ಕೋಲಕಾತಾದ ಬಿಜೆಪಿ ಕಚೇರಿ ಬಳಿ ೫೧ ನಾಡಬಾಂಬ್‌ಗಳು ಪತ್ತೆ !

ಇಲ್ಲಿನ ಬಿಜೆಪಿ ಕಚೇರಿಯ ಬಳಿ ೫೧ ನಾಡಬಾಂಬ್‌ಗಳು ಪತ್ತೆಯಾಗಿವೆ. ಒಂದು ಚೀಲದಲ್ಲಿ ಈ ಬಾಂಬ್‌ಗಳನ್ನು ಇಡಲಾಗಿತ್ತು. ಈ ಮಾಹಿತಿ ಪಡೆದ ನಂತರ, ಬಾಂಬ್ ನಿಷ್ಕ್ರೀಯ ದಳವು ಸ್ಥಳಕ್ಕೆ ತಲುಪಿತು. ಈ ಎಲ್ಲಾ ಬಾಂಬ್‌ಗಳು ಕಡಿಮೆ ತೀವ್ರತೆಯ ಹೊಂದಿವೆ ಎಂದು ಹೇಳಲಾಗುತ್ತದೆ.

ಬಂಗಾಲದಲ್ಲಿ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಅವರ ವಾಹನದ ಮೇಲೆ ದಾಳಿ

ಎಲ್ಲಿ ಕೇಂದ್ರ ಸಚಿವರು ಸುರಕ್ಷಿತ ಇಲ್ಲವೋ, ಅಲ್ಲಿ ಜನ ಸಾಮಾನ್ಯರು ಹೇಗೆ ಸುರಕ್ಷಿತವಾಗಿರಲು ಸಾಧ್ಯ ? ಇಂತಹ ಘಟನೆಗಳು ಹೇಗೆ ನಡೆಯುತ್ತಿವೆ ?, ಈ ಬಗ್ಗೆ ಮಮತಾ ಬ್ಯಾನರ್ಜಿಯವರು ಹೇಳಬೇಕು !

ಐಪಿಎಲ್‌ನಲ್ಲಿ ಕೋಲ್ಕತಾ ತಂಡದ ೨ ಆಟಗಾರರು ಕರೋನಾ ಸೋಂಕು ತಗಲಿದ್ದರಿಂದ ಸ್ಪರ್ದೆ ರದ್ದು !

ಭಾರತದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ‘ಕೋಲ್ಕತಾ ನೈಟ್ ರೈಡರ್ಸ್’ ಸಂಘದ ಸ್ಪಿನ್ನರ್‌ಗಳಾದ ವರುಣ ಚಕ್ರವರ್ತಿ ಮತ್ತು ಸಂದೀಪ ವಾರಿಯರ್ ಅವರು ಕರೋನಾ ರೋಗಕ್ಕೆ ತುತ್ತಾಗಿದ್ದಾರೆ. ಜೊತೆಗೆ ಕೆಲವು ಆಟಗಾರರ ಆರೋಗ್ಯವು ಹದಗೆಟ್ಟಿದೆ ಎಂದು ಸಹ ಹೇಳಲಾಗುತ್ತಿದೆ.

‘ಹಿಂದೂಗಳ ಮತ್ತು ಮುಸಲ್ಮಾನರ ಮತಗಳ ವಿಭಜನೆಯನ್ನು ವಿರೋಧಿಸುವೆ!'(ಅಂತೆ) – ಮಮತಾ ಬ್ಯಾನರ್ಜಿಯ ನುಡಿಮುತ್ತು

ಚುನಾವಣಾ ಆಯೋಗವು ನನಗೆ ೧೦ ನೋಟಿಸ್ ಕಳುಹಿಸಬಹುದು; ಆದರೆ ಉತ್ತರ ಒಂದೇ ಆಗಿರುತ್ತದೆ. ಹಿಂದೂ ಮತ್ತು ಮುಸಲ್ಮಾನರ ಮತಗಳ ವಿಭಜನೆಯ ವಿರುದ್ಧ ನಾನು ಯಾವಾಗಲೂ ಧ್ವನಿ ಎತ್ತಲಿದ್ದೇನೆ.