ಕೋಲಕತಾದಲ್ಲಿ ದುರ್ಗಾಪೂಜೆ ಮಂಟಪದಲ್ಲಿ ಮ. ಗಾಂಧಿಯವರನ್ನು ರಾಕ್ಷಸರೂಪದಲ್ಲಿ ತೋರಿಸಿದರು

ಕೋಲಕತಾ (ಬಂಗಾಳ) – ಅಲ್ಲಿಯ ಅಖಿಲ ಭಾರತೀಯ ಹಿಂದೂ ಮಹಾಸಭೆಯ ದುರ್ಗಾಪೂಜೆಯಲ್ಲಿ ರಾಕ್ಷಸನೆಂದು ಮ. ಗಾಂಧಿಯವರಂತೆ ಕಾಣಿಸುವ ಒಂದು ಮೂರ್ತಿಯನ್ನು ಇರಿಸಲಾಗಿದ್ದು, ಶ್ರೀ ದುರ್ಗಾದೇವಿ ಆತನನ್ನು ಕೊಲ್ಲುತ್ತಿರುವಂತೆ ತೋರಿಸಲಾಗಿದೆ. ಇದಕ್ಕೆ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಭಾಜಪ, ಮಾಕಪ, ಕಾಂಗ್ರೆಸ್ ಸಹಿತ ಎಲ್ಲ ಪಕ್ಷಗಳು ಟೀಕಿಸಿವೆ. ಈ ಮೂರ್ತಿ ಧೋತರವನ್ನು ಧರಿಸಿದ್ದು, ಕೈಯಲ್ಲಿ ಕೋಲು ಹಿಡಿದಿರುವ ಯಥಾವತ್ತಾಗಿ ಮ. ಗಾಂಧಿಯವರಂತೆಯೇ ಕಾಣಿಸುವ ಮೂರ್ತಿಯನ್ನು ತಯಾರಿಸಲಾಗಿದೆ. ಈ ಮೂರ್ತಿಯ ಮತ್ತು ಮ. ಗಾಂಧಿಯವರ ನಡುವಿನ ಸಾಮ್ಯತೆ ಆಕಸ್ಮಿಕವಾಗಿದೆಯೆಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಅದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಚಳುವಳಿಯ ಗಾಂಧಿಯವರ ಪಾತ್ರವನ್ನು ಟೀಕಿಸುವುದು ಆವಶ್ಯಕವಾಗಿದೆಯೆಂದೂ ಆಯೋಜಕರು ಹೇಳಿದ್ದಾರೆ.


ಈ ವಿಷಯದಲ್ಲಿ ಸ್ಪಷ್ಟೀಕರಣ ನೀಡುವಾಗ ಅಖಿಲ ಭಾರತೀಯ ಹಿಂದೂ ಮಹಾಸಭೆಯ ಬಂಗಾಳ ಕಾರ್ಯಕಾರಿ ಅಧ್ಯಕ್ಷ ಚಂದ್ರಚೂರ ಗೋಸ್ವಾಮಿಯವರು, ತಲೆ ಬೋಳಾಗಿರುವ ಮತ್ತು ಚಷ್ಮಾ ಹಾಕಿರುವ ವ್ಯಕ್ತಿ ಮ. ಗಾಂಧಿಯೇ ಆಗಿರಬೇಕೆಂದೇನಿಲ್ಲ. ಇಲ್ಲಿ ತೋರಿಸಿರುವ ರಾಕ್ಷಸನ ಹತ್ತಿರ ಇರುವ ಆಯುಧ ಗಾಂಧಿಯವರ ಬಳಿ ಯಾವತ್ತೂ ಇರಲಿಲ್ಲ. ನಾವು ತೋರಿಸಿರುವ ಶ್ರೀ ದುರ್ಗಾದೇವಿಯು ವಧಿಸಿರುವ ರಾಕ್ಷಸ ಗಾಂಧಿಯಂತೆಯೇ ಕಾಣಿಸುವುದು ಕೇವಲ ಆಕಸ್ಮಿಕವಾಗಿದೆ ಎಂದು ಹೇಳಿದ್ದಾರೆ.

ರಾಜಕೀಯ ಪಕ್ಷಗಳು ಮಾಡಿರುವ ಟೀಕೆ

೧. ತೃಣಮೂಲ ಕಾಂಗ್ರೆಸ ಪ್ರದೇಶ ಕಾರ್ಯದರ್ಶಿ ಕುಣಾಲ ಘೋಷ ಇವರು, ಇದು ಭಾಜಪದ ನೈಜರೂಪವಾಗಿದೆ. ಮ. ಗಾಂಧಿ ದೇಶದ ರಾಷ್ಟ್ರಪಿತಾ ಆಗಿದ್ದಾರೆ. ಜಗತ್ತಿನಿಂದ ಗಾಂಧಿ ಮತ್ತು ಅವರ ವಿಚಾರಸರಣಿಯನ್ನು ಗೌರವಿಸಲಾಗುತ್ತದೆ. ಗಾಂಧಿಯವರನ್ನು ಈ ರೀತಿ ಅಪಮಾನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಇದನ್ನು ನಾವು ಬಹಿರಂಗವಾಗಿ ನಿಷೇಧಿಸುತ್ತೇವೆ ಎಂದು ಹೇಳಿದರು.

೨. ಮಾಕಪ ಕೇಂದ್ರೀಯ ಸಮಿತಿಯ ಸದಸ್ಯ ಸಮಿಕ ಲಹಿರಿಯವರು ಮಾತನಾಡುತ್ತಾ, ಭಾಜಪ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದವರಿಗೆ ಕೇವಲ ‘ಭಾರತದ ವಿಭಜನೆ ಹೇಗೆ ಮಾಡುವುದು?’ ಎಂದಷ್ಟೇ ತಿಳಿದಿದೆ. ಬ್ರಿಟಿಶ ವಿರೋಧಿ ಶಕ್ತಿಗಳಿಗೆ ವು ‘ರಾಕ್ಷಸ’ ಎಂದು ತಿಳಿಯುತ್ತಾರೆ. ಹಾಗೆಯೇ ಶ್ರೀ ದುರ್ಗಾ ಮಾತೆಯನ್ನು ಬ್ರಿಟಿಶ ಎಂದು ತಿಳಿಯುತ್ತಾರೆ ಎಂದು ಹೇಳಿದರು.

೩. ಕಾಂಗ್ರೆಸ್ಸಿನ ವಕ್ತಾರ ಸೋಮ್ಯ ರಾಯ ಇವರು, ರವೀಂದ್ರನಾಥ ಟ್ಯಾಗೋರರು ಗಾಂಧಿಯವರನ್ನು ‘ಮಹಾತ್ಮಾ’ ಎಂದು ಸಂಬೋಧಿಸಿದ್ದರು. ಇಂತಹ ಮಹಾನ ವ್ಯಕ್ತಿಯ ಅಪಮಾನ ದೇಶಕ್ಕೆ ನಾಚಿಕೆಗೇಡಾಗಿದೆ ಎಂದು ಹೇಳಿದರು.

೪. ಭಾಜಪದ ವಕ್ತಾರ ಸಮೀಕ ಭಟ್ಟಾಚಾರ್ಯರು ಭಾರತದ ನಿಲುವನ್ನು ಸ್ಪಷ್ಟಪಡಿಸುವಾಗ, ಇಂತಹ ವಿಷಯಗಳನ್ನು ನಾವು ಬೆಂಬಲಿಸುವುದಿಲ್ಲ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಆಡಳಿತಾಧಿಕಾರಿಗಳು ಆಯೋಜಕರ ಮೇಲೆ ಶೀಘ್ರವಾಗಿ ಕ್ರಮ ಜರುಗಿಸಬೇಕು ಎಂದು ಹೇಳಿದರು.