ಇವರು ಎಲ್ಲಾ ಪಕ್ಷದ ಸಭೆ ಕೂಡ ನಡೆಸಿದ್ದಾರೆ. ಪರಿಸ್ಥಿತಿ ಎದುರಿಸುವುದಕ್ಕೆ ೪೦ ಐ.ಪಿ.ಎಸ್. ಅಧಿಕಾರಿಗಳು ಹಾಗೂ ೩೬ ಸಾವಿರ ಭದ್ರತಾ ಪಡೆಯ ಸೈನಿಕರನ್ನು ರಾಜ್ಯದಲ್ಲಿ ನೇಮಕಗೊಳಿಸಲಾಗಿದೆ, ಎಂದು ಅವರು ಮಾಹಿತಿ ನೀಡಿದರು.