ಬಂಗಾಲದಲ್ಲಿ ಭಾಜಪಾದ ಆಂದೋಲನದ ಮೇಲೆ ನಾಡ ಬಾಂಬ್ ಮೂಲಕ ದಾಳಿ : ಸ್ಪೋಟದಲ್ಲಿ ಇಬ್ಬರೂ ಕಾರ್ಯಕರ್ತರಿಗೆ ಗಾಯ

ತೃಣಮೂಲ ಕಾಂಗ್ರೆಸ್ಸಿನ ರಾಜ್ಯದಲ್ಲಿ ಬಂಗಾಲ ‘ಬಾಂಬ್ ತಯಾರಿಸುವ ಕಾರ್ಖಾನೆ’ ಆಗಿದೆ. ಇಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಆದ್ದರಿಂದ ಇಲ್ಲಿ ರಾಷ್ಟ್ರಪತಿ ಶಾಸನ ಜಾರಿ ಮಾಡುವುದು ಅನಿವಾರ್ಯ !

ಕೊಲಕಾತಾದಿಂದ ೨೦೦ ಕೋಟಿ ರೂಪಾಯಿ ಮೌಲ್ಯದ ಅಮಲು ಪದಾರ್ಥ ವಶ !

ಗುಜರಾತ ಉಗ್ರ ನಿಗ್ರಹ ದಳವು ಕೊಲಕಾತಾದಲ್ಲಿ ಅಮಲು ವಸ್ತುಗಳ ವಿರುದ್ಧದ ನಡೆಸಿದ ದೊಡ್ಡ ಕಾರ್ಯಾಚರಣೆಯಲ್ಲಿ ೨೦೦ ಕೋಟಿ ರೂಪಾಯಿ ಮೌಲ್ಯದ ಅಮಲು ಪದಾರ್ಥವನ್ನು ವಶಪಡಿಸಿಕೊಂಡಿದೆ.

ಬಂಗಾಲದಲ್ಲಿ ಯುವತಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದ ಗಡಿ ಭದ್ರತಾ ದಳದ ಇಬ್ಬರ ಸೈನಿಕರ ಬಂಧನ

ಬಂಗಾಲದ ಉತ್ತರ ೨೪ ಪರಾಗಣ ಜಿಲ್ಲೆಯ ಗಡಿ ಭದ್ರತಾ ದಳದ ಇಬ್ಬರು ಸೈನಿಕರು ಓರ್ವ ಯುವತಿಯ ಮೇಲೆ ಸಾಮೂಹಿಕ ಬಲಾತ್ಕಾರದ ಮಾಡಿರುವ ಆರೋಪದಲ್ಲಿ ಬಂಧಿಸಲಾಗಿದೆ. ಗಡಿ ಭದ್ರತಾ ದಳದ ೬೮ ನೇ ಬಟಾಲಿಯನಿನ ಈ ಇಬ್ಬರು ಸೈನಿಕರು ಆಗಸ್ಟ್ ೨೫ ರಂದು ರಾತ್ರಿ ಬಗದಾ ಗಡಿಯ ಜಿತಪೂರ ಬಿಓಪಿ ಹತ್ತಿರದ ಒಂದು ಹೊಲದಲ್ಲಿ ಯುವತಿಯ ಮೇಲೆ ಸಾಮೂಹಿಕ ಬಲತ್ಕಾರ ನಡೆಸಿದ್ದಾರೆ.

ಪ್ರಾಣಿಗಳ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಮುಖಂಡನ ಬಂಧನ

ಪ್ರಾಣಿಗಳ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ಕೇಂದ್ರೀಯ ಅನ್ವೇಷಣ ಇಲಾಖೆಯು ಬೋಲ್ಪೂರ್ ಇಲ್ಲಿ ದಾಳಿ ನಡೆಸಿ ತೃಣಮೂಲ ಕಾಂಗ್ರೆಸ್ಸಿನ ನಾಯಕ ಅನುಬ್ರತ ಮಂಡಲ ಇವರನ್ನು ಬಂಧಿಸಿದ್ದಾರೆ. ಅವರು ತೃಣಮೂಲದ ವೀರಭೂಮ ಪ್ರದೇಶದ ಜಿಲ್ಲಾಧ್ಯಕ್ಷರಾಗಿದ್ದಾರೆ.

ಬಂಗಾಲದಲ್ಲಿ ಜಾರ್ಖಂಡನ ಕಾಂಗ್ರೆಸ್ಸಿನ ೩ ಶಾಸಕರ ಹತ್ತಿರ ಕೋಟ್ಯಂತರ ರೂಪಾಯಿ ನಗದು ದೊರೆತಿದೆ !

ಬಂಗಾಲದ ಹಾವಡ ಪೊಲೀಸರು ಜಾರ್ಖಂಡದ ಕಾಂಗ್ರೆಸ್ಸಿನ ಶಾಸಕ ಇರ್ಫಾನ್ ಅನ್ಸಾರಿ, ರಾಜೇಶ ಕಶ್ಯಪ, ಮತ್ತು ನಮನ ಬಿಸ್ಕಲ್ ಇವರನ್ನು ಬಂಧಿಸಿದ್ದಾರೆ. ಈ ಶಾಸಕರ ಹತ್ತಿರ ದೊಡ್ಡ ಪ್ರಮಾಣದಲ್ಲಿ ನಗದು ದೊರೆತಿದೆ.

