ಇಂಪಾಲ (ಮಣಿಪುರ) – ಇಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ನಿಷೇಧಿತ ಚೀನಾದ ‘ಕೆನಬೋ ಬೈಕ್’ಅನ್ನು ರಾಜಾರೋಷವಾಗಿ ಉಪಯೋಗಿಸಲಾಗುತ್ತಿದೆ. ಉಖರುಲ್ ಮತ್ತು ಕಮಜಾಂಗ್ ಈ ಹಿಂಸಾಚಾರ ಪೀಡಿತ ಗುಡ್ಡಗಾಡ ಜಿಲ್ಲೆಯಲ್ಲಿ ಈ ವಾಹನಗಳ ಉಪಯೋಗ ಆಗುತ್ತಿರುವುದು ಕಂಡು ಬಂದಿದೆ. ವಿಶೇಷ ಗಮನ ನೀಡುವ ಅವಶ್ಯಕತೆ ಇಲ್ಲದಿರುವ ಈ ಬೈಕ್ ಕೇವಲ ೨೫ ಸಾವಿರ ರೂಪಾಯಿಗೆ ದೊರೆಯುತ್ತದೆ. ಇತರ ಭಾರತೀಯ ದ್ವಿಚಕ್ರ ವಾಹನದ ತುಲನೆಯಲ್ಲಿ ಇದು ಬಹಳ ಅಗ್ಗವಾಗಿದೆ. ಮಣಿಪುರದಲ್ಲಿ ಗುಡುಗಾಡ ಪ್ರದೇಶದಲ್ಲಿ ಈ ಬೈಕ್ ನಡೆಸುವುದು ಸುಲಭವಾಗಿದೆ; ಆದ್ದರಿಂದ ಹಿಂಸಾಚಾರ ನಡೆಸುವವರಿಂದ ಇದರ ಉಪಯೋಗ ಮಾಡಲಾಗುತ್ತಿದೆ ಎಂದು ಸಮಾಚಾರವಿದೆ.
೧. ಮಣಿಪುರದ ಹಿಂಸಾಚಾರದಲ್ಲಿ ಪೊಲೀಸರಿಂದ ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿರುವ ವಾಹನಗಳಲ್ಲಿ ಶೇಕಡ ೫೦ ಗಿಂತಲೂ ಹೆಚ್ಚಿನವು ‘ಕೆನಬೋ ಬೈಕ್’ ಆಗಿದೆ. ಗಾಡಿ ಸಂಖ್ಯೆ ಇಲ್ಲದಿರುವ ಈ ವಾಹನಗಳು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಆದರೂ ಕೂಡ ಸಂಬಂಧಪಟ್ಟವರಿಗೆ ಹೆಚ್ಚು ನಷ್ಟ ಆಗುತ್ತಿಲ್ಲ.
೨. ಈ ಹಿಂದೆ ಈ ವಾಹನಗಳ ಉಪಯೋಗ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಗಾಗಿ ಮಾಡಲಾಗುತ್ತಿತ್ತು. ಆದ್ದರಿಂದ ಸರಕಾರವು ಈ ಬೈಕ್ ಗಳನ್ನು ನಿಷೇಧಿಸಿತ್ತು.
೩. ಚೀನಾದಲ್ಲಿನ ಯುನಾನ ಪ್ರದೇಶದಿಂದ ಈ ಬೈಕ್ ನ ಬಿಡಿ ಭಾಗಗಳನ್ನು ಥೈಲ್ಯಾಂಡ್ ನಿಂದ ಮ್ಯಾನ್ಮಾರ್ ಮಾರ್ಗವಾಗಿ ಮಣಿಪುರದ ವಿಶಿಷ್ಟ ದಲ್ಲಾಳಿಯ ಬಳಿ ತಲುಪಿಸಲಾಗುತ್ತದೆ. ಮಣಿಪುರದಲ್ಲಿ ಅದನ್ನು ಜೋಡಿಸಲಾಗುತ್ತದೆ.
ಸಂಪಾದಕರ ನಿಲುವುಒಂದು ರಾಜ್ಯದಲ್ಲಿ ನಿಷೇಧಿಸಿರುವ ವಾಹನಗಳನ್ನು ರಾಜಾರೋಷವಾಗಿ ಉಪಯೋಗಿಸುತ್ತಾರೆ, ಇದು ಸರಕಾರಿ ವ್ಯವಸ್ಥೆಗೆ ಲಚ್ಚಾಸ್ಪದ ! |