ಕಲಂ 370 ಅನ್ನು ರದ್ದುಗೊಳಿಸಿದ ನಂತರ ಕಳೆದ 2 ವರ್ಷಗಳಲ್ಲಿ ರಾಜ್ಯದ ಹೊರಗಿನ ಜನರು ಕೇವಲ 7 ಭೂಖಂಡಗಳನ್ನು ಖರೀದಿಸಿದ್ದಾರೆ !

ಏಳೂ ಭೂಖಂಡಗಳು ಜಮ್ಮುವಿನ ಭಾಗವಾಗಿದ್ದು, ಕಾಶ್ಮೀರದಲ್ಲಿನ ಒಂದು ಭೂಖಂಡದ ಖರೀದಿಯೂ ಆಗಿಲ್ಲ !

* ಇದರಿಂದ ಸ್ಪಷ್ಟವಾಗುವುದೇನೆಂದರೆ ಕಲಮ್ 370ನ್ನು ರದ್ದುಗೊಳಿಸಿದ ನಂತರವೂ ಮತ್ತು ಪ್ರತಿದಿನ ಜಿಹಾದಿ ಭಯೋತ್ಪಾದಕರನ್ನು ಸುರಕ್ಷಾ ದಳಗಳು ಕೊಂದು ಹಾಕುತ್ತಿದ್ದರೂ ‘ಇಂದಿಗೂ ಕಾಶ್ಮೀರವು ಭಾರತೀಯರಿಗೆ ವಾಸಿಸಲು ಸುರಕ್ಷಿತವಲ್ಲ’ ಎಂಬ ಭಾವನೆಯು ನಾಗರೀಕರಲ್ಲಿ ಇರುವುದರಿಂದ ಯಾರು ಇಲ್ಲಿನ ಸಂಪತ್ತಿನ ಖರೀದಿಗೆ ಇಚ್ಛಿಸುತ್ತಿಲ್ಲ. ಸರಕಾರವು ಈ ಬಗ್ಗೆ ವಿಚಾರ ಮಾಡಬೇಕು ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !- ಸಂಪಾದಕರು 

ಕೇಂದ್ರ ಗೃಹರಾಜ್ಯಮಂತ್ರಿಗಳಾದ ನಿತ್ಯಾನಂದ ರಾಯ

ನವ ದೆಹಲಿ – ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಮ್ 370ನ್ನು ರದ್ದುಗೊಳಿಸಿದ ನಂತರ ಈ ರಾಜ್ಯದ ಹೊರಗಿನ ಜನರು ಒಟ್ಟು 7 ಭೂಖಂಡಗಳ ಖರೀದಿ ಮಾಡಿದ್ದಾರೆ. ಈ ಭೂಖಂಡಗಳು ಜಮ್ಮುವಿನ ಭಾಗವಾಗಿವೆ, ಎಂಬ ಮಾಹಿತಿಯನ್ನು ಕೇಂದ್ರ ಗೃಹರಾಜ್ಯಮಂತ್ರಿಗಳಾದ ನಿತ್ಯಾನಂದ ರಾಯರವರು ರಾಜ್ಯಸಭೆಯ ಒಂದು ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿದ್ದಾರೆ. ಕಲಂ 370 ನಿಂದಾಗಿ ಜಮ್ಮು ಕಾಶ್ಮೀರ ರಾಜ್ಯದ ಹೊರಗಿನ ನಾಗರೀಕರಿಗೆ ಇಲ್ಲಿನ ಭೂಮಿಯನ್ನು ಖರೀದಿಸಲು ಸಾಧ್ಯವಿರಲಿಲ್ಲ. ಕಲಂ 370 ಇರುವಾಗ ಕಾಶ್ಮೀರಕ್ಕೆ ಬೇರೆ ಸಂವಿಧಾನವಿತ್ತು, ಹಾಗೆಯೇ ಸಂಪತ್ತಿನ ಹಕ್ಕು, ಇತರ ಮೂಲಭೂತ ಅಧಿಕಾರಗಳ ವಿಷಯದಲ್ಲಿಯೂ ಬೇರೆಯೇ ಕಾನೂನುಗಳಿದ್ದವು.