ಗಡಿ ಭದ್ರತಾ ಪಡೆಯಿಂದ ನಡೆಸಲಾದ ಕಾರ್ಯಾಚರಣೆಯಲ್ಲಿ ಓರ್ವ ಬಾಂಗ್ಲಾದೇಶಿ ಗೋವು ಕಳ್ಳ ಸಾಗಾಣಿಕೆದಾರ ಹತ

ಕೊಲಕಾತಾ – ಬಂಗಾಲದ ನದಿಯಾ ಜಿಲ್ಲೆಯಲ್ಲಿನ ವಿಷ್ಣುಪುರ ಗಡಿಯ ಠಾಣೆಯಲ್ಲಿ ಗಡಿ ಭದ್ರತಾ ಪಡೆಯ ಸೈನಿಕರಿಂದ ನಡೆಸಲಾದ ಕಾರ್ಯಾಚರಣೆಯಲ್ಲಿ ಓರ್ವ ಬಾಂಗ್ಲಾದೇಶಿ ಗೋವು ಕಳ್ಳ ಸಾಗಾಣಿಕೆ ದಾರ ಹತನಾಗಿದ್ದಾನೆ. ಸೈನಿಕರು ಅಕ್ಟೋಬರ್ ೮ ರಂದು ರಾತ್ರಿ ೧೫ ರಿಂದ ೨೦ ಬಾಂಗ್ಲಾದೇಶಿ ಗೋ ಕಳ್ಳ ಸಾಗಾಣಿಕೆದಾರರ ಒಂದು ಗುಂಪಿಗೆ ಆಕಳು ಸಹಿತ ಗಡಿಯ ಹತ್ತಿರ ತಡೆದಿದ್ದರು ಆಗ ಗುಂಪಿನವರು ಸೈನಿಕರನ್ನು ಸತ್ತವರೆದಿದ್ದರು ಮತ್ತು ಹರಿತವಾದ ಶಸ್ತ್ರಾಸ್ತ್ರಗಳಿಂದ ಮತ್ತು ಕೋಲುಗಳ ಮೂಲಕ ದಾಳಿ ನಡೆಸಿದರು. ಕಳ್ಳ ಸಾಗಾಣಿಕೆದಾರರನ್ನು ಹೆದರಿಸುವದಕ್ಕಾಗಿ ಸೈನಿಕರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದರು; ಆದರೆ ಕಳ್ಳ ಸಾಗಾಣಿಕೆ ದಾರರಿಂದ ದಾಳಿ ಮುಂದುವರೆದಿತ್ತು. ಆಗ ಒಬ್ಬ ಸೈನಿಕನು ಇನ್ನೊಮ್ಮೆ ಗುಂಡಿನ ದಾಳಿ ನಡೆಸಿದನು. ಅದರಲ್ಲಿ ಒಬ್ಬ ಕಳ್ಳಸಾಗಾಣಿಕೆದಾರಾ ಗಂಭೀರವಾಗಿ ಗಾಯಗೊಂಡನು. ಅದರ ನಂತರ ಅವನು ಸಾವನ್ನಪ್ಪಿದನು. ಕಳ್ಳ ಸಾಗಾಣಿಕೆದಾರರ ಗುಂಪಿನಲ್ಲಿನ ಇತರ ಸದಸ್ಯರು ಅವಕಾಶ ದೊರೆಯುತ್ತಲೇ ಬಾಂಗ್ಲಾದೇಶದ ಕಡೆಗೆ ಪಲಾಯನ ಮಾಡಿದರು.

ಅಸ್ಸಾಂನಲ್ಲಿ ಮಾದಕ ವಸ್ತುಗಳ ದಲ್ಲಾಳಿ ಸಾವು

ಇನ್ನೊಂದು ಘಟನೆಯಲ್ಲಿ ಅಸ್ಸಾಂನ ತಿನಿಸುಕಿಯಾ ಜಿಲ್ಲೆಯಲ್ಲಿ ಪೊಲೀಸರು ಮಾದಕ ವಸ್ತುಗಳ ಮಾರುವ ಒಬ್ಬ ದಲ್ಲಾಳಿಯ ಮನೆಯ ಮೇಲೆ ದಾಳಿ ನಡೆಸಿದರು. ಆ ಸಮಯದಲ್ಲಿ ದಲ್ಲಾಲಿಯ ಗುಂಪಿನಿಂದ ಪೊಲೀಸ ದಳದ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಪ್ರತ್ಯುತ್ತರವೆಂದು ಪೊಲೀಸರು ಒಬ್ಬ ೩೬ ವಯಸ್ಸಿನ ಅನುಮಾನಸ್ಪದ ವ್ಯಕ್ತಿಯ ಕಾಲಿಗೆ ಗುಂಡು ಹಾರಿಸಿದ್ದರಿಂದ ಹೆಚ್ಚು ರಕ್ತ ಸ್ರಾವ ಆಗಿ ಆಸ್ಪತ್ರೆಗೆ ಕೊಂಡೊಯ್ಯುವಾಗ ಅವನು ಸಾವನ್ನಪ್ಪಿದನು. ಅವನ ಇತರ ೩ ಸಹಚರರನ್ನು ಬಂಧಿಸಲಾಗಿದೆ.