ಕೋಲಕತಾ (ಬಂಗಾಳ) – ತೃಣಮೂಲ ಕಾಂಗ್ರೆಸ್‌ನ ಮುಖಂಡ ಮತ್ತು ಮಾಜಿ ಕ್ರಿಕೆಟ ಪಟು ಕೀರ್ತಿ ಆಝಾದ ಇವರು ಅಕ್ಟೋಬರ ೧೬ ರಂದು ಸುಳ್ಳು ಹೇಳಿಕೆಯನ್ನು ಟ್ವೀಟ ಮಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇಯ ಸರಸಂಘಚಾಲಕ ಪೂ. ಮಾಧವರಾವ ಗೋಳವಲಕರ (ಗುರೂಜಿ)ಯವರನ್ನು ಅವಮಾನಗೊಳಿಸಿದ್ದಾರೆ. ‘ಗೋಳವಲಕರರು ಆಂಗ್ಲರ ಗುಲಾಮಗಿರಿ ಮಾಡಲು ಸಿದ್ಧರಿದ್ದರು; ಆದರೆ ದಲಿತರು, ಹಿಂದುಳಿದವರು ಮತ್ತು ಮುಸಲ್ಮಾನರಿಗೆ ಸಮಾನ ಅಧಿಕಾರ ನೀಡುವ ಸ್ವಾತಂತ್ರ್ಯ ಅವರಿಗೆ ಬೇಡವಾಗಿತ್ತು’, ಎನ್ನುವ ಸುಳ್ಳು ಹೇಳಿಕೆಯನ್ನು ಅವರ ಹೆಸರಿನಲ್ಲಿ ಮತ್ತು ಅವರ ಛಾಯಾಚಿತ್ರದೊಂದಿಗೆ ಆಝಾದರು ಟ್ವೀಟ್ ಮಾಡಿದ್ದಾರೆ. (ಭಗತಸಿಂಗ, ಗೋಳವಲಕರ ಗುರೂಜಿಯವರಂತಹ ರಾಷ್ಟ್ರಪುರುಷರಿಗೆ ಅವಮಾನಗೊಳಿಸಿ ರಾಜಕೀಯ ಸ್ವಾರ್ಥವನ್ನು ಸಾಧಿಸುವ ರಾಜಕಾರಣಿಗಳ ರಾಷ್ಟ್ರಪ್ರೇಮಿ ಜನತೆಯು ನ್ಯಾಯೋಚಿತ ಮಾರ್ಗದಿಂದ ಪ್ರತಿಕಾರ ಮಾಡಬೇಕು – ಸಂಪಾದಕರು)
Is this true?
क्या ये सच है?? pic.twitter.com/a56Bwuc2Na— Kirti Azad (@KirtiAzaad) October 16, 2022
೧. ಒಬ್ಬ ಟ್ವಿಟರ ಬಳಕೆದಾರನು, ಆಝಾದರು ಏನು ಬರೆದಿದ್ದಾರೆಯೋ, ಅದು ಎಲ್ಲವೂ ಸುಳ್ಳಾಗಿದ್ದು, ಅವರು ಬಾಯಿಮುಚ್ಚಿಕೊಂಡಿರಬೇಕು ಎಂದು ಬರೆದಿದ್ದಾರೆ.
೨. ಸುಶೀಲ ಅಗ್ರವಾಲರು ಇವರು, ಕೀರ್ತಿ ಆಝಾದರು ಯಾವ ಪುಸ್ತಕವನ್ನು ಉಲ್ಲೇಖಿಸಿದ್ದಾರೆಯೋ, ಆ ಪುಸ್ತಕವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಗುರೂಜಿಯವರು ನಿರಾಕರಿಸಿದ್ದರು ಎಂದು ಬರೆದಿದ್ದಾರೆ.
೩. ಇತರ ಅನೇಕ ಟ್ವಿಟರ ಬಳಕೆದಾರರು ಆಝಾದರು ನೀಡಿರುವ ಹೇಳಿಕೆ ಸುಳ್ಳಾಗಿರುವುದನ್ನು ಹೇಳಿದ್ದು, ಪೂ. ಗೋಳವಲಕರ ಗುರೂಜಿಯವರು ಇಂತಹ ಯಾವುದೇ ಟಿಪ್ಪಣೆಯನ್ನು ಮಾಡಿರಲಿಲ್ಲವೆಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಸಂಘ ಮತ್ತು ಪೂ. ಗೋಳವಲಕರ ಗುರೂಜಿಯವರ ವಿಷಯದಲ್ಲಿ ಎಳ್ಳಷ್ಟೂ ಜ್ಞಾನವಿಲ್ಲದೇ ಇರುವಾಗ ಸ್ವಂತ ಅಜ್ಞಾನವನ್ನು ತೋರಿಸುವ ತೃಣಮೂಲ ಕಾಂಗ್ರೆಸ್‌ನ ನಾಯಕ ! |