ಅರ್ಪಿತಾ ಮುಖರ್ಜಿಗೆ ಸೇರಿದ ಇನ್ನೊಂದು ಮನೆಯಲ್ಲಿ ೨೯ ಕೋಟಿ ರೂಪಾಯಿ ನಗದು ಪತ್ತೆ !

ಬಂಗಾಲದ ಶಿಕ್ಷಕ ನೇಮಕಾತಿ ಹಗರಣ ಪ್ರಕರಣದಲ್ಲಿ ಈಡಿಯಿಂದ ರಾಜ್ಯದ ಸಚಿವ ಪಾರ್ಥ ಚಟರ್ಜಿ ಇವರ ಹತ್ತಿರದವರೆನ್ನಲಾದ ಅರ್ಪಿತಾ ಮುಖರ್ಜಿ ಇವರ ಉತ್ತರ ೨೪ ಪರಗಣ ಜಿಲ್ಲೆಯ ಬೇಲಘರಿಯಾದ ಇನ್ನೊಂದು ಮನೆಯ ಮೇಲೆ ದಾಳಿ ನಡೆಸಿ ೨೯ ಕೋಟಿ ರೂಪಾಯಿ ನಗದು ಮತ್ತು ೫ ಕೆಜಿ ಬಂಗಾರ ವಶಪಡಿಸಿಕೊಳ್ಳಲಾಗಿದೆ.

ಬಂಗಾಲದ ಉದ್ಯೋಗ ಸಚಿವ ಪಾರ್ಥ ಚಟರ್ಜಿ ಬಂಧನ

ತೃಣಮೂಲ ಕಾಂಗ್ರೆಸ್ಸಿನ ಮುಖ್ಯಸ್ಥೆ ಮತ್ತು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವಿಷಯದಲ್ಲಿ ಮೌನ ಏಕೆ ವಹಿಸಿದ್ದಾರೆ? ಅವರಿಗೆ ಈ ಆವ್ಯವಹಾರದ ಮಾಹಿತಿ ಇರಲಿಲ್ಲ, ಎಂದು ಅವರು ಹೇಳಲು ಸಾಧ್ಯವೇ ? ಈ ಪ್ರಕರಣದಿಂದಾಗಿ ಅವರು ರಾಜೀನಾಮೆ ನೀಡುವುದು ಅಪೇಕ್ಷಿತವಾಗಿದೆ.

ಬಂಗಾಲದಲ್ಲಿ ಅಧಿಕಾರದಲ್ಲಿರುವ ಪಕ್ಷ ಹಿಂದೂ ಧರ್ಮದ ಅವಮಾನ ನಿಲ್ಲಿಸಬೇಕು ! – ಬಂಗಾಲ ಸಾಧು ಸಮಾಜದಿಂದ ಎಚ್ಚರಿಕೆ

ಸಾಧುಗಳಿಗೆ ಈ ರೀತಿ ಒತ್ತಾಯಿಸಬೇಕಾಗುತ್ತದೆ ಎಂದರೆ ಮಮತಾ ಬ್ಯಾನರ್ಜಿ ಸರಕಾರಕ್ಕೆ ನಾಚಿಕೆಗೇಡಿನ ವಿಷಯ ! ಹಿಂದೂ ಧರ್ಮ ಮತ್ತು ರಾಷ್ಟ್ರ ಇದರ ಮೇಲಿನ ಆಘಾತ ತಡೆಯದೇ ಇರುವ ಮಮತಾ ಬ್ಯಾನರ್ಜಿ ಸರಕಾರವನ್ನು ಕೇಂದ್ರ ಸರಕಾರ ಅಮಾನತ್ತುಗೊಳಿಸಬೇಕು ಎಂದು ಹಿಂದೂಗಳು ಒತ್ತಾಯಿಸಿದ್ದಾರೆ.

ನೂಪುರ ಶರ್ಮಾ ಇವರ ಶಿರಚ್ಛೇದ ಮಾಡುವವರಿಗೆ ೫ ಲಕ್ಷ ನೀಡುತ್ತೇವೆ !

ತೃಣಮೂಲ ಕಾಂಗ್ರೆಸ್ ನಾಯಕ ವಾಸಿಂ ರಜಾ ಅವರು ನೂಪುರ ಶರ್ಮಾ ಅವರ ಶಿರಚ್ಛೇದ ಮಾಡಿ ತಲೆ ತರುವವರಿಗೆ ೫ ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಟ್ವಿಟರ್ ಬಳಕೆದಾರರಾದ ಅಂಶುಲ್ ಸಕ್ಸೇನಾ ಅವರು ವಾಸಿಂ ರಜಾ ಅವರ ಟ್ವೀಟ್‌ನ ಮಾಹಿತಿ ನೀಡಿದ್ದಾರೆ.

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಮುಖಂಡ ಮತ್ತು ಆತನ ಇಬ್ಬರು ಸಹಚರರ ಹತ್ಯೆ !

ಬಂಗಾಳದ ೨೪ ಪರಗಣ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ಮುಖಂಡ ಹಾಗೂ ಆತನ ಇಬ್ಬರು ಸಹಚರರನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ತೃಣಮೂಲ ಕಾಂಗ್ರೆಸ್ ಮುಖಂಡ ಮತ್ತು ಪಂಚಾಯತ್ ಸಮಿತಿ ಸದಸ್ಯ ಸ್ವಪನ್ ಮಾಝಿ ಅವರು ತಮ್ಮ ಇಬ್ಬರು ಸಹಚರರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು.