ಸುದರ್ಶನ ವಾರ್ತಾವಾಹಿನಿಯ ಸುರೇಶ ಚವ್ಹಾಣಕೆಯವರ ಮೇಲೆ ಮುಸಲ್ಮಾನರ ವಿರುದ್ಧ ದ್ವೇಷದ ಭಾಷಣ ಮಾಡಿದ ಆರೋಪದ ಪ್ರಕರಣ
ನವ ದೆಹಲಿ – ಡಿಸೆಂಬರ ೧೯, ೨೦೨೧ ರಂದು ದೆಹಲಿಯಲ್ಲಿ ನಡೆದ ಧರ್ಮಸಂಸತ್ತಿನಲ್ಲಿ ಸುದರ್ಶನ ವಾರ್ತಾವಾಹಿನಿಯ ಸಂಪಾದಕ ಅಧ್ಯಕ್ಷರಾದ ಸುರೇಶ ಚವ್ಹಾಣಕೆಯವರ ಮೇಲೆ ಮುಸಲ್ಮಾನರ ವಿರುದ್ಧ ದ್ವೇಷದ ಭಾಷಣೆ ಮಾಡಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರವನ್ನು ಸಲ್ಲಿಸಿದ್ದಾರೆ. ಧರ್ಮಸಂಸತ್ತಿನಲ್ಲಿ ಕೇವಲ ಅಸ್ವಿತ್ವ ರಕ್ಷಣೆಯ ಚರ್ಚೆಯಷ್ಟೇ ನಡದಿತ್ತು, ಮುಸಲ್ಮಾನ ಸಮಾಜದ ವಿರುದ್ಧ ಯಾವುದೇ ದ್ವೇಷದ ಭಾಷಣ ಆಗಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
No hate speech at Delhi Dharm Sansad, Delhi Police tells SC
Read @ANI Story | https://t.co/ANux7KpeO4#SupremeCourt #DelhiPolice #DharmSansad pic.twitter.com/Z9Um9z3Hsx
— ANI Digital (@ani_digital) April 14, 2022
‘ಎ.ಎನ್.ಐ.’ ವಾರ್ತಾಸಂಸ್ಥೆಯು ಸಂಗ್ರಹಿಸಿದ ಪುರಾವೆ ಹಾಗೂ ವಿಡಿಯೋ ಫುಟೇಜನ ಆಧಾರದ ಮೇಲೆ ದೆಹಲೀ ಪೊಲೀಸರು ಈ ಪ್ರತಿಜ್ಞಾಪತ್ರವನ್ನು ದಾಖಲಿಸಿದ್ದಾರೆ. ಆಳವಾದ ವಿಚಾರಣೆ ಮಾಡಿದ ಬಳಿಕ ಈ ರೀತಿಯ ನಿಷ್ಕರ್ಷವನ್ನು ಪೊಲೀಸರು ಹೇಳಿದರು. ಸುರೇಶ ಚವ್ಹಾಣಕೆಯವರು ಮುಸಲ್ಮಾನರ ವಿಷಯದಲ್ಲಿ ಏನೂ ಮಾತನಾಡಲಿಲ್ಲ. ಹಿಂದು ಧರ್ಮವನ್ನು ಬಲಪಡಿಸುವ ವಿಷಯದಲ್ಲಿ ಹಾಗೂ ರಾಕ್ಷಸಿ ಶಕ್ತಿಗಳ ವಿರುದ್ಧ ಹೋರಾಡುವ ವಿಷಯವಾಗಿ ಧರ್ಮಸಂಸತ್ತಿನಲ್ಲಿ ಚರ್ಚೆ ನಡೆಯಿತು, ಎಂದು ಈ ಪ್ರತಿಜ್ಞಾಪತ್ರದಲ್ಲಿ ಹೇಳಲಾಗಿದೆ.