ಕೊರೋನಾ ಮುಗಿದಿಲ್ಲ, ಅದು ಯಾವಾಗ ಬೇಕಾದರೂ ಮತ್ತೆ ಬರಬಹುದು ! – ಪ್ರಧಾನಿ ಮೋದಿ

ನವದೆಹಲಿ – ಕೊರೋನ ಒಂದು ದೊಡ್ಡ ಸಂಕಟವಾಗಿತ್ತು ಮತ್ತು ಆ ಸಂಕಟ ಮುಗಿದಿದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಇಗ ಅದು ಇಲ್ಲದಿದ್ದರೂ ಕೂಡಾ ‘ಅದು ಪುನಃ ಯಾವಾಗ ಬರುತ್ತದೋ’, ನಮಗೆ ಗೊತ್ತಿಲ್ಲ. ಇದೊಂದು ‘ಬಹುರೂಪ’ ಹೊಂದುವ ರೋಗವಾಗಿದೆ. ಅದು ಯಾವಾಗ ಬೇಕಾದರೂ ಮತ್ತೆ ಬರಬಹುದು, ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಅವರು ಗುಜರಾತಿನ ಜುನಾಗಡ ಜಿಲ್ಲೆಯ ವಂಥಲಿಯಲ್ಲಿ ಮಾತೆ ಉಮಿಯಾ ಧಾಮದ ಮಹೋತ್ಸವ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ ಮೂಲಕ ಮಾತನಾಡಿದರು.

ಪ್ರಧಾನಿ ಮೋದಿ ತಮ್ಮ ಮಾತನ್ನು ಮುಂದುವರೆಸುತ್ತಾ, ಈ ಕಾಯಿಲೆಯಿಂದ ರಕ್ಷಣೆ ಪಡೆಯಲು ಜನರಿಗೆ ಸುಮಾರು ೧೮೫ ಕೋಟಿ ಲಸಿಕೆಗಳನ್ನು ನೀಡಲಾಗಿದೆ ನಾವು ಇಷ್ಟು ದೊಡ್ಡ ಹಂತವನ್ನು ದಾಟಿದ್ದೇವೆ, ಇದರ ಬಗ್ಗೆ ಜಗತ್ತು ಆಶ್ಚರ್ಯ ವ್ಯಕ್ತಪಡಿಸುತ್ತಿದೆ; ಆದರೆ ನಿಮ್ಮ ಬೆಂಬಲದಿಂದ ಮಾತ್ರ ಇದು ಸಾಧ್ಯವಾಗಿರುವುದು ಎಂದು ಹೇಳಿದರು.