ನವ ದೆಹಲಿ- ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಇವರು ವರ್ಷ 1971 ರ ಯುದ್ಧದಲ್ಲಿ ಶೌರ್ಯವನ್ನು ಮೆರೆದ ಕಾರಣ ಪರಮವೀರ ಚಕ್ರದಿಂದ ಪುರಸ್ಕೃತರಾದ ಕರ್ನಲ್ ಹೋಶಿಯಾರ ಸಿಂಹ ಇವರ ಪತ್ನಿ ಧನ್ನೊದೇವಿಯವರ ಕಾಲುಮುಟ್ಟಿ ನಮಸ್ಕರಿಸಿದರು. ರಾಜನಾಥ ಸಿಂಗ್ ಇವರು 14 ಡಿಸೆಂಬರರಂದು ನವ ದೆಹಲಿಯಲ್ಲಿ `ವಿಜಯ ಪರ್ವ ಸಂಕಲ್ಪ’ ಸಮಾರಂಭದಲ್ಲಿ ಅವರನ್ನು ಭೇಟಿಯಾಗಿದ್ದರು.
Rajnath Singh pays tribute to Colonel Hoshiar Singh; touches feet of PVC awardee’s wife https://t.co/JgSxaJGv8r
— Republic (@republic) December 14, 2021
ಈ ಸಂದರ್ಭದಲ್ಲಿ ರಾಜನಾಥ ಸಿಂಗ್ ರು ಮಾತನಾಡುತ್ತಾ, ವರ್ಷ 1971 ರ ಭಾರತದೊಂದಿಗಿನ ಯುದ್ಧದಲ್ಲಿ ಪಾಕಿಸ್ತಾನವು ತನ್ನ ಮೂರನೇ ಒಂದಂಶದಷ್ಟು ಭೂಸೇನೆ, ಅರ್ಧದಷ್ಟು ನೌಕಾದಳ ಮತ್ತು ನಾಲ್ಕನೇ ಒಂದಂಶದಷ್ಟು ವಾಯುದಳವನ್ನು ಕಳೆದುಕೊಂಡಿದೆ. ಜಗತ್ತಿನ ಇತಿಹಾಸದಲ್ಲಿ ಇದು ಅತ್ಯಧಿಕ ಮಹತ್ವದ ವಿಜಯವಾಗಿತ್ತು. ಈ ಯುದ್ಧದಲ್ಲಿ 93 ಸಾವಿರ ಪಾಕಿಸ್ತಾನಿ ಸೈನಿಕರ ಆತ್ಮಸಮರ್ಪಣೆ ಜಗತ್ತಿನ ಇತಿಹಾಸದಲ್ಲಿ ‘ಐತಿಹಾಸಿಕ ಆತ್ಮಸಮರ್ಪಣೆ’ ಎಂದು ಹೇಳಲಾಗಿದೆ.