೧. ‘ಲವ್ ಜಿಹಾದ್’ ಕಾನೂನು ಜಾರಿಗೊಂಡ ಬಳಿಕ ವಿರೋಧಿಗಳು ಮಾಡಿರುವ ವಾದದ ೨ ವಿಧಗಳು !
‘ಗುಜರಾತ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ‘ಲವ್ ಜಿಹಾದ್’ ಕಾನೂನು ಜಾರಿಯಾಗಿದೆ. ಅದನ್ನು ಅನೇಕರು ಕಟುವಾಗಿ ವಿರೋಧಿಸುತ್ತಿದ್ದಾರೆ. ವಿರೋಧಿಗಳ ಯುಕ್ತಿವಾದದಲ್ಲಿ ಎರಡು ವಿಧಗಳಿವೆ. ಮೊದಲ ವಿಧವೆಂದರೆ ‘ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ, ಆದುದರಿಂದ ಯಾರು ಬೇಕಾದರೂ ಯಾರೊಂದಿಗೂ ವಿವಾಹವಾಗಬಹುದು, ಹಾಗೆಯೇ ವಿಚ್ಛೇದನೆಯನ್ನು ಕೂಡ ಪಡೆಯಬಹುದು. ಹೀಗಿರುವಾಗ ವಿವಾಹಿತರ ವೈಯಕ್ತಿಕ ಜೀವನದಲ್ಲಿ ರಾಜ್ಯಸರಕಾರ ಏಕೆ ಮೂಗು ತೂರಿಸಬೇಕು ?’ ಎರಡನೇಯ ಯುಕ್ತಿವಾದವೆಂದರೆ ‘ಲವ್ ಜಿಹಾದ್’ ಹೆಸರಿನ ಸಂಕಲ್ಪನೆಯೇ ಅಸ್ತಿತ್ವದಲ್ಲಿಲ್ಲ. ೨೦೧೭ ನೇ ಇಸವಿಯಲ್ಲಿ ಕೇರಳ ರಾಜ್ಯದಲ್ಲಿ ಘಟಿಸಿದ ಹದಿಯಾ ಪ್ರಕರಣ ನಿಮಗೆ ನೆನಪಿರಬಹುದು. ಹಿಂದೂ ಯುವತಿಯು ಮುಸಲ್ಮಾನ ಧರ್ಮವನ್ನು ಸ್ವೀಕರಿಸಿದ ನಂತರ ಶಫೀನ ಜಹಾನನೊಂದಿಗೆ ವಿವಾಹವಾದಳು. ಈ ಪ್ರಕರಣದಲ್ಲಿ ಯುವತಿಯ ತಂದೆ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು. ದೂರಿನ ತೀರ್ಪು ತಂದೆಯ ಪರವಾಗಿ ಬಂದಿದ್ದರಿಂದ ಅದನ್ನು ವಿರೋಧಿಸಿ ಯುವತಿಯ ಪತಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋದನು. ಹಿರಿಯ ನ್ಯಾಯವಾದಿ ಕಪಿಲ ಸಿಬ್ಬಲ್‌ರು ಅವನ ಪರವಾಗಿ ವಾದಿಸಿದರು. ಅವರ ಲಕ್ಷಗಟ್ಟಲೇ ಇರುವ ಶುಲ್ಕವನ್ನು ‘ಪಿಎಫ್‌ಐ (ಪಾಪ್ಯುಲರ ಫ್ರಂಟ್ ಆಫ್ ಇಂಡಿಯಾ)’ ನೀಡಿದೆ ಎಂದು ವಿವಾದ ನಿರ್ಮಾಣವಾಗಿತ್ತು. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರೀಯ ತನಿಖಾ ದಳಕ್ಕೆ ತನಿಖೆಯನ್ನು ಮಾಡಲು ಹೇಳಿತ್ತು. ಅದು ‘ಲವ್ ಜಿಹಾದ್’ ಹೆಸರಿನ ಸಂಕಲ್ಪನೆಯೇ ಅಸ್ತಿತ್ವದಲ್ಲಿ ಇಲ್ಲ, ಎಂದು ಹೇಳಿತು. ಇದರಿಂದ ಹಿಂದುತ್ವನಿಷ್ಠರಿಗೆ ಸ್ವಲ್ಪ ಅಡಚಣೆಯೂ ಆಯಿತು.
ಅರ್ಥಾತ್ ಈ ಎರಡೂ ಯುಕ್ತಿವಾದಗಳಿಗೆ ಉತ್ತರಗಳೂ ಇವೆ. ಅಭಿವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ಕಾನೂನು-ಸುವ್ಯವಸ್ಥೆ, ಹಾಗೆಯೇ ಆರೋಗ್ಯ ಮತ್ತು ನೈತಿಕತೆಯನ್ನು ಹಾಳು ಮಾಡಲು ಬರುವುದಿಲ್ಲ. ಆದುದರಿಂದ ಇಂತಹ ಯಾವುದೇ ಕೃತಿಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಾಡಲು ಬರುವುದಿಲ್ಲ, ಉದಾ. ರಸ್ತೆಯಲ್ಲಿ ಕುಳಿತು ಮದ್ಯಪಾನ ಮಾಡಲು ಬರುವುದಿಲ್ಲ. ಯಾವುದಾದರೊಬ್ಬ ವ್ಯಕ್ತಿ ೩ ಅಥವಾ ೪ ವಿವಾಹಗಳನ್ನು ಮಾಡಿಕೊಳ್ಳಬಹುದು ಮತ್ತು ವಿಚ್ಛೇದನೆಗಳನ್ನೂ ಪಡೆಯಬಹುದು; ಆದರೆ ಅದರಲ್ಲಿ ಏನಾದರೂ ಷಡ್ಯಂತ್ರವಿದೆಯೇ ? ಪ್ರತಿಯೊಂದು ಪ್ರಕರಣದಲ್ಲಿ ಹಿಂದೂ ಯುವತಿಯರನ್ನೇ ಮತಾಂತರಗೊಳಿಸಲಾಗಿದೆ ಮತ್ತು ಸ್ವಲ್ಪ ಸಮಯದ ಬಳಿಕ ಅವರನ್ನು ತ್ಯಜಿಸಲಾಗಿದೆ ಮತ್ತು ಇದರಿಂದ ಹಣವನ್ನೂ ಸಂಪಾದಿಸಲಾಗಿದೆ, ಹೀಗೇನಾದರೂ ಆಗಿದೆಯೇ ? ಹೀಗಾಗಿದ್ದರೆ ಅದು ಅಪರಾಧವಲ್ಲವೇ ? ಈ ರೀತಿ ರೀತಿಯಲ್ಲಿ ಮಾಡುವವನಿಗೆ ಶಿಕ್ಷೆ ಯಾಗಬಾರದೇ ?
೨. ‘ಲವ್ ಜಿಹಾದ್’ನಿಂದ ಹೊರಗೆ ಬರಲು ಇಚ್ಛಿಸುವವರು ಅದರಿಂದ ಹೇಗೆ ಹೊರಗೆ ಬರಬೇಕು ಮತ್ತು ಅವರಿಗೆ ಸಹಾಯ ಮಾಡಲು ಇಚ್ಛಿಸುವ ಹಿಂದೂ ಬಾಂಧವರು ಕಾನೂನನ್ನು ಹೇಗೆ ಉಪಯೋಗಿಸಬೇಕು ?
ಒಂದು ವೇಳೆ ‘ಲವ್ ಜಿಹಾದ್’ ಅಸ್ತಿತ್ವದಲ್ಲಿಯೇ ಇಲ್ಲದಿದ್ದರೆ, ಕಾನೂನು ಏತಕ್ಕೆ ಮಾಡುತ್ತೀರಿ ? ಏಕೆ ಚಿಂತೆಯನ್ನು ಮಾಡುತ್ತೀರಿ ? ಯಾರಿಗೂ ತೊಂದರೆಯಾಗುವುದಿಲ್ಲ. ಒಂದು ಜನಾಭಿಪ್ರಾಯ ಸಿದ್ಧವಾಗಿದ್ದರೆ, ಅದನ್ನು ಗೌರವಿಸಬೇಕು. ಇಷ್ಟು ವರ್ಷಗಳ ವರೆಗೆ ಕಾಂಗ್ರೆಸ್ ಮತ್ತು ಅದಕ್ಕಿಂತ ಮೊದಲು ಬ್ರಿಟಿಷರು ಮುಸ್ಲಿಂ ಜನಾಭಿಪ್ರಾಯದ ಗೌರವವನ್ನು ರಕ್ಷಿಸಿದರಲ್ಲವೇ ? ಅದನ್ನು ಹೇಗೆ ಕಾಪಾಡಿದರು ಅದರ ಉತ್ತರ ಈ ಲೇಖನದಲ್ಲಿ ಸಿಗುವುದು; ಆದರೆ ಕೇವಲ ಅದಕ್ಕೆ ಉತ್ತರ ಕೊಡುವುದೊಂದೇ ಈ ಲೇಖನದ ಉದ್ದೇಶವಾಗಿಲ್ಲ. ಹಿಂದೂ ಸ್ತ್ರೀಯರನ್ನು ಮತಾಂತರಿಸಿ, ಅವರನ್ನು ವಿವಾಹವಾಗುತ್ತಾರೆ. ಒಂದು ವೇಳೆ ಅವರಿಗೆ ಇದರಿಂದ ಹೊರಗೆ ಬರಬೇಕಾಗಿದ್ದರೆ, ಹೇಗೆ ಹೊರಗೆ ಬರಬೇಕು ಮತ್ತು ಅವರಿಗೆ ಸಹಾಯ ಮಾಡಲಿಚ್ಛಿಸುವ ಹಿಂದೂ ಬಾಂಧವರು ಕಾನೂನನ್ನು ಹೇಗೆ ಉಪಯೋಗಿಸಬೇಕು ? ಎನ್ನುವುದೇ ಈ ಲೇಖನದ ಮೂಲ ಉದ್ದೇಶವಾಗಿದೆ.
೩. ಇಸ್ಲಾಂನಲ್ಲಿ ಮಹಿಳೆಯರು ‘ತಲಾಕ್’ (ವಿಚ್ಛೇದನೆ) ತೆಗೆದುಕೊಳ್ಳುವ ಸಾಮಾನ್ಯ ಪದ್ಧತಿಯ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಒಂದು ಬೇರೆ ಟಿಪ್ಪಣಿಯನ್ನು ಹಾಕಿಟ್ಟಿದೆ, ಅದರಿಂದ ಅವರಿಗೆ ವಿಚ್ಛೇದನೆ ಪಡೆಯಲು ಅಡಚಣೆ ಆಗುತ್ತಿದೆ
(ಟಿಪ್ಪಣಿ : ಸರ್ವೋಚ್ಚ ನ್ಯಾಯಾಲಯವು ಮುಫ್ತಿಗಳ (ಮುಸ್ಲಿಂ ಮಾರ್ಗದರ್ಶಕರ) ಮಾರ್ಗದರ್ಶನವನ್ನು ಪಡೆದುಕೊಳ್ಳುವ ಬಗ್ಗೆ ಹೇಳಿದೆ; ಆದರೆ ಮುಫ್ತಿಗಳು ಸಲಹೆಯನ್ನು ಕೊಡದೇ ಇರುವುದರಿಂದ ಅಡಚಣೆ ನಿರ್ಮಾಣವಾಗುತ್ತದೆ.) ಅನೇಕ ಸಲ ಕಂಡು ಬರುವುದೇನೆಂದರೆ, ಮುಸಲ್ಮಾನನ ಪ್ರೇಮದಲ್ಲಿ ಸಿಲುಕಿರುವ ಹಿಂದೂ ಮಹಿಳೆ ಮೊದಲು ಧರ್ಮವನ್ನು ಬದಲಾಯಿಸುತ್ತಾಳೆ. ಯಾವುದಾರೊಬ್ಬ ಮೌಲ್ವಿ ಕಡೆಗೆ ಅವಳನ್ನು ಕರೆದುಕೊಂಡು ಹೋಗಿ ಮತಾಂತರಗೊಳಿಸಲಾಗುತ್ತದೆ. ಅವಳಿಂದ ಒಂದು ಸತ್ಯ ಪ್ರತಿಜ್ಞಾಪತ್ರವನ್ನು ಪಡೆದುಕೊಳ್ಳಲಾಗುತ್ತದೆ. ಅದರಲ್ಲಿ ‘ನಾನು ಸ್ವಇಚ್ಛೆಯಿಂದ ಧರ್ಮವನ್ನು ಬದಲಾಯಿಸುತ್ತಿದ್ದೇನೆ ಮತ್ತು ನನಗೆ ನನ್ನ ತಂದೆ-ತಾಯಿಯ ಬಳಿಗೆ ಹೋಗುವ ಇಚ್ಛೆಯಿಲ್ಲ’, ಎಂದು ಬರೆಯಲಾಗಿರುತ್ತದೆ. ಪ್ರೇಮದಲ್ಲಿ ಕುರುಡಾಗಿರುವ ಮಹಿಳೆಗೆ ಇದರಲ್ಲಿ ಏನೂ ತಪ್ಪೆನಿಸುವುದಿಲ್ಲ. ಅಲ್ಲಿಯವರೆಗೆ ಅವಳು ಮನೆಯಿಂದ ಓಡಿಯೂ ಹೋಗಿರುತ್ತಾಳೆ. ಬಳಿಕ ಅವರಿಬ್ಬರ ‘ನಿಕಾಹ್’ (ವಿವಾಹ) ಆಗುತ್ತದೆ. ಯಾವುದಾದರೊಬ್ಬ ಕಾಝಿ ಈ ನಿಕಾಹ ಮಾಡುತ್ತಾನೆ. ನಿಕಾಹನಾಮಾ ಅವಳ ಪತಿಯ ಕಡೆಗೆ ಕೊಡಲಾಗುತ್ತದೆ. ಕಾಲಾಂತರದಲ್ಲಿ ಅವಳ ಭ್ರಮೆ ದೂರವಾಗುತ್ತದೆ (ತಪ್ಪು ಅರಿವಾಗುತ್ತದೆ). ಆಗ ‘ಇದರಿಂದ ಹೇಗೆ ಹೊರಗೆ ಬರುವುದು ? ಕಾನೂನಿನ ಪ್ರಕ್ರಿಯೆಯನ್ನು ಹೇಗೆ ಪೂರ್ಣಗೊಳಿಸುವುದು ?’, ಎಂಬ ಪ್ರಶ್ನೆ ಉದ್ಭವವಾಗುತ್ತದೆ; ಏಕೆಂದರೆ ಅದಕ್ಕಾಗಿ ಪುನಃ ‘ತಲಾಕನಾಮಾ’ ಆಗುವ ಅವಶ್ಯಕತೆಯಿರುತ್ತದೆ. ಇದರಲ್ಲಿ ಪತಿಯು ತಲಾಕ್ (ವಿಚ್ಛೇದನ) ನೀಡಬೇಕು. ಅವನು ಕೊಡದಿದ್ದರೆ, ತೊಂದರೆಯಾಗುವುದು. ಮಹಿಳೆಗೆ ವಿಚ್ಛೇದನೆ ನೀಡಬೇಕಾಗಿದ್ದರೆ, ಕೌಟುಂಬಿಕ ನ್ಯಾಯಾಲಯದಲ್ಲಿ ‘ಡಿಝಲೂಷನ ಆಫ್ ಮುಸ್ಲಿಂ ಮ್ಯಾರೇಜ ಎಕ್ಟ’ ಪ್ರಕಾರವೇ ಹೋಗಬೇಕಾಗುತ್ತದೆ.
ಮೂಲ ಇಸ್ಲಾಂನಲ್ಲಿ ಮಹಿಳೆಗೆ ‘ತಲಾಕ್’ನಂತೆ (ಹೆಚ್ಚಾಗಿ ಪತಿ ತಲಾಕ ನೀಡುತ್ತಾನೆ) ವಿಚ್ಛೇದನೆ ನೀಡುವ ಪದ್ಧತಿಯಿದೆ. ಅದನ್ನು‘ಖುಲಾ’ ಎಂದು ಕರೆಯುತ್ತಾರೆ; ಆದರೆ ಸರ್ವೋಚ್ಚ ನ್ಯಾಯಾಲಯವು ಈ ‘ಖುಲಾ’ ವಿಷಯದಲ್ಲಿ ೨೦೧೪ ನೇ ಇಸವಿಯಲ್ಲಿ ಒಂದು ಬೇರೆಯೇ ಟಿಪ್ಪಣಿಯನ್ನು ಹಾಕಿಟ್ಟಿದೆ. ‘ಜುವೇರಿಯಾ ಅಬ್ದುಲ್ ಮಜಿದ ಪಟನಿ ವಿರುದ್ಧ ಅತೀಫ ಇಕ್ಬಾಲ ಮಂಸುರಿ’ ಈ ಪ್ರಕರಣದಲ್ಲಿ ‘ಖುಲಾ’ ಎಂದರೆ ನ್ಯಾಯಾಲಯದ ಹೊರಗೆ ಪ್ರತ್ಯೇಕವಾಗುವ ಪ್ರಕ್ರಿಯೆಯಾಗಿದ್ದು, ಈ ಪ್ರಕ್ರಿಯೆಯ ವಿಷಯದಲ್ಲಿ ಚರ್ಚೆಯಾಯಿತು. ಸರ್ವೋಚ್ಚ ನ್ಯಾಯಾಲಯವು ತಿಳಿಸಿದಂತೆ ‘ಖುಲಾ’ ಈ ಪದ್ಧತಿಯಿಂದ ಮುಸಲ್ಮಾನ ಸ್ತ್ರೀ ವಿಚ್ಛೇದನೆ ಪಡೆದುಕೊಳ್ಳಬಹುದು; ಆದರೆ ಅದಕ್ಕಾಗಿ ಮೊದಲು ಅವಳು ಮುಫ್ತೀಯ (ಮುಸಲ್ಮಾನ ಮಾರ್ಗದರ್ಶಕರು) ಮಾರ್ಗದರ್ಶನವನ್ನು ಪಡೆಯಬೇಕು ಅಥವಾ ಫತವಾ ತೆಗೆದುಕೊಂಡಿರಬೇಕು. (ಆ ಮುಫ್ತಿಗಳೂ ಅವರದ್ದೇ ಪಂಥದವರಾಗಿರಬೇಕು) ಮಹಿಳೆಯು ಪತಿಗೆ ಕೊಡುಕೊಳ್ಳುವ ಬಗ್ಗೆ ನೀಡಿರುವ ‘ಆಫರ’ ಪತಿಯು ಒಪ್ಪಿಕೊಳ್ಳಬೇಕು ಇತ್ಯಾದಿ.
೪. ಪತಿಯೊಂದಿಗೆ ವಿಚ್ಛೇದನೆ ಪಡೆದುಕೊಳ್ಳಲು ತುಂಬಾ ಮುಸಲ್ಮಾನ ಮಹಿಳೆಯರು ಮತಾಂತರವಾಗುತ್ತಾರೆ; ಆದರೆ ಈ ವಿಷಯ ಮುಸಲ್ಮಾನ ಪುರುಷರಿಗೆ ಒಪ್ಪಿಗೆಯಿಲ್ಲದ ಕಾರಣ ಅವರು ಅದನ್ನು ವಿರೋಧಿಸುವುದು
ಯಾವಾಗ ಮಹಿಳೆಯ ಮನಸ್ಸು ಬದಲಾಗುತ್ತದೆಯೋ, ಆಗ ಅನೇಕ ಸಲ ಅವಳಿಗೆ ಕೇವಲ ಪತಿಯ ವಿಷಯದಲ್ಲಿ ಮಾತ್ರ ತಕರಾರು ಇರುತ್ತದೆ ಜೊತೆಗೆ ಅವಳಿಗೆ ಪುನಃ ಹಿಂದೂ ಆಗುವುದಿರುತ್ತದೆ. ಇಲ್ಲಿ ಒಂದು ಶೀಘ್ರ ವಿಚ್ಛೇದನ ಪ್ರಕ್ರಿಯೆ ಇದೆ. ಇಸ್ಲಾಂ ಒಂದು ರೀತಿ ಕಟುಧರ್ಮವಾಗಿದೆ. ಒಂದು ವೇಳೆ ಯಾವುದಾದರೂ ಮುಸಲ್ಮಾನ ವ್ಯಕ್ತಿಗೆ ಪೈಗಂಬರ, ಅಲ್ಲಾ ಮತ್ತು ಕುರಾನ ಮೇಲೆ ಶ್ರದ್ಧೆಯಿಲ್ಲದೇ ಇದ್ದರೆ, ಅವನಿಗೆ ಮುಸಲ್ಮಾನ ಎಂದು ಹೇಳಲು ಬರುವುದಿಲ್ಲ. ಆದುದರಿಂದ ಧರ್ಮವನ್ನು ಬದಲಾಯಿಸಿದರೆ, ಅವನು ಒಂದು ರೀತಿಯಲ್ಲಿ ಸಮಾಜದಿಂದ ಬಹಿಷ್ಕೃತನಾಗುತ್ತಾನೆ. ಮುಸಲ್ಮಾನನು ಮತಾಂತರಗೊಂಡರೆ, ಅವನಿಗೆ ಅವನ ಮುಸ್ಲಿಂ ಪತ್ನಿಯೊಂದಿಗಿರುವ ಸಂಬಂಧ ತಾನಾಗಿಯೇ ಕಡಿದುಹೋಗುತ್ತದೆ. ಈ ಅವಕಾಶ ಮುಸಲ್ಮಾನ ಸ್ತ್ರೀಯರಿಗೂ ಇತ್ತು. ೧೯೩೮ ನೇ ಇಸವಿಯ ವರೆಗೆ ಮುಸಲ್ಮಾನ ಮಹಿಳೆಯರು ಬಹಿರಂಗವಾಗಿ ಧರ್ಮವನ್ನು ಬದಲಾಯಿಸುತ್ತಿದ್ದರು ಮತ್ತು ತದನಂತರ ಪತಿಯೊಂದಿಗೆ ವಿಚ್ಛೇದನೆಯನ್ನು ಪಡೆದುಕೊಳ್ಳುತ್ತಿದ್ದರು. ಅದೂ ಕೇವಲ ‘ಇಸ್ಲಾಂ’ ತ್ಯಜಿಸಿದಳು ಎಂದು ನ್ಯಾಯಾಲಯವು ‘ಮಹಿಳೆ ಧರ್ಮವನ್ನು ಏಕೆ ಬದಲಾಯಿಸಿದಳು ?’ ಎಂದು ಯಾವುದೇ ಕಾರಣವನ್ನು ವಿಚಾರಿಸದೇ ವಿಚ್ಛೇದನೆಗೆ ಮಾನ್ಯತೆ ನೀಡುತ್ತಿತ್ತು. ಆದರೆ ಈ ಪದ್ಧತಿಯಿಂದ ಮಹಿಳೆಯು ಧರ್ಮ ಮತ್ತು ಗಂಡನನ್ನು ಬಿಡುವುದು, ಆ ಸಮಾಜಕ್ಕೆ ಸರಿ ಅನಿಸಲಿಕ್ಕಿಲ್ಲ. ಅರ್ಥಾತ್ ಅದಕ್ಕೆ ಬಹಳ ವಿರೋಧ ವ್ಯಕ್ತವಾಗತೊಡಗಿತು.
೫. ಮುಸಲ್ಮಾನ ಮಹಿಳೆಯರು ತಮ್ಮ ಪತಿಯನ್ನು ತ್ಯಜಿಸಲು ದೊಡ್ಡ ಪ್ರಮಾಣದಲ್ಲಿ ಮತಾಂತರದ ಪದ್ಧತಿಯನ್ನು ಅವಲಂಬಿಸುತ್ತಿದ್ದುದರಿಂದ ‘ಡಿಝಲ್ಯುಶನ ಆಫ್ ಮುಸ್ಲಿಂ ಮ್ಯಾರೇಜ ಎಕ್ಟ’ ಕಾನೂನನ್ನು ಮಾಡಲಾಯಿತು
ಒಂದು ಪ್ರಕರಣದಲ್ಲಿ ನ್ಯಾಯಾಲಯವು ಇಸ್ಲಾಂ ತ್ಯಜಿಸಿರುವ ಮಹಿಳೆಯನ್ನು ನ್ಯಾಯಾಲಯಕ್ಕೆ ಕರೆಯಿಸಿಕೊಂಡಿತು ಮತ್ತು ತುಂಬಿದ ನ್ಯಾಯಾಲಯದಲ್ಲಿ ‘ಪೋರ್ಕ’ (ಇಸ್ಲಾಂನಲ್ಲಿ ಹಂದಿ ಮಾಂಸ ನಿಷಿದ್ಧವಿದೆ) ತಿನ್ನಲು ಹೇಳಿತು. ಆದರೆ ಅವಳು ಅದನ್ನು ತಿನ್ನಲು ನಿರಾಕರಿಸಿದಳು. ಇದರಿಂದ ‘ಅವಳು ಇಸ್ಲಾಂ ಧರ್ಮವನ್ನು ತ್ಯಜಿಸಿಲ್ಲ, ಆದುದರಿಂದ, ಅವಳ ಮದುವೆ ಮುರಿದಿಲ್ಲ’ ಎಂದು ನ್ಯಾಯಾಲಯವು ತೀರ್ಪನ್ನು ನೀಡಿತು. (ಇದು ಸ್ವಲ್ಪ ಅತಿಯಾಯಿತು) ಇಂತಹ ಆದೇಶ ನೀಡುವ ನ್ಯಾಯಾಧೀಶರ ಹೆಸರು ಲಾಲಾ ಘನಶ್ಯಾಮ ದಾಸ ಆಗಿತ್ತು !
ಮತಾಂತರಗೊಂಡು ಮುಸಲ್ಮಾನ ಮಹಿಳೆಯರ ತಲಾಕ ನೀಡುವ ಪದ್ಧತಿ ಮುಸಲ್ಮಾನರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅದರಲ್ಲಿ ೧೯೩೯ ಇಸವಿಯಲ್ಲಿ ‘ಡಿಝಲ್ಯುಶನ ಆಫ್ ಮುಸ್ಲಿಂ ಮ್ಯಾರೇಜ ಎಕ್ಟ’ ಮಾಡಲಾಯಿತು.ಇದರಿಂದ ಮುಸಲ್ಮಾನ ಮಹಿಳೆಯರ ಧರ್ಮ ಪರಿವರ್ತನೆಯ ಮಾಧ್ಯಮದಿಂದ ವಿವಾಹದ ಬಂಧನದಿಂದ ಬಿಡುಗಡೆಯಾಗುವ ಮಾರ್ಗ ನಿಂತಿತು. ಇದರಲ್ಲಿನ ಕಲಂ ೪ ಕ್ಕನುಸಾರ ‘ಒಂದು ವೇಳೆ ಇಸ್ಲಾಂನಲ್ಲಿ ಜನಿಸಿರುವ ಮಹಿಳೆಯು ಧರ್ಮ ಪರಿವರ್ತನೆಯನ್ನು ಮಾಡಿದರೆ, ಅವಳು ಮುಸ್ಲಿಂ ಇರುವಾಗ ಅವಳ ಮುಸಲ್ಮಾನನೊಂದಿಗೆ ಆಗಿರುವ ವಿವಾಹ ತನ್ನಿಂತಾನೇ ಮುರಿಯಿತು’ ಎಂದು ಹೇಳಲು ಬರುವುದಿಲ್ಲ. ಕಲಂ ೨ ರಲ್ಲಿ ಯಾವ ೧೦ ಕಾರಣಗಳನ್ನು ಹೇಳಲಾಗಿದೆಯೋ, ಅದರಲ್ಲಿರುವ ಕಾರಣವನ್ನು ನ್ಯಾಯಾಲಯದಲ್ಲಿ ತೋರಿಸಿ ಅವಳು ವಿಚ್ಛೇದನೆಯನ್ನು ಪಡೆಯಬೇಕು: (ಅಂದರೆ ನ್ಯಾಯಾಲಯದಲ್ಲಿ ಎರಡೂ ಕಡೆಯಿಂದ ದಾಖಲೆಗಳನ್ನು ಪ್ರಸ್ತುತ ಪಡಿಸಲಾಗುವುದು, ದಿನಾಂಕಗಳ ಮೇಲೆ ದಿನಾಂಕಗಳು ಬರುವವು, ನ್ಯಾಯವಾದಿಗಳಿಗೆ ಹಣ ಕೊಡಬೇಕಾಗುವುದು ಇತ್ಯಾದಿ) ಆದರೆ ಒಂದು ವೇಳೆ ಇದೇ ಮುಸಲ್ಮಾನ ಮಹಿಳೆ ಮುಸಲ್ಮಾನನೆಂದು ಜನಿಸದಿದ್ದರೆ ಮತ್ತು ವಿವಾಹದ ಮೊದಲು ಅವಳು ಮತಾಂತರಗೊಂಡು ಮದುವೆಯಾಗಿದ್ದರೆ, ಅವಳು ಯಾವ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಬಂದಿದ್ದಳೋ ಆ ಧರ್ಮಕ್ಕೆ ಮರಳಿ ಹೋದರೆ, ಅವಳ ವಿವಾಹ ತನ್ನಿಂತಾನೇ ಮುರಿಯುತ್ತದೆ. ಈ ಅವಕಾಶವನ್ನು ಕಲಂ ೪ ರ ಎರಡನೇಯ ಸ್ಪಷ್ಟೀಕರಣದಲ್ಲಿ ಹಾಗೆಯೇ ಇಡಲಾಗಿದೆ. ಇದರರ್ಥ ಯಾವುದಾದರೂ ಹಿಂದೂ ಮಹಿಳೆಯು ಮತಾಂತರಗೊಂಡು ಮುಸಲ್ಮಾನ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಂಡಿದ್ದರೆ ಮತ್ತು ಅವಳು ಮರಳಿ ಹಿಂದೂ ಧರ್ಮವನ್ನು ಸ್ವೀಕರಿಸಿದರೆ, ಅವಳ ಮದುವೆ ತಾನಾಗಿಯೇ ಮುಕ್ತಾಯಗೊಳ್ಳುತ್ತದೆ.
೬. ವಿವಾಹಕ್ಕಾಗಿ ಮುಸಲ್ಮಾನಳಾಗಿರುವ ಮಹಿಳೆಯು ಅವಳ ಮೂಲ ಧರ್ಮಕ್ಕೆ ಮರಳಿ ಬಂದರೆ ಮುಸಲ್ಮಾನನೊಂದಿಗೆ ಆಗಿರುವ ಅವಳ ಮದುವೆಯು ತಾನಾಗಿಯೇ ಮುರಿಯುತ್ತದೆ
ಇತರ ಸಮಯದಲ್ಲಿ ವಿಚ್ಛೇದನೆ ಪಡೆದುಕೊಳ್ಳಲು ನ್ಯಾಯಾಲಯದಲ್ಲಿ ಅನೇಕ ಕಾರಣಗಳನ್ನು ಸಾಬೀತುಪಡಿಸಬೇಕಾಗುತ್ತದೆ. ಪತಿ ನಿರ್ಲಕ್ಷ ಮಾಡುತ್ತಾನೆ, ಹಣ ಕೊಡುವುದಿಲ್ಲ, ಕ್ರೂರವಾಗಿ ನಡೆದುಕೊಳ್ಳುತ್ತಾನೆ ಅಥವಾ ಪೀಡಿಸುತ್ತಾನೆ ಇತ್ಯಾದಿಗಳಲ್ಲಿ ಒಪ್ಪಿಕೊಳ್ಳುವಂತಹ ಕಾರಣ ಸಾಬೀತಾದರೆ ಮಾತ್ರ ವಿಚ್ಛೇದನೆ ಸಿಗುತ್ತದೆ. ಆದರೆ ವಿವಾಹಕ್ಕಾಗಿ ಮುಸಲ್ಮಾನಳಾಗಿರುವ ಹಿಂದೂ ಮಹಿಳೆ ಪುನಃ ಹಿಂದೂ ಆದರೆ, ಈ ಕಾರಣಗಳನ್ನು ಸಾಬೀತು ಪಡಿಸಬೇಕಾಗುವುದಿಲ್ಲ. ಈ ಸಂದರ್ಭದಲ್ಲಿ ದೆಹಲಿಯ ಉಚ್ಚ ನ್ಯಾಯಾಲಯ ಮತ್ತು ಗುಜರಾತ ಉಚ್ಚ ನ್ಯಾಯಾಲಯಗಳ ‘ಮುನವ್ವರ-ಉಲ್-ಇಸ್ಲಾಮ’ ವಿರುದ್ಧ ರಿಶೂ ಅರೋರಾ (AIR
2014 DELHI 130) ದೆಹಲಿ ಉಚ್ಚ ನ್ಯಾಯಾಲಯ ಮತ್ತು ‘ಶಿನು ಜಾವೇದ ಮನ್ಸೂರಿ ವಿರುದ್ಧ ಜಾವೇದ ಹುಸೈನ ಮನ್ಸೂರಿ (FIRST APPEAL NO. 2979 OF 2013) ಗುಜರಾತ ಉಚ್ಚ ನ್ಯಾಯಾಲಯ’ ಈ ಪ್ರಕರಣಗಳ ತೀರ್ಪು ಪ್ರಸಿದ್ಧವಾಗಿವೆ.
೬ ಅ. ದೆಹಲಿ ಉಚ್ಚ ನ್ಯಾಯಾಲಯದಲ್ಲಿನ ಮುನವ್ವರ-ಉಲ್-ಇಸ್ಲಾಂ ವಿರುದ್ಧ ರಿಶೂ ಅರೋರಾ ಪ್ರಕರಣ : ರಿಶೂ ಅರೋರಾ ಈ ಹಿಂದೂ ಯುವತಿಯು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರೇಮಪ್ರಕರಣದಿಂದ ಮುನವ್ವರನೊಂದಿಗೆ ವಿವಾಹವಾದಳು. ಅದಕ್ಕಾಗಿ ಅವಳು ಮುಸಲ್ಮಾನ ಧರ್ಮವನ್ನು ಸ್ವೀಕರಿಸಿದ್ದಳು. ಜುಲೈ ೨೦೧೦ ರಲ್ಲಿ ಅವಳ ವಿವಾಹವಾಯಿತು. ಕಾಲಾಂತರದಲ್ಲಿ ಅವಳ ಮತ್ತು ಅವಳ ಪತಿಯ ನಡುವೆ ಹೊಂದಾಣಿಕೆಯಾಗುತ್ತಿರಲಿಲ್ಲ. ಪತಿಯ ಕ್ರೂರ ನಡತೆ, ಅವಳನ್ನು ನಿರ್ಲಕ್ಷಿಸುವುದು ಇತ್ಯಾದಿ ಕಾರಣಗಳಿಂದ ಅವಳು ಮದುವೆಯಿಂದ ಮುಕ್ತಳಾಗಲು ನಿರ್ಣಯಿಸಿದಳು. ಅದಕ್ಕಾಗಿ ಅವಳು ಮುಸ್ಲಿಂ ಕಾನೂನಿನನ್ವಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನೆಗಾಗಿ ದೂರು ದಾಖಲಿಸಿದಳು ಮತ್ತು ೪.೩.೨೦೧೨ ರಂದು ಪುನಃ ಹಿಂದೂ ಧರ್ಮವನ್ನು ಸ್ವೀಕರಿಸಿದಳು. ಪುನರ್ ಪ್ರವೇಶದ ಬಳಿಕ ಅವಳು ನ್ಯಾಯಾಲಯದಲ್ಲಿ ತನ್ನ ಪರವಾಗಿ ವಾದ ಮಂಡಿಸುವಾಗ ‘ಮತಾಂತರವಾಗಿರುವುದರಿಂದ ಮದುವೆಯೇ ರದ್ದಾಗಿದೆ, ಆದುದರಿಂದ ಆ ರೀತಿ ಆದೇಶ ನೀಡಬೇಕೆಂದು ಬೇಡಿಕೊಂಡಳು’, ನ್ಯಾಯಾಲಯವು ಅದರಂತೆ ಆದೇಶ ನೀಡಿತು.
ಈ ಆದೇಶಕ್ಕೆ ಮುನವ್ವರ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಈ ಅರ್ಜಿಯ ಮೇಲೆ ದೆಹಲಿ ಉಚ್ಚ ನ್ಯಾಯಾಲಯವು ಸಂಬಂಧಪಟ್ಟ ವಿಷಯದ ಸಂಪೂರ್ಣ ಚರ್ಚೆಯನ್ನು ಮಾಡಿತು. ದೆಹಲಿ ಉಚ್ಚ ನ್ಯಾಯಾಲಯದ ವಿಭಾಗೀಯಪೀಠ ನ್ಯಾಯಮೂರ್ತಿ ಮಾನ್ಯ ಎಸ್. ರವೀಂದ್ರ ಭಟ ಮತ್ತು ಮಾನ್ಯ ನ್ಯಾಯಮೂರ್ತಿ ನಜ್ಮಿ ವಾಝಿರಿ ಇವರು, ‘ಮತಾಂತರಗೊಂಡ ಬಳಿಕ ವಿವಾಹ ತನ್ನಿಂತಾನೇ ಮುರಿಯುತ್ತದೆ. ಆದುದರಿಂದ ಪುನಃ ಬೇರೆ ದಾಖಲೆ ಕೊಡುವ ಆವಶ್ಯಕತೆಯಿಲ್ಲ’ ಎಂದು ತೀರ್ಪು ಕೊಟ್ಟರು.
೬ ಆ. ಶಿನು ಜಾವೇದ ಮನ್ಸೂರಿ ವಿರುದ್ಧ ಜಾವೇದ ಹುಸೈನ ಮನ್ಸೂರಿ ಪ್ರಕರಣ : ಈ ಪ್ರಕರಣದಲ್ಲಿ ಮಹಿಳೆ ಮೊದಲು ಕ್ರಿಶ್ಚಿಯನ್ ಆಗಿದ್ದಳು. ಇಸ್ಲಾಂನಿಂದ ಅವಳು ಪುನಃ ಕ್ರಿಶ್ಚಿಯನ್ ಆದಳು. ಕೌಟುಂಬಿಕ ನ