ಕೊಲಕಾತಾ – ಬಂಗಾಲದಲ್ಲಿನ ಮೊಮಿನಪುರ ಇಲ್ಲಿ ‘ಮಿಲಾದ್-ಉನ-ನಬಿ’ ಹಬ್ಬದ ಸಮಯದಲ್ಲಿ ಭಾರಿ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳು ನಡೆದಿವೆ. ಹಿಂದೂಗಳ ಅನೇಕ ವಾಹನಗಳು ಮತ್ತು ಅಂಗಡಿಗಳನ್ನು ನಾಶ ಮಾಡಲಾಯಿತು. ಅದರ ನಂತರ ಸಂಪೂರ್ಣ ಪ್ರದೇಶದಲ್ಲಿ ಎರಡು ಸಮುದಾಯದ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಭಾಜಪದ ನಾಯಕ ಸುವೆಂದು ಅಧಿಕಾರಿ ಇವರು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ಕೇಂದ್ರ ಸೈನ್ಯದಳವನ್ನು ನಿಯೋಜಿಸುವಂತೆ ಬೇಡಿಕೆ ಸಲ್ಲಿಸಿದ್ದಾರೆ.
West Bengal: Anti-Hindu violence reported from Kolkata’s Mominpore, BJP seeks urgent deployment of central forces. Here is what we know so farhttps://t.co/7wnPeCwqsv
— OpIndia.com (@OpIndia_com) October 10, 2022
ಪೊಲೀಸ ಮೂಲದಿಂದ ದೊರೆತಿರುವ ಮಾಹಿತಿಯ ಪ್ರಕಾರ ಮಿಲಾದ್ ಉನ್ ನಬಿ ಪ್ರಯುಕ್ತ ಮೋಮಿನಪುರದ ಏಕಬಾಲದಲ್ಲಿ ಅನಿರೀಕ್ಷಿತವಾಗಿ ಹಿಂಸಾಚಾರ ಭುಗಿಲೆದ್ದಿತು, ಈ ಸಮುದಾಯದ ಜನರು ಏಕಬಾಲಪುರ ಪೊಲೀಸ ಠಾಣೆಗೆ ಮುತ್ತಿಗೆ ಹಾಕಿದರು. ಅದರ ನಂತರ ಗುಂಪಿನಿಂದ ರಸ್ತೆಯಲ್ಲಿರುವ ವಾಹನಗಳನ್ನು ಮತ್ತು ಹತ್ತಿರದಲ್ಲಿರುವ ಅಂಗಡಿಗಳನ್ನು ಒಡೆದು ನಾಶ ಮಾಡಲಾಯಿತು. ಅನೇಕ ಸ್ಥಳಗಳಲ್ಲಿ ಬಾಂಬ ಎಸೆದಿರುವುದು ಮತ್ತು ಕಲ್ಲುತೂರಾಟ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಸಂಪೂರ್ಣ ಪರಿಸರದಲ್ಲಿ ಪೊಲೀಸರನ್ನು ನೇಮಕಗೊಳಿಸಲಾಗಿದೆ.
ಮೋಮಿನಪುರದ ಹಿಂಸಾಚಾರದ ನಂತರ ಭಾಜಪದ ನಾಯಕ ಡಾ. ಸುಕಾಂತ ಮುಜುಮದಾರ ಇವರು ಟ್ವಿಟರ್ ನಲ್ಲಿ ಒಂದು ವಿಡಿಯೋ ಪ್ರಸಾರಗೊಳಿಸಿದ್ದಾರೆ. ಇದರಲ್ಲಿ ಮಿಲಾದ್ ಉನ್ ನಬಿ ಹಬ್ಬ ಆಚರಿಸುವ ಸಮುದಾಯವು ಹಿಂದೂಗಳ ಅಂಗಡಿಗಳನ್ನು ಮತ್ತು ವಾಹನಗಳನ್ನು ನಾಶ ಮಾಡುತ್ತಿರುವುದು ಕಣಿಸುತ್ತದೆ. ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಎಂದಿನಂತೆ ಯಾವುದೇ ಕ್ರಮ ಕೈಗೊಳ್ಳದೆ ಆ ಜನರನ್ನು ಹಾಗೆ ಬಿಟ್ಟುಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಪಾದಕೀಯ ನಿಲುವು
|