ಕೊಲಕಾತಾದಲ್ಲಿನ ನವರಾತ್ರೋತ್ಸವ ಮಂಟಪದಲ್ಲಿನ ದುರ್ಗಾದೇವಿಯನ್ನು ವೇಶ್ಯೆಯ ರೂಪದಲ್ಲಿ ತೋರಿಸಲಾಗಿದೆ !

ಕೊಲಕಾತಾ (ಬಂಗಾಳ) – ಇಲ್ಲಿನ ‘ನವಾಪಾರಾ ದಾದಾಭಾಯಿ ಸಂಘ ಪೂಜಾ ಸಮಿತಿ’ಯ ನವರಾತ್ರೋತ್ಸವ ಮಂಟಪದಲ್ಲಿ ಶ್ರೀ ದುರ್ಗಾದೇವಿಯನ್ನು ವೇಶ್ಯಾವಾಟಿಕೆ ಮಾಡುವ ಮಹಿಳೆಯ ರೂಪದಲ್ಲಿ ತೋರಿಸಲಾಗಿರುವ ಸಮಾಚಾರವು ‘ಆಪ್ ಇಂಡಿಯಾ’ ಎಂಬ ವಾರ್ತಾಜಾಲತಾಣವು ಪ್ರಕಟಿಸಿದೆ. ಈ ಮಂಟಪದ ಉದ್ಘಾಟನೆಯನ್ನು ತೃಣಮೂಲ ಕಾಂಗ್ರೆಸ್ಸಿನ ನೇತಾರರಾದ ಶತ್ರುಘ್ನ ಸಿನ್ಹಾ, ಸೌಗತ ರಾಯ ಹಾಗೂ ಮದನ ಮಿತ್ರಾರವರು ಮಾಡಿದ್ದಾರೆ. ಈ ದೇವಸ್ಥಾನದಲ್ಲಿನ ಮೊಟ್ಟಮೊದಲ ಬಾರಿಗೆ ಮೂರ್ತಿಯನ್ನು ಸಿಲಿಕಾನಿನಿಂದ (ರಾಸಾಯನಿಕ ಘಟಕದಿಂದ) ತಯಾರಿಸಲಾಗಿದೆ. ಕೊಲಕಾತಾದಲ್ಲಿಯೇ ಈ ಹಿಂದೆ ಶ್ರೀಭೂಮಿ ದುರ್ಗಾ ಪೂಜಾ ಮಂಟಪದಲ್ಲಿ ಕ್ರೈಸ್ತರ ಪ್ರಮುಖ ಧಾರ್ಮಿಕ ಸ್ಥಳವಾಗಿರುವ ವ್ಯಾಟಿಕನ್ ಸಿಟಿಯ ರಚನೆ ಮಾಡಿರುವುದು ಕಂಡುಬಂದಿತ್ತು.

ಈ ಮೇಲಿನ ಚಿತ್ರ ಪ್ರಕಟಿಸುವುದರ ಹಿಂದೆ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟು ಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ

ಸಂಪಾದಕೀಯ ನಿಲುವು

ಹಿಂದೂಗಳಿಗೆ ಧರ್ಮಶಿಕ್ಷಣ ಇಲ್ಲದಿರುವುದರಿಂದ ಅವರ ಅಧೋಗತಿಯಾಗುತ್ತಿದೆ ! ಹಿಂದೂಗಳು ಇದನ್ನು ಕಾನೂನುಬದ್ಧ ಮಾರ್ಗದಿಂದ ವಿರೋಧಿಸುವುದು ಅಪೇಕ್ಷಿತವಿದೆ !

‘ನಮ್ಮ ರಚನೆ ಮತ್ತು ಸಂಕಲ್ಪನೆಗಳು ಸಮಾಜವನ್ನು ಬದಲಾಯಿಸಲೆಂದೇ ಇವೆ!’(ಅಂತೆ) – ಸಂಕಲ್ಪನೆ ಮತ್ತು ನಿರ್ಮಾತ ಸಂದೀಪ ಮುಖರ್ಜೀ

ಶ್ರೀ ದುರ್ಗಾದೇವಿಯನ್ನು ವೇಶ್ಯೆಯ ರೂಪದಲ್ಲಿ ತೋರಿಸುವ ಸಂಕಲ್ಪನೆ ಹಾಗೂ ನಿರ್ಮಿತಿಯನ್ನು ಮಾಡುವ ಸಂದೀಪ ಮುಖರ್ಜಿಯವರು, ವೇಶ್ಯಾವಾಟಿಕೆಯು ಒಂದು ವೃತ್ತಿಯಾಗಿದೆ. ಜನಸಾಮಾನ್ಯರ ಅನುಸಾರ ಇದೊಂದು ವೃತ್ತಿಯಲ್ಲ ಹಾಗೂ ಈ ವೃತ್ತಿಯನ್ನು ಮಾಡುವ ಮಹಿಳೆಯರೂ ಈ ಬಗ್ಗೆ ತಾವಾಗಿಯೇ ಹೇಳುವುದಿಲ್ಲ. ಏಕೆಂದರೆ ಸಮಾಜವು ಅವರ ಬಗ್ಗೆ ವಿಭಿನ್ನವಾದ ದೃಷ್ಟಿಕೋನವನ್ನು ಹೊಂದಿದೆ. ನಮಗೆ ಈ ದೃಷ್ಟಿಕೋನವನ್ನು ಬದಲಾಯಿಸಬೇಕಿದೆ. ನಮ್ಮ ಸಂಕಲ್ಪನೆ ಹಾಗೂ ನಿರ್ಮಿತಿಯು ಸಮಾಜದ ಬದಲಾವಣೆಗಾಗಿ ಇದೆ. ನಾವು ವೇಶ್ಯಾವಾಟಿಕೆಯನ್ನು ಮಾಡುವವರಿಗೆ ಸಮಾಜದಲ್ಲಿ ಪ್ರವೇಶ ನೀಡುವುದಿಲ್ಲ. ಅವರು ತಮ್ಮ ಕೆಲಸವನ್ನು ಮಾಡುವಾಗ ನಾವು ಅವರ ಪ್ರವೇಶವನ್ನು ಏಕೆ ನಿರಾಕರಿಸುತ್ತೇವೆ ? ನಾವು ಮೂರ್ತಿಯಲ್ಲಿ ತಾಯಿಯ ರೂಪವನ್ನು ಜೋಡಿಸಿದ್ದೇವೆ, ಇದು ವೇಶ್ಯಾವಾಟಿಕೆಯನ್ನೇ ದರ್ಶಿಸುತ್ತದೆ’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂ ಸಮಾಜಕ್ಕೆ ಧರ್ಮದ ವಿಷಯದಲ್ಲಿ ಮಾರ್ಗದರ್ಶನ ಮಾಡುವ ಹಾಗೂ ಅವರಿಗೆ ಅದರಂತೆಯೇ ಕೃತಿ ಮಾಡಲು ಹೇಳುವ ಅಧಿಕಾರ ಶಂಕರಾಚಾರ್ಯರು, ಧರ್ಮಾಚಾರ್ಯರು, ಸಂತರು ಮುಂತಾದವರಿಗಿದೆ. ಯಾರಾದರೂ ತಮ್ಮ ಮನಸ್ಸಿಗೆ ಬಂದಂತೆ ಮಾಡಿದರೆ ಅದು ಅಯೋಗ್ಯವಾಗಿದೆ !

ಇಂದು ಸಮಾಜದಲ್ಲಿ ಎದ್ದುನಿಂತು ಹಿಂದೂ ಧರ್ಮದಲ್ಲಿನ ಶಾಸ್ತ್ರಗಳ ವಿರುದ್ಧ ಏನಾದರೂ ಹೇಳಿ ಅದರಂತೆ ಕೃತಿ ಮಾಡಲು ಪ್ರಯತ್ನಿಸುವಾಗ, ಆಗ ಅವರೊಂದಿಗೆ ಧರ್ಮಾಚಾರ್ಯರು ಮುಂದೆ ಬಂದು ಪ್ರತಿವಾದ ಮಾಡುವುದು ಆವಶ್ಯಕವಾಗಿದೆ !