ಕೇರಳದ ದೇವಸ್ಥಾನವೊಂದರಲ್ಲಿ ‘ಇಫ್ತಾರ್’ ಕೂಟ !

ಧಾರ್ಮಿಕ ಸೌಹಾರ್ದತೆಯ ಸಂದೇಶವನ್ನು ನೀಡಿರುವುದಾಗಿ ಹೇಳಿದ ದೇವಸ್ಥಾನದ ಅಧ್ಯಕ್ಷರು

‘ಹಿಂದೂ-ಮುಸಲ್ಮಾನ ಐಕ್ಯತೆ’ಯು ಮರೀಚಿಕೆಯಾಗಿರುವ ಇತಿಹಾಸವಿರುವಾಗ ದೇವಸ್ಥಾನದ ಅಧ್ಯಕ್ಷರು ಯಾವ ಲೋಕದಲ್ಲಿ ತೇಲಾಡುತ್ತಿದ್ದಾರೆ ?

ಹಿಂದೂಗಳು ಮಾತ್ರ ಧಾರ್ಮಿಕ ಸೌಹಾರ್ದತೆಯ ಗುತ್ತಿಗೆ ತೆಗೆದುಕೊಂಡಿಲ್ಲ, ಎಂದು ಈ ಅಧ್ಯಕ್ಷ ಮಹಾಶಯರಿಗೆ ಯಾರು ಹೇಳುವರು ? ಇದೀಗ ನಡೆದಿರುವ ರಾಮನವಮಿಯಂದು ದೇಶದ ಕನಿಷ್ಠ ೮ ರಾಜ್ಯಗಳಲ್ಲಿ ಹಿಂದೂ ಶೋಭಾಯಾತ್ರೆಯ ಮೇಲೆ ಮತಾಂಧರಿಂದ ದಾಳಿ ನಡೆಸಲಾಯಿತು. ‘ಈ ಮತಾಂಧರು ಏಕೆ ಧಾರ್ಮಿಕ ಸೌಹಾರ್ದತೆ ಕಾಪಾಡುವುದಿಲ್ಲ’, ಎಂಬ ಉತ್ತರವನ್ನು ದೇವಸ್ಥಾನದ ಅಧ್ಯಕ್ಷರು ನೀಡುವರೇ ?

ನವ ದೆಹಲಿ : ಕೇರಳದ ಒಂದು ದೇವಸ್ಥಾನದಲ್ಲಿ ನಗರದ ಮುಸಲ್ಮಾನರಿಗಾಗಿ ಇಫ್ತಾರ್ ಕೂಟವನ್ನು ಆಯೋಜಿಸಿದೆ ಎಂದು ‘ದ ಹಿಂದೂ’ ಈ ಆಂಗ್ಲ ದಿನಪತ್ರಿಕೆ ವರದಿ ಮಾಡಿದೆ. ಈ ದೇವಾಲಯವು ಮಲಪ್ಪುರಂ ಜಿಲ್ಲೆಯ ತಿರೂರ್ ಬಳಿಯ ವಾಣಿಯನ್ನೂರಿನಲ್ಲಿದೆ. ದೇವಸ್ಥಾನದ ಅಧ್ಯಕ್ಷ ವೇಲಾಯುಧನ್ ಮತ್ತು ಕೊಶಾಧಿಕಾರಿ ಲಕ್ಷ್ಮಣನ್ ಇವರು ಮಾತನಾಡುತ್ತಾ, ದೇವಸ್ಥಾನದ ಹದ್ದಿನಲ್ಲಿ ಈ ಔತಣದ ಆಯೋಜನೆಯಿಂದ ಧಾರ್ಮಿಕ ಸೌಹಾರ್ದತೆಯ ಸ್ಪಷ್ಟ ಸಂದೇಶವನ್ನು ಎಲ್ಲಾ ಕಡೆಗಳಲ್ಲಿ ನೀಡಲಾಗಿದೆ ಎಂದು ಹೇಳಿದರು.