ರಾಮನವಮಿಯ ಮೆರವಣಿಗೆಯ ಮೇಲೆ ದೇಶದಲ್ಲಿನ ೫ ರಾಜ್ಯಗಳಲ್ಲಿ ಮತಾಂಧರಿಂದ ಆಕ್ರಮಣಗಳು !

  • ಓರ್ವ ಹಿಂದೂ ಮೃತನಾದರೆ ಪೊಲೀಸ ಅಧೀಕ್ಷಕರೊಂದಿಗೆ ಅನೇಕ ಜನರು ಗಾಯಗೊಂಡಿದ್ದಾರೆ !

  • ಮಧ್ಯಪ್ರದೇಶದಲ್ಲಿ ಆಕ್ರಮಣ ಮಾಡಿದ ಮತಾಂಧರ ಮನೆಗಳನ್ನು ಸರಕಾರವು ಕೆಡವಿತು !

ಹಿಂದೂಗಳ ದೇಶದಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗಳ ಮೇಲೆ ಆಕ್ರಮಣ ಮಾಡುವ ಧೈರ್ಯವನ್ನು ಕಳೆದ ವರ್ಷಗಳಿಂದ ತೋರಿಸಲಾಗುತ್ತಿದೆ. ಈ ಸ್ಥಿತಿಯನ್ನು ಬದಲಾಯಿಸಲು ಈಗ ಹಿಂದೂಗಳು ಯುದ್ಧದ ಮಟ್ಟದಲ್ಲಿ ಕಾನೂನುಬದ್ಧ ಮಾರ್ಗದಲ್ಲಿ ಪ್ರಯತ್ನಿಸಬೇಕಿದೆ. ಇನ್ನು ಮುಂದೆ ಮತಾಂಧರು ಇಂತಹ ಧೈರ್ಯ ತೋರಿಸಬಾರದು, ಅಂತಹ ಸ್ಥಿತಿಯನ್ನು ನಿರ್ಮಿಸಬೇಕಿದೆ !

ನವದೆಹಲಿ – ದೇಶದಾದ್ಯಂತ ಶ್ರೀರಾಮನವಮಿಯ ನಿಮಿತ್ತವಾಗಿ ನಡೆಸಲಾದ ಮೆರವಣಿಗೆಗಳ ಮೇಲೆ ಮುಸಲ್ಮಾನಬಹುಲ ಭಾಗಗಳಲ್ಲಿ ಆಕ್ರಮಣ ಮಾಡಲಾದ ಘಟನೆಗಳು ಕರ್ನಾಟಕ, ಝಾರಖಂಡ, ಮಧ್ಯಪ್ರದೇಶ, ಬಂಗಾಳ, ಗುಜರಾತ ಮತ್ತು ಮಹಾರಾಷ್ಟ್ರ ಈ ರಾಜ್ಯಗಳಲ್ಲಿ ನಡೆದಿವೆ. ಗುಜರಾತಿನಲ್ಲಿ ಮತಾಂಧರು ನಡೆಸಿದ ಆಕ್ರಮಣದಲ್ಲಿ ಓರ್ವ ಹಿಂದೂ ಮೃತನಾಗಿದ್ದಾನೆ.

ಗುಜರಾತ ರಾಜ್ಯದಲ್ಲಿನ ಆಣಂದ ಮತ್ತು ಸಾಬರಕಾಂಠಾ ಜಿಲ್ಲೆಗಳಲ್ಲಿ ಆಕ್ರಮಣ

ಗುಜರಾತಿನ ಸಾಬರಕಾಂಠಾ ಜಿಲ್ಲೆಯಲ್ಲಿನ ಹಿಂಮತನಗರದ ಛಪರಿಯಾ ಭಾಗದಲ್ಲಿ ಮುಸಲ್ಮಾನಬಹುಲ ಭಾಗದಿಂದ ಶ್ರೀರಾಮನವಮಿಯ ಮೆರವಣಿಗೆಯು ಹೋಗುತ್ತಿರುವಾಗ ಅದರ ಮೇಲೆ ಒಮ್ಮೆಲೆ ಕಲ್ಲುತೂರಾಟ ಮಾಡಲಾಯಿತು. ಈ ಸಮಯದಲ್ಲಿ ಸ್ಥಿತಿಯ ಮೇಲೆ ಹಿಡಿತ ಸಾಧಿಸಲು ಪೊಲೀಸರು ಆಶ್ರುವಾಯುವನ್ನು ಪ್ರಯೋಗಿಸಿದರು. ಈ ಸಮಯದಲ್ಲಿ ಮತಾಂಧರು ಪೊಲೀಸರ ವಾಹನಗಳಿಗೂ ಹಾನಿ ಮಾಡಿದರು.
ಆಣಂದ ಜಿಲ್ಲೆಯಲ್ಲಿನ ಖಂಭಾತದಲ್ಲಿನ ಶಕರಪೂರದಲ್ಲಿ ಮುಸಲ್ಮಾನಬಹುಳ ಭಾಗದಲ್ಲಿ ಶ್ರೀರಾಮನವಮಿಯ ಮೆರವಣಿಗೆಯ ಮೇಲೆ ಕಲ್ಲುತೂರಾಟ ಮಾಡಲಾಯಿತು. ಅನಂತರ ಮತಾಂಧರು ಅಂಗಡಿಗಳು, ಮನೆ ಹಾಗೂ ವಾಹನಗಳನ್ನು ಸುಟ್ಟುಹಾಕಿದರು. ಈ ಸಮಯದಲ್ಲಿ ಮೆರವಣಿಗೆಯಲ್ಲಿ ಸಹಭಾಗಿಯಾದವರು ಪ್ರತ್ಯುತ್ತರವೆಂದು ಮತಾಂಧರ ಮೇಲೆ ಕಲ್ಲುತೂರಾಟ ಮಾಡಿದರು. ಈ ಸಮಯದಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಈ ಹಿಂಸಾಚಾರದಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ಇದರಲ್ಲಿ ೬೫ ವರ್ಷದ ಹಿಂದೂ ವ್ಯಕ್ತಿಯ ಮೃತ್ಯುವಾಗಿದೆ.

ಬಂಗಾಳದ ಹಾವಡಾ ಮತ್ತು ಬಾಂಕುರಾದಲ್ಲಿ ಆಕ್ರಮಣಗಳು

ಹಾವಡಾ ಜಿಲ್ಲೆಯಲ್ಲಿನ ಬೀಯಿ ಮಹಾವಿದ್ಯಾಲಯದ ಬಳಿ ವಿಶ್ವ ಹಿಂದೂ ಪರಿಷತ್ತು ಶ್ರೀರಾಮನವಮಿಯ ನಿಮಿತ್ತ ಮೆರವಣಿಗೆಯನ್ನು ಏರ್ಪಡಿಸಿತ್ತು. ಅದು ಮುಸಲ್ಮಾನಬಹುಲ ಪ್ರದೇಶದಿಂದ ಹೋಗುತ್ತಿರುವಾಗ ಅದರ ಮೇಲೆ ಒಮ್ಮೆಲೇ ಆಕ್ರಮಣ ಮಾಡಲಾಯಿತು. ಆಗ ಪೊಲೀಸರು ಹಿಂದೂಗಳ ಮೇಲೆಯೇ ಲಾಠಿ ಬೀಸಿದರು. ಇದರಲ್ಲಿ ಅನೇಕ ಜನರು ಗಾಯಗೊಂಡರು. ಈ ವಿಷಯದಲ್ಲಿ ಭಾಜಪದ ಶಾಸಕರಾದ ಶುಭೇಂದು ಅಧಿಕಾರಿಯವರು ಟ್ವೀಟ್ ಮಾಡಿ ‘ಸನಾತನ ಧರ್ಮದ ಪಾಲನೆ ಮಾಡುವವರು ಈ ರಾಜ್ಯದಲ್ಲಿ ನಿಷೇಧಿತರೇ ?’ ಎಂದು ಪ್ರಶ್ನಿಸಿದ್ದಾರೆ.
ಬಾಂಕುರಾದಲ್ಲಿ ಕೇಂದ್ರೀಯ ರಾಜ್ಯಮಂತ್ರಿಗಳಾದ ಸುಭಾಷ ಸರಕಾರರವರ ನೇತೃತ್ವದಲ್ಲಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಅದರ ಮೇಲೆ ಮಸೀದಿಯಿಂದ ಕಲ್ಲುತೂರಾಟ ಮಾಡಲಾಯಿತು. ಈ ಪ್ರಕರಣದಲ್ಲಿ ೧೭ ಜನರನ್ನು ಬಂಧಿಸಲಾಗಿದೆ. ಪೊಲೀಸರು ಹೇಳುವಂತೆ ಮೆರವಣಿಗೆಯ ದಾರಿಯಲ್ಲಿ ಮಸೀದಿ ಇದ್ದುದರಿಂದ ಮೆರವಣಿಗೆಯನ್ನು ಬೇರೆ ದಾರಿಯಲ್ಲಿ ಒಯ್ಯಲು ಹೇಳಲಾಗಿತ್ತು; ಆದರೆ ಹಿಂದೂಗಳು ಕೇಳಲಿಲ್ಲ ಮತ್ತು ಅವರು ಮಸೀದಿಯ ಮಾರ್ಗದಿಂದ ಮೆರವಣಿಗೆಯನ್ನು ತೆಗೆದುಕೊಂಡು ಹೋದಾಗ ಕಲ್ಲುತೂರಾಟ ಮಾಡಲಾಯಿತು. ಇದರಿಂದಾಗಿ ಲಾಠಿಚಾರ್ಜ ಮಾಡಲಾಯಿತು. ( ಭಾರತವು ಜಾತ್ಯಾತೀತ ದೇಶವಾಗಿದೆ ಮತ್ತು ಇಲ್ಲಿ ಪ್ರತಿಯೊಬ್ಬರಿಗೂ ಸರ್ವಧರ್ಮ ಸಮಭಾವದ ಉಪದೇಶ ನೀಡಲಾಗುತ್ತದೆ, ಹೀಗಿರುವಾಗ ಹಿಂದೂಗಳ ಮೆರವಣಿಗೆಯು ಮಸೀದಿಯ ಎದುರಿನಿಂದ ಹೋಗುವುದರಲ್ಲಿ ತಪ್ಪೇನು ? ಮತ್ತು ಇಲ್ಲಿ ಮೆರವಣಿಗೆಯ ಮೇಲೆ ಆಕ್ರಮಣವಾಗುತ್ತಿದ್ದರೆ ಪೊಲೀಸರು ಅಂತಹವರ ಮೇಲೆ ಮೊದಲು ಕಾರ್ಯಾಚರಣೆಯನ್ನು ಮಾಡಬೇಕು ಮತ್ತು ಅವರಿಗೆ ಸರ್ವಧರ್ಮಸಮಭಾವವನ್ನು ಕಲಿಸಬೇಕು ! – ಸಂಪಾದಕರು)

ಝಾರಖಂಡದಲ್ಲಿ ದಹನ

ಝಾರಖಂಡ ರಾಜ್ಯದಲ್ಲಿನ ಲೋಹರದಗಾದಲ್ಲಿನ ಹಿರಹೀ-ಹೆಂದಲಾಸೊ-ಕುಜರಾ ಎಂಬ ಊರಿನ ಗಡಿಯಲ್ಲಿ ನಡೆಯುವ ಉತ್ಸವದಲ್ಲಿ ಹಿಂಸಾಚಾರ ಮತ್ತು ಬೆಂಕಿ ಇಡಲಾಗಿದೆ. ಈ ಊರಿನಲ್ಲಿ ಶ್ರೀರಾಮನವಮಿತ ನಿಮಿತ್ತವಾಗಿ ಮೆರವಣಿಗೆಯನ್ನು ನಡೆಸಲಾಗಿತ್ತು. ಅದರ ಮೇಲಾದ ಕಲ್ಲುತೂರಾಟ ಮಾಡಿದ ನಂತರ ಬೆಂಕಿಹಚ್ಚಿರುವ ಘಟನೆ ನಡೆದಿದೆ. ಇದರಲ್ಲಿ ೧೦ ದ್ವಿಚಕ್ರ ಮತ್ತು ಒಂದು ಪಿಕ್‌ಅಪ್ ವ್ಯಾನ್‌ಗಳನ್ನು ಸುಡಲಾಯಿತು. ಈ ಹಿಂಸಾಚಾರದಲ್ಲಿ ೪ ಜನರು ಗಾಯಗೊಂಡಿದ್ದಾರೆ. ಬೊಕಾರೋದಲ್ಲಿನ ಬೆರಮೋ ಭಾಗದಲ್ಲಿಯೂ ಮೆರವಣಿಗೆಯ ಮೇಲೆ ಕಲ್ಲುತೂರಾಟ ಮಾಡಲಾಗಿದೆ.

ಮಧ್ಯಪ್ರದೇಶದಲ್ಲಿನ ಬಡವಾನಿ ಮತ್ತು ಖರಗೋನದಲ್ಲಿ ಹಿಂಸಾಚಾರ

ಮಧ್ಯಪ್ರದೇಶದ ಬಡವಾನಿ ಜಿಲ್ಲೆಯಲ್ಲಿನ ಸೇಂಧವಾದಲ್ಲಿ ಮೆರವಣಿಗೆಯ ಮೇಲೆ ಕಲ್ಲುತೂರಾಟ ಮಾಡಲಾಗಿದೆ. ಇದರಲ್ಲಿ ಪೊಲೀಸ ಅಧಿಕಾರಿಗಳು ಹಾಗೂ ಇತರ ೨೦ ಜನರು ಗಾಯಗೊಂಡಿದ್ದಾರೆ. ಮತಾಂಧರು ಈ ಸಮಯದಲ್ಲಿ ಕೆಲವು ಗಾಡಿಗಳನ್ನು ಸುಟ್ಟುಹಾಕಿದ್ದಾರೆ. ಹಾಗೆಯೇ ೩ ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾರೆ. ಇಲ್ಲಿ ಸದ್ಯ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ ಬಂದೋಬಸ್ತ ಇಡಲಾಗಿದೆ.
ರಾಜ್ಯದಲ್ಲಿನ ಖರಗೋನದಲ್ಲಿ ಮುಸಲ್ಮಾನಬಹುಲ ಭಾಗದಲ್ಲಿನ ಮತಾಂಧರು ಮೆರವಣಿಗೆಯ ಮೇಲೆ ಕಲ್ಲುತೂರಾಟ, ಹಾಗೆಯೇ ಪೆಟ್ರೋಲ್ ಬಾಂಬನಿಂದ ಆಕ್ರಮಣ ಮಾಡಿದಾಗ ಬಂದೋಬಸ್ತಿಗೆ ಇದ್ದ ಪೊಲೀಸ ಅಧೀಕ್ಷಕರಾದ ಸಿದ್ಧಾರ್ಥ ಚೌಧರಿ, ಹಾಗೆಯೇ ಪೊಲೀಸ ನಿರೀಕ್ಷಕರು ಗಾಯಗೊಂಡಿದ್ದಾರೆ. ಹಾಗೆಯೇ ಇನ್ನೂ ೪ ಜನರೂ ಗಾಯಗೊಂಡಿದ್ದಾರೆ. ಕಲ್ಲುತೂರಾಟಕ್ಕೆ ಹಿಂದೂಗಳೂ ಪ್ರತ್ಯುತ್ತರ ನೀಡಲು ಪ್ರಯತ್ನಿಸಿದರು. ಅನಂತರ ನಗರದಲ್ಲಿನ ಇತರ ೩ ಕಡೆಗಳಲ್ಲಿ ಕಲ್ಲುತೂರಾಟದ ಘಟನೆಗಳು ನಡೆದಿವೆ. ಇದರಲ್ಲಿ ತಾಲಾಬ ಚೌಕ, ಗೊಶಾಳಾ ಮಾರ್ಗ ಮತ್ತು ಮೋತೀಪುರಾ ಭಾಗದಲ್ಲಿ ಈ ಘಟನೆಗಳು ನಡೆದಿವೆ. ಇಲ್ಲಿ ಈಗ ದೊಡ್ಡ ಪ್ರಮಾಣದಲ್ಲಿ ಪೊಲೀಸ ಬಂದೋಬಸ್ತು ಇಡಲಾಗಿದೆ. ಮೆರವಣಿಗೆಯಲ್ಲಿ ‘ಡಿಜೆ’ (ದೊಡ್ಡ ಸಂಗೀತ ವ್ಯವಸ್ಥೆ) ಹಚ್ಚಲಾಗಿತ್ತು. ಮುಸಲ್ಮಾನಬಹುಲ ಭಾಗದಲ್ಲಿ ಮತಾಂಧರು ಡಿಜೆ ನಿಲ್ಲಿಸಲು ಹೇಳಿದರು ಮತ್ತು ಕಲ್ಲುತೂರಾಟ ಮಾಡಿದರು. ಪೊಲೀಸರು ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಲು ಆಶ್ರುವಾಯು ಪ್ರಯೋಗಿಸಿದರು. ಸದ್ಯ ಇಲ್ಲಿನ ಕೆಲವು ಭಾಗಗಳಲ್ಲಿ ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ.
ಈ ಘಟನೆಯ ಬಗ್ಗೆ ಸ್ಥಳೀಯ ಶಾಸಕರಾದ ರಾಮೇಶ್ವರ ಶರ್ಮಾರವರು ಮಾತನಾಡುತ್ತ, ಭಾಜಪದ ರಾಜ್ಯದಲ್ಲಿ ಎಷ್ಟೊಂದು ಧೈರ್ಯ ತೋರಿಸುವವರಿಂದ ಒಂದೊಂದು ಕಲ್ಲಿನ ಲೆಕ್ಕ ಚುಕ್ತಾ ಮಾಡಲಾಗುವುದು. ಬೆಂಕಿ ಇಟ್ಟವರಿಂದ ನಷ್ಟಪರಿಹಾರವನ್ನು ವಸೂಲಿ ಮಾಡಲಾಗುವುದು’ ಎಂದು ಹೇಳಿದರು.

ದಂಗೆಕೋರರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಲಾಗುವುದು ! ? ಶಿವರಾಜಸಿಂಹ ಚೌಹಾನ, ಮುಖ್ಯಮಂತ್ರಿ, ಮಧ್ಯಪ್ರದೇಶ

ದಂಗೆಯ ಘಟನೆಯ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನರವರು ಸಭೆಯನ್ನು ಕರೆಸಿದ್ದರು. ಅನಂತರ ಪತ್ರಕರ್ತರೊಂದಿಗೆ ಮಾತನಾಡುವಾಗ ಅವರು ‘ಹಿಂಸಾಚಾರವನ್ನು ಸಹಿಸುವುದಿಲ್ಲ. ಕೇವಲ ಬಂಧಿಸಿ ಜೈಲಿಗೆ ಕಳುಹಿಸಲಾಗುವುದಿಲ್ಲ, ಸಾರ್ವಜನಿಕ ಮತ್ತು ಖಾಸಗಿ ಸಂಪತ್ತಿನ ಮಾಡಿದವರಿಂದ ಅವರ ನಷ್ಟಪರಿಹಾರವನ್ನು ವಸೂಲು ಮಾಡಲಾಗುವುದು. ದಂಗೆಕೋರರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಲಾಗುವುದು’ ಎಂದು ಹೇಳಿದರು.

ಖರಗೋನದಲ್ಲಿ ಮತಾಂಧರ ಮನೆಗಳನ್ನು ಬುಲ್ಡೋಜರನಿಂದ ಕೆಡವಲಾಯಿತು !

ಖರಗೋನನಲ್ಲಿ ಮುಸಲ್ಮಾನಬಹುಲ ಭಾಗದಲ್ಲಿ ಮೆರವಣಿಗೆಯ ಮೇಲೆ ಕಲ್ಲುತೂರಾಟ ಮಾಡುವವರ ಮನೆಯ ಮೇಲೆ ಸರಕಾರವು ಬುಲ್ಡೋಜರ ಮೂಲಕ ಕಾರ್ಯಾಚರಣೆಯನ್ನು ಮಾಡಿ ಅವುಗಳನ್ನು ಕೆಡವಿತು. ಇಲ್ಲಿಯ ವರೆಗೆ ೭೭ ಜನರನ್ನು ಬಂಧಿಸಲಾಗಿದೆ.

ಭರತಪೂರ (ರಾಜಸ್ಥಾನ)ದಲ್ಲಿ ಮಸೀದಿಯ ಎದುರು ಹಚ್ಚಲಾದ ಸ್ಪೀಕರನ್ನು ಪೊಲೀಸರು ತೆಗೆದಿದ್ದಾರೆ !

ಭರತಪೂರ ನಗರದಲ್ಲಿ ರಾಮನವಮಿಯ ದಿನದಂದು ಹಿಂದೂಗಳಿಂದ ಅನೇಕ ಕಡೆಗಳಲ್ಲಿ ಸ್ಪೀಕರ್ ಹಚ್ಚಲಾಗಿತ್ತು. ಜಾಮಾ ಮಸೀದಿಯ ಎದುರು ಸ್ಪೀಕರನಲ್ಲಿ ಭಜನೆಗಳನ್ನು ಹಚ್ಚಲಾಗಿತ್ತು. ಇದರಿಂದ ವಾದ ನಿರ್ಮಾಣವಾಗಿದ್ದರಿಂದ ಪೊಲೀಸರು ಸ್ಪೀಕರನ್ನು ತೆಗೆಸಿದ್ದಾರೆ.