* ಕಾಶ್ಮೀರಿ ಹಿಂದೂಗಳ ನರಸಂಹಾರ ಇದು ಮತಾಂಧರು ಹಿಂದೂಗಳ ವಿರುದ್ಧ ಕರೆ ನೀಡಿರುವ ಜಿಹಾದ್ ವೇ ಆಗಿತ್ತು. ಇಂತಹ ಜಿಹಾದಿಗಳ ಮೇಲೆ ಕ್ರಮಕೈಗೊಳ್ಳುವಂತೆ ಶಾಸಕ ಅಜ್ಮಲ್ ಮತ್ತು ಅವನ ಧರ್ಮ ಬಾಂಧವರು ತಪ್ಪಿಯೂ ಒತ್ತಾಯಿಸುವುದಿಲ್ಲ, ತದ್ವಿರುದ್ಧ ಈ ಚಲನಚಿತ್ರದ ಮೇಲೆ ನಿಷೇಧ ಹೇರಬೇಕೆಂದು ಒತ್ತಾಯಿಸುತ್ತಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! -ಸಂಪಾದಕರು * ಶಾಸಕ ಅಜ್ಮಲ ಇವರ ಈ ಬೇಡಿಕೆ ಎಂದರೆ ಸತ್ಯವನ್ನು ಮುಚ್ಚಿಡುವ ಪ್ರಯತ್ನವಾಗಿದೆ, ಹೀಗೆ ಅಸತ್ಯದ ಪರವಹಿಸುವ ಶಾಸಕ ಹೇಗೆ ಆಡಳಿತ ನಡೆಸುತ್ತಿರಬಹುದು, ಇದರ ವಿಚಾರ ಮಾಡದೇ ಇರುವುದೇ ಒಳ್ಳೆಯದು ! -ಸಂಪಾದಕರು |
ಗುಹಾಟಿ (ಅಸ್ಸಾಂ) – ಪ್ರಸ್ತುತ ಬಿಡುಗಡೆಯಾಗಿರುವ `ದ ಕಶ್ಮೀರ ಫೈಲ್ಸ್’ ಈ ಚಲನಚಿತ್ರವನ್ನು ಕೇಂದ್ರ ಸರಕಾರ ಹಾಗೂ ಅಸ್ಸಾಂ ರಾಜ್ಯ ಸರಕಾರ ಇವರು ನಿಷೇಧಿಸಬೇಕು, ಇಲ್ಲದಿದ್ದರೆ ಸಮಾಜದಲ್ಲಿ ಧಾರ್ಮಿಕ ಬಿರುಕು ನಿರ್ಮಾಣವಾಗಬಹುದು ಎಂದು ಅಸ್ಸಾಂನಲ್ಲಿನ ಧುಬರಿಯಲ್ಲಿನ ಶಾಸಕ ಬದರುದ್ದಿನ್ ಅಜ್ಮಲ್ ಹೇಳಿದರು. ಅವರು ಮಾತನ್ನು ಮುಂದುವರೆಸುತ್ತಾ, “ನಾನು ಈ ಚಲನಚಿತ್ರವನ್ನು ನೋಡಿಲ್ಲ ಆದರೂ ದೇಶದಲ್ಲಿ ಇಂದು ಮೊದಲಿನ ಹಾಗೆ ಪರಿಸ್ಥಿತಿ ಉಳಿದಿಲ್ಲ. ಕಾಶ್ಮೀರ ಹೊರತುಪಡಿಸಿ ಇಂತಹ ಅನೇಕ ರೀತಿಯ ಘಟನೆಗಳು ನಡೆದಿವೆ. ಅದರ ಬಗ್ಗೆ ಯಾರು ಚಲನಚಿತ್ರ ನಿರ್ಮಿಸಿಲ್ಲ.” ಎಂದು ಹೇಳಿದರು.
AIUDF chief and ex-Congress ally Badruddin Ajmal demands ban on ‘The Kashmir Files’, says the movie will stoke communal tensions https://t.co/VIIFU2mKfi
— OpIndia.com (@OpIndia_com) March 16, 2022
ಕಾಶ್ಮೀರ ಪ್ರಕರಣದಲ್ಲಿ ನಿವೃತ್ತ ನ್ಯಾಯಾಧೀಶರ ಮೂಲಕ ವಿಚಾರಣೆ ನಡೆಸಿ ! – ಫಾರೂಖ ಅಬ್ದುಲ್ಲಾ
ಕಾಶ್ಮೀರ್ ಪ್ರಕರಣದ ಸತ್ಯ ಹೊರತರಲು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಮೂಲಕ ವಿಚಾರಣೆ ನಡೆಸಬೇಕು, ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಒತ್ತಾಯಿಸಿದರು. ಅಬ್ದುಲ್ಲಾ ಮಾತನ್ನು ಮುಂದುವರೆಸುತ್ತಾ, “ಪ್ರತಿಯೊಂದು ಚಲನಚಿತ್ರದಲ್ಲಿ ತನ್ನದೇ ಆದ ಒಂದು ದಂತಕಥೆ ಇರುತ್ತದೆ ಮತ್ತು ಪ್ರತಿಯೊಂದು ದಂತಕಥೆಯಲ್ಲಿ ಸತ್ಯ ಇರಲೇಬೇಕು, ಹಾಗೇನು ಇಲ್ಲ. ಆದ್ದರಿಂದ ಸತ್ಯ ಹೊರತರಲು ಕಾಶ್ಮೀರದಲ್ಲಿನ ಘಟನೆಗಳು ಹೇಗೆ ನಡೆದವು ?, ಏಕೆ ನಡೆದವು ? ಯಾರು ಮಾಡಿದರು ? ಮುಂತಾದ ವಿಷಯಗಳ ವಿಚಾರಣೆ ನಡೆಯಬೇಕು ಎಂದು ಹೇಳಿದರು.