ಮಣಿಪುರದಲ್ಲಿ ಖೇದಕರ ಘಟನೆ : ಸಮೂಹದಿಂದ 2 ಮಹಿಳೆಯರ ಬೆತ್ತಲೆ ಮೆರವಣಿಗೆ !

೨ ತಿಂಗಳ ಹಿಂದಿನ ಘಟನೆಯ ವಿಡಿಯೋ ಪ್ರಸಾರವಾದ ನಂತರ ಒಬ್ಬನ ಬಂಧನ

ಸಾಮೂಹಿಕ ಬಲಾತ್ಕಾರ ನಡೆದಿದೆ ಎಂದು ದೂರು ದಾಖಲು !

ಇಂಪಾಲ್ (ಮಣಿಪುರ) – ಕಳೆದ 2 ತಿಂಗಳಿಂದ ಮಣಿಪುರದಲ್ಲಿ ಹಿಂದೂ ಮೈತೆಯಿ ಜನಾಂಗ ಮತ್ತು ಕ್ರೈಸ್ತ ಕೂಕೀ ಜನಾಂಗದ ನಡುವೆ ಹಿಂಸಾಚಾರ ನಡೆಯುತ್ತಿದೆ. ಈಗ ಈ ಹಿಂಸಾಚಾರದ ಹಿನ್ನೆಲೆಯಲ್ಲಿನ ಒಂದು ಅಹಿತಕರ ಘಟನೆ ಬೆಳಕಿಗೆ ಬಂದಿದೆ. ರಾಜ್ಯದಲ್ಲಿನ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ್ದಾರೆ. ಹಾಗೂ ಅವರ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದ್ದಾರೆ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ೩೩ ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ಹೇರಮ್ ಹೇರಾ ದಾಸ ಎಂದು ಈ ಆರೋಪಿಯ ಹೆಸರಾಗಿದೆ. ‘ಕೆಲವೇ ಗಂಟೆಗಳಲ್ಲಿ ಇನ್ನೂ ಕೆಲವು ಆರೋಪಿಗಳನ್ನು ಬಂಧಿಸಲಾಗುವುದು’, ಎಂದು ಪೊಲೀಸರು ಹೇಳಿದ್ದಾರೆ. ಮೇ ೪, ೨೦೨೩ ರಂದು ಮಣಿಪುರದಲ್ಲಿನ ಥೌಬಾಲ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇದರ ನಂತರ ಪೊಲೀಸರು ೨೫ ದಿನಗಳ ನಂತರ ದುಷ್ಕರ್ಮಿಗಳ ವಿರುದ್ಧ ಅಪಹರಣ, ಸಾಮೂಹಿಕ ಬಲಾತ್ಕಾರ ಮತ್ತು ಹತ್ಯೆಯ ದೂರು ದಾಖಲಿಸಿದ್ದರು; ಆದರೆ ಇಲ್ಲಿವರೆಗೆ ಯಾರಿಗೂ ಕೂಡ ಬಂದಿಸಿರಲಿಲ್ಲ. ಈಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಪೊಲೀಸರು ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. (ಇಷ್ಟು ದಿನ ಕ್ರಮ ಕೈಗೊಳ್ಳದೆ ಇರುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ ! – ಸಂಪಾದಕರು)

ಈ ಘಟನೆಯ ವಿಡಿಯೋ ಪ್ರಸಾರವಾದ ನಂತರ ಸರಕಾರವು ಫೇಸ್ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಪ್ರಸಾರ ಮಾಡದಿರುವಂತೆ ಆದೇಶ ನೀಡಿದೆ. ಯಾರಾದರೂ ಈ ವಿಡಿಯೋ ಪ್ರಸಾರ ಮಾಡಿದರೆ, ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ಗಲ್ಲು ಶಿಕ್ಷೆಯ ಸಾಧ್ಯತೆಯ ಪರಿಶೀಲನೆ ! – ಮುಖ್ಯಮಂತ್ರಿ ಎನ್. ಬಿರೆನ್ ಸಿಂಹ

ಮುಖ್ಯಮಂತ್ರಿ ಎನ್. ಬೀರೆನ ಸಿಂಹ ಇವರು, ಈ ಪ್ರಕರಣದಿಂದ ನನ್ನ ಮನಸ್ಸಿಗೆ ಬಹಳ ದುಃಖವಾಗಿದೆ. ವಿಡಿಯೋ ಬೆಳಕಿಗೆ ಬರುತ್ತಲೇ ರಾಜ್ಯ ಸರಕಾರವು ವಿಡಿಯೋದ ಬಗ್ಗೆ ಸ್ವತಃ ಗಮನಹರಿಸಿ ವಿಚಾರಣೆಯ ಆದೇಶ ನೀಡಿದೆ. ಪೊಲೀಸರು ಕ್ರಮ ಕೈಗೊಂಡಿದ್ದಾರೆ ಮತ್ತು ಇಂದು ಬೆಳಿಗ್ಗೆ ಮೊದಲ ಬಂಧನ ನಡೆದಿದೆ. ಈ ಪ್ರಕರಣದ ವಿಸ್ತೃತ ವಿಚಾರಣೆ ನಡೆಯುತ್ತಿದೆ. ಎಲ್ಲಾ ಆರೋಪಿಗಳ ಮೇಲೆ ಗಲ್ಲು ಶಿಕ್ಷೆಯ ಸಾಧ್ಯತೆಯ ಜೊತೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಾವು ಭರವಸೆ ನೀಡುತ್ತೇವೆ ಎಂದು ಹೇಳಿದರು.

೧೪೦ ಕೋಟಿ ದೇಶವಾಸಿಯರು ತಲೆ ತಗ್ಗಿಸಬೇಕಾಗುತ್ತಿದೆ ! – ಪ್ರಧಾನಮಂತ್ರಿ ಮೋದಿ

ಈ ಘಟನೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಟ್ವೀಟ್ ಮಾಡಿ, ನನ್ನ ಮನಸ್ಸು ಬಹಳ ನೊಂದಿದೆ ಮತ್ತು ಸಿಟ್ಟು ತುಂಬಿದೆ. ಮಣಿಪುರದಲ್ಲಿನ ಘಟನೆಯು ಯಾವುದೇ ಸಭ್ಯ ಸಮಾಜಕ್ಕಾಗಿ ನಾಚಿಗೇಡಿನ ಘಟನೆ ಆಗಿದೆ. ಈ ಪಾಪ ಮಾಡಿರುವವರು, ಅಪರಾಧ ಯಾರು ಮತ್ತು ಎಷ್ಟು ಜನರಿದ್ದರು, ಇದನ್ನು ಪಕ್ಕಕ್ಕೆ ಇಡಿ; ಈ ಘಟನೆ ೧೪೦ ಕೋಟಿ ದೇಶವಾಸಿಯರ ತಲೆ ತಗ್ಗಿಸಿದೆ. ನಾನು ಎಲ್ಲಾ ಮುಖ್ಯಮಂತ್ರಿಗಳಿಗೆ, ಅವರು ತಮ್ಮ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಗಟ್ಟಿಗೊಳಿಸಬೇಕು. ತಾಯಿ ಸಹೋದರಿಯರ ರಕ್ಷಣೆಗಾಗಿ ಕಠಿಣ ಹೆಜ್ಜೆ ತೆಗೆದುಕೊಳ್ಳಬೇಕು. ಘಟನೆ ರಾಜಸ್ಥಾನದಾಗಿರಲಿ ಅಥವಾ ಛತ್ತಿಸಗಡದಾಗಿರಲಿ ಅಥವಾ ಮಣಿಪುರದಾಗಿರಲಿ, ಈ ದೇಶದಲ್ಲಿನ ಯಾವುದೇ ಭಾಗದಲ್ಲಿ ಯಾವುದೇ ರಾಜ್ಯದಲ್ಲಿನ ರಾಜಕೀಯ ವಿವಾದ ಮೀರಿ ಕಾನೂನು ಮತ್ತು ಸುವ್ಯವಸ್ಥೆ, ಮಹಿಳೆಯರ ಗೌರವ ರಕ್ಷಿಸಬೇಕು ಎಂದು ಆಗ್ರಹಿಸುತ್ತೇನೆ. ನಾನು ದೇಶವಾಸಿಯರಿಗೆ, ಯಾವುದೇ ಅಪರಾಧಿಯನ್ನು ಕ್ಷಮಿಸಲಾಗುವುದಿಲ್ಲ. ಕಾನೂನರೀತ್ಯ ಮತ್ತು ಕಠಿಣ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡುತ್ತೇನೆ. ಮಣಿಪುರದ ಮಹಿಳೆಯರ ಜೊತೆ ಏನೆಲ್ಲಾ ನಡೆದಿದೆ ಅದು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸಂಪಾದಕರ ನಿಲುವು

* ಎರಡು ತಿಂಗಳ ಹಿಂದೆ ಈ ಘಟನೆ ನಡೆದರೂ ಕೂಡ ಪೊಲೀಸರು ಏಕೆ ಕ್ರಮಕೈಗೊಂಡಿಲ್ಲ ?