ವಿವೇಕ ಅಗ್ನಿಹೋತ್ರಿಯವರು ಇಗ ದೆಹಲಿ ಗಲಭೆ ಕುರಿತು ‘ದಿ ದೆಹಲಿ ಫೈಲ್ಸ’ ಚಲನಚಿತ್ರವನ್ನು ನಿರ್ಮಿಸಲಿದ್ದಾರೆ !

ನವ ದೆಹಲಿ – ‘ದಿ ಕಾಶ್ಮೀರ ಫೈಲ್ಸ’ ಚಲನಚಿತ್ರದ ನಿರ್ದೇಶಕ ವಿವೇಕ ಅಗ್ನಿಹೋತ್ರಿಯವರು ಇಗ ದೆಹಲಿಯಲ್ಲಿ ೨೦೨೦ ರಲ್ಲಿ ನಡೆದ ಗಲಭೆ ಕುರಿತು ಚಲನಚಿತ್ರ ಮಾಡುವದರ ಕುರಿತು ಮಾಹಿತಿ ನೀಡಿದ್ದಾರೆ. ‘ದಿ ದೆಹಲಿ ಫೈಲ್ಸ’ ಎಂದು ಈ ಚಲನಚಿತ್ರದ ಹೆಸರು ಇರುವದೆಂದು ಅವರು ಹೇಳಿದ್ದಾರೆ. ಪೌರತ್ವ ಸುಧಾರಣಾ ಕಾಯ್ದೆಯ ವಿರುದ್ಧ ಮುಸ್ಲಿಂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದವು. ಈ ನಿಟ್ಟಿನಲ್ಲಿ ವಿವಿಧೆಡೆ ಪ್ರತಿಭಟನೆಗಳು ನಡೆದವು. ಆನಂತರ ಇಲ್ಲಿ ಗಲಭೆಗಳು ನಡೆದವು. ಇದರಲ್ಲಿ ೫೪ ಜನರು ಸಾವನ್ನಪ್ಪಿದ್ದರು ಹಾಗೂ ಭಾರಿ ಪ್ರಮಾಣದ ಆರ್ಥಿಕ ನಷ್ಟ ಸಂಭವಿಸಿತು. ಈ ಪ್ರಕರಣದಲ್ಲಿ ಆಮ ಆದ್ಮಿ ಪಕ್ಷದ ಕಾಪೊರೇಟರ ತಾಹಿರ ಹುಸೇನನನ್ನು ಬಂದಿಸಲಾಗಿತ್ತು.

(ಸೌಜನ್ಯ : Republic World)