ಮೊಮಿನಪುರ (ಕೊಲಕಾತಾ)ದಲ್ಲಿ ನಡೆದ ಹಿಂಸಾಚಾರದಲ್ಲಿ ‘ಅಲ್ ಕಾಯ್ದಾ’ ಮತ್ತು ‘ಐಸಿಸ್’ನ ಕೈವಾಡ ! – ಶುಭೇಂದು ಅಧಿಕಾರಿ, ವಿರೋಧ ಪಕ್ಷದ ನಾಯಕ, ಬಂಗಾಳ

ಬಂಗಾಳದ ವಿರೋಧ ಪಕ್ಷದ ನಾಯಕ ಶುಭೇಂದು ಅಧಿಕಾರಿ

ಕೋಲಕಾತಾ : ಕೋಲಕಾತಾದ ಮೊಮಿನಪುರ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ‘ಅಲ್ ಕಾಯ್ದಾ’ ಮತ್ತು ‘ಐಸಿಸ್’ ಕೈವಾಡ ಇದೆ ಎಂದು ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ಶಾಸಕ ಶುಭೇಂದು ಅಧಿಕಾರಿ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಕೋಲಕಾತಾ ಪೊಲೀಸ್ ಆಯುಕ್ತರನ್ನು ಭೇಟಿಯಾದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಶುಭೆಂದು ಅಧಿಕಾರಿ ಇವರು, ಮೋಮಿನಪುರದಲ್ಲಿ ನಡೆದ ಹಿಂಸಾಚಾರದ ಸಮಯದಲ್ಲಿ ೫ ಸಾವಿರ ಹಿಂದೂಗಳು ಕೋಲಕಾತಾದಿಂದ ಪಲಾಯನ ಮಾಡಿದ್ದಾರೆ ಎಂದು ಹೇಳಿದ್ದಾರೆ. ಶುಭೇಂದು ಅಧಿಕಾರಿ ಈ ಸಂಬಂಧ ವಿಧಾನಸಭೆಯಿಂದ ರಾಜಭವನದವರೆಗೆ ಮೆರವಣಿಗೆ ನಡೆಸಿ ನಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಅವರು ಕೇಂದ್ರ ಪೊಲೀಸ್ ಪಡೆಯನ್ನು ನಿಯೋಜಿಸುವಂತೆ ಒತ್ತಾಯಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಸಾರ ಮಾಧ್ಯಮಗಳೊಂದಿಗೆ ಮಾತನಾಡಿದ ಶುಭೇಂದು ಅಧಿಕಾರಿ, ಅವರು ಕೋಲಕಾತಾ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಹಿಂಸಾಚಾರದಿಂದ ಉದ್ಭವಿಸಿರುವ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಹಿಂಸಾಚಾರದಲ್ಲಿ ಗಾಯಗೊಂಡ ಮೂವರು ಪೊಲೀಸ್ ಅಧಿಕಾರಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.