ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಎನ.ವಿ. ರಮಣ ಇವರಿಂದ ಸಿಬಿಐಗೆ ಛೀಮಾರಿ !
ಭಾರತದ ನ್ಯಾಯಾಧೀಶರು ನೇರ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ, ಎಂದರೆ ಕೇಂದ್ರೀಯ ತನಿಖಾ ದಳ ಇಲ್ಲಿಯವರೆಗೆ ಎಲ್ಲಾ ಆಡಳಿತಗಾರರ ಹಿಂಬಾಲಕರಾಗಿ ಅವರ ಆದೇಶದ ಪ್ರಕಾರ ಕಾರ್ಯ ಮಾಡುತ್ತಿತ್ತು. ಅದರಿಂದ ತಪ್ಪಿತಸ್ಥರಿಗೆ ಸ್ವಾತಂತ್ರ ಹಾಗೂ ನಿರಪರಾಧಿಗಳ ಮೇಲೆ ಕ್ರಮಕೈಗೊಳ್ಳಲಾಗುತ್ತಿತ್ತು, ಎಂಬುದು ಸ್ಪಷ್ಟವಾಗುತ್ತದೆ !
ನವದೆಹಲಿ – ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ವಿಶ್ವಾಸ ಕಳೆದುಕೊಂಡಿದೆ. ನಿಮಗೆ ವಿಶ್ವಾಸ ಮತ್ತೆ ಗಳಿಸಬೇಕಿದ್ದರೆ, ಮೊದಲು ನೀವು ರಾಜಕಾರಣಿಗಳ ಜೊತೆಗಿರುವ ಸಂಬಂಧ ಕಳೆದುಕೊಳ್ಳಬೇಕು ಮತ್ತು ವಿಶ್ವಾಸ ಪುನಃ ಗಳಿಸಲು ಮತ್ತೆ ಕೆಲಸ ಮಾಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ವಿ. ರಮಣ ಇವರು ಹೇಳಿದರು. ‘ಪ್ರಜಾಪ್ರಭುತ್ವದಲ್ಲಿ ತನಿಖಾ ದಳದ ಪಾತ್ರ ಮತ್ತು ಜವಾಬ್ದಾರಿ’ ಈ ವಿಷಯವಾಗಿ ವ್ಯಾಖ್ಯಾನದಲ್ಲಿ ಅವರು ಮಾತನಾಡುತ್ತಿದ್ದರು.
ನ್ಯಾಯಾಧೀಶರು ತಮ್ಮ ಮಾತನ್ನು ಮುಂದುವರೆಸುತ್ತಾ,
೧. ಆಡಳಿತಗಾರರು ಕಾಲಕ್ಕೆ ತಕ್ಕಂತೆ ಬದಲಾಗುತ್ತಾರೆ; ಆದರೆ ನೀವು (ಸಿಬಿಐ) ಶಾಶ್ವತವಾಗಿ ಇರುವರು.
೨. ಪೊಲೀಸರ ಕಾರ್ಯವೈಖರಿ ಇಂದಿಗೂ ಬ್ರಿಟಿಷರ ಕಾಲದ್ದಾಗಿದೆ. ಅದನ್ನು ಬದಲಾಯಿಸುವ ಅವಶ್ಯಕತೆ ಇದೆ.
೩. ಸಿಬಿಐ ಜೊತೆ ಎಲ್ಲಾ ತನಿಖಾ ದಳವನ್ನು ಒಂದೇ ಸೂರಿನಡಿಯಲ್ಲಿ ತರುವುದು ಅವಶ್ಯಕವಾಗಿದೆ. ಅದಕ್ಕಾಗಿ ಸ್ವಾಯತ್ತ ತನಿಖಾ ದಳ ನಿರ್ಮಾಣ ಮಾಡಬೇಕು. ಅದರ ಜವಾಬ್ದಾರಿಯನ್ನು ಸ್ವತಂತ್ರ ವ್ಯಕ್ತಿಯ ಕಡೆಗೆ ನೀಡಬೇಕು.
೪. ಕೇಂದ್ರೀಯ ದಳದ ಕಡೆ ಕೆಲಸದ ಒತ್ತಡ ಹೆಚ್ಚಾಗಿದೆ, ಹಾಗೂ ಅವರ ಹತ್ತಿರ ಸೌಲಭ್ಯಗಳ ಕೊರತೆಯೂ ಇದೆ. ಸಿಬಿಐ ಹತ್ತಿರ ಆಧುನಿಕ ತಂತ್ರಜ್ಞಾನ, ನುರಿತ ಅಧಿಕಾರಿಗಳ ಜೊತೆಗೆ ಮೂಲಭೂತ ಸೌಲಭ್ಯಗಳು ಲಭ್ಯವಿಲ್ಲ. ಆದ್ದರಿಂದ ಬಹಳಷ್ಟು ಸಾರಿ ಮೊಕದ್ದಮೆ ನಡೆಸುವುದು ಕಷ್ಟವಾಗುತ್ತದೆ ಎಂದು ಹೇಳಿದರು.