ಭಾರತೀಯ ನೋಟುಗಳ ಮೇಲೆ ನೇತಾಜಿ ಸುಭಾಷ ಚಂದ್ರ ಬೋಸ ಇವರ ಛಾಯಾಚಿತ್ರವನ್ನು ಮುದ್ರಿಸಿ !

ಅಖಿಲ ಭಾರತೀಯ ಹಿಂದೂ ಮಹಾಸಭೆಯ ಬೇಡಿಕೆ !

ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್‌ನಿಂದ ಟೀಕೆ

ಕೊಲಕಾತಾ (ಬಂಗಾಲ) – ಭಾರತೀಯ ನೋಟುಗಳ ಮೇಲೆ ಮ. ಗಾಂಧಿ ಇವರ ಬದಲು ನೇತಾಜಿ ಸುಭಾಷ ಚಂದ್ರ ಬೋಸ ಇವರ ಛಾಯಾಚಿತ್ರ ಮುದ್ರಿಸಬೇಕೆಂದು ಅಖಿಲ ಭಾರತೀಯ ಹಿಂದೂ ಮಹಾಸಭೆಯಿಂದ ಒತ್ತಾಯಿಸಲಾಗಿದೆ.

ಬಂಗಾಲದಲ್ಲಿನ ಹಿಂದೂ ಮಹಾಸಭೆಯ ಕಾರ್ಯಾಧ್ಯಕ್ಷ ಚಂದ್ರಚೂಡ ಗೋಸ್ವಾಮಿ ಇವರು, ನೇತಾಜಿಯ ಸ್ವಾತಂತ್ರ್ಯ ಹೋರಾಟದಲ್ಲಿನ ಯೋಗದಾನ ಮ. ಗಾಂಧಿ ಅವರಿಗಿಂತ ಕಡಿಮೆ ಏನು ಇರಲಿಲ್ಲ. ನೇತಾಜಿ ಸುಭಾಷ ಚಂದ್ರ ಬೋಸ ಇವರಿಗೆ ಗೌರವ ನೀಡಲು ಇದು ಉತ್ತಮ ಮಾರ್ಗವಾಗಿದೆ, ಎಂದು ಹೇಳಿದರು.

೧. ಹಿಂದೂ ಮಹಾಸಭೆಯ ಒತ್ತಾಯದ ಮೇರೆಗೆ ಬಂಗಾಲದಲ್ಲಿನ ಭಾಜಪದ ವಕ್ತಾರರಾದ ಸಮೀಕ ಭಟ್ಟಾಚಾರ್ಯ ಇವರು, ಇಂತಹ ಸಮಸ್ಯೆಯ ಕಡೆಗೆ ಯಾವುದೇ ವಿಶಿಷ್ಟ ಸಮುದಾಯ ಅಥವಾ ಧರ್ಮದ ದೃಷ್ಟಿಯಿಂದ ನೋಡಬಾರದೆಂದು ಹೇಳಿದರು.

೨. ಅಖಿಲ ಭಾರತೀಯ ಹಿಂದೂ ಮಹಾಸಭೆಯ ಒತ್ತಾಯದ ಬಗ್ಗೆ ತೃಣಮೂಲ ಕಾಂಗ್ರೆಸ ಟೀಕಿಸುವಾಗ ಇದರ ಹಿಂದೆ ಭಾಜಪದ ಕೈವಾಡವಿದೆ. ಭಾಜಪ ಬಂಗಾಲದಲ್ಲಿ ಬಿರುಕು ಮೂಡಿಸುವ ರಾಜಕಾರಣ ನಿಲ್ಲಿಸಬೇಕೆಂದು ಟೀಕಿಸಿದ್ದಾರೆ.

೩. ಕಾಂಗ್ರೆಸ್ಸಿನ ನಾಯಕ ಅಧೀರ ರಂಜನ ಚೌದರಿ ಇವರು, ದೇಶದ ಸ್ವಾತಂತ್ರ್ಯದಲ್ಲಿ ಗಾಂಧೀಜಿಯವರ ಮಹತ್ವದ ಪಾಲು ಇದೆ. (ನೇತಾಜಿ ಸುಭಾಷ ಚಂದ್ರ ಬೋಸ ಇವರ ಪಾಲು ಎಷ್ಟು ಇತ್ತು, ಇದು ಚೌದರಿಯವರು ಏಕೆ ಹೇಳುವುದಿಲ್ಲ? ಭಾರತದ ವಿಭಜನೆಯಲ್ಲಿ ಮತ್ತು ಅದರ ನಂತರ ನಡೆದಿರುವ ೧೦ ಲಕ್ಷ ಹಿಂದೂಗಳ ಹತ್ಯೆಯ ಹಿಂದೆ ಕೂಡ ಗಾಂಧೀಜಿಯವರ ಮಹತ್ವದ ಪಾಲು ಇದೆ, ಎಂದು ಜನರಿಗೆ ಅನಿಸುತ್ತದೆ ! – ಸಂಪಾದಕರು) ರಾಷ್ಟ್ರಪಿತ ಇವರ ಹತ್ಯೆಯ ಹಿಂದೆ ಯಾರ ಕೈವಾಡ ಇದೆ, ಇದು ಎಲ್ಲರಿಗೂ ತಿಳಿದಿರುವ ವಿಷಯ. (ಗಾಂಧೀಜಿಯವರ ಹತ್ಯೆಯಲ್ಲಿ ಸ್ವಾತಂತ್ರ್ಯ ವೀರ ಸಾವಕರ ಇವರ ಕೈವಾಡ ಇಲ್ಲದೆ ಇದ್ದರೂ ಕೂಡ ಕಾಂಗ್ರೆಸ್ಸಿನವರು ಅವರನ್ನು ಇದರಲ್ಲಿ ಉದ್ದೇಶ ಪೂರ್ವಕವಾಗಿ ಸಿಲುಕಿಸುತ್ತಿದ್ದಾರೆ ಮತ್ತು ನಂತರ ನ್ಯಾಯಾಲಯವು ಅವರನ್ನು ಮುಕ್ತಗೊಳಿಸಿದ ನಂತರ ಕೂಡ ಇಂದಿಗೂ ಕಾಂಗ್ರೆಸ್ಸಿನವರು ಅವರನ್ನು ಈ ಪ್ರಕರಣದಲ್ಲಿ ಅಪರಾಧಿ ಎಂದು ತಿಳಿಯುತ್ತದೆ, ಇದರ ಉತ್ತರವನ್ನು ಕಾಂಗ್ರೆಸ್ಸಿಗರು ನೀಡುವರೆ ? – ಸಂಪಾದಕರು) ಇಂದು ಗಾಂಧೀಜಿಯವರ ಆದರ್ಶದ ಪ್ರತಿದಿನ ಹತ್ಯೆ ಮಾಡಲಾಗುತ್ತಿದೆ. (ಗಾಂಧೀಜಿಯವರ ಆದರ್ಶದ ಹತ್ಯೆ ಕಾಂಗ್ರೆಸ್ಸಿನವರೇ ಹೆಚ್ಚಾಗಿ ಮಾಡುತ್ತಿದ್ದಾರೆ, ಅದು ಪ್ರತಿಯೊಬ್ಬ ಭಾರತೀಯನು ನೋಡುತ್ತಿದ್ದಾನೆ ! – ಸಂಪಾದಕರು)

ಅಖಿಲ ಭಾರತ ಹಿಂದೂ ಮಹಾಸಭಾ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ

ಅಖಿಲ ಭಾರತೀಯ ಹಿಂದೂ ಮಹಾಸಭೆ ಬಂಗಾಲದಲ್ಲಿ ನಡೆಯುವ ಸಂಚಯತಿ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಣಯ ತೆಗೆದುಕೊಂಡಿದೆ ಎಂದು ಚಂದ್ರಚೂಡ ಗೋಸ್ವಾಮಿ ಅವರು, ರಾಜ್ಯದಲ್ಲಿ ಹಿಂದೂಗಳ ಮೇಲೆ ಪ್ರತಿದಿನ ದಾಳಿ ನಡೆಯುತ್ತಿದೆ. ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ಹಾಗೂ ಭಾಜಪ ಕೂಡ ಅವರಿಗೆ ಸಂರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ. ಅವರ ಹಕ್ಕಿಗಾಗಿ ನಾವು ಹೋರಾಡುತ್ತೇವೆ. ‘ಭಾಜಪವು ಬಂಗಾಲದ ವಿಭಜನೆಗೆ ಒತ್ತಾಯಿಸಿದೆ ನಾವು ಅದನ್ನು ಬೆಂಬಲಿಸಿಲ್ಲ’, ಎಂದು ಕೂಡ ಅವರು ಸ್ಪಷ್ಟಪಡಿಸಿದರು.

ಸಂಪಾದಕೀಯ ನಿಲುವು

ವಾಸ್ತವದಲ್ಲಿ ಈ ರೀತಿಯ ಬೇಡಿಕೆ ಸಲ್ಲಿಸದೇ ಸರಕಾರ ತಾವಾಗಿಯೇ ಈ ವಿಷಯ ಕೃತಿಯಲ್ಲಿ ತರುವುದು ಅವಶ್ಯಕ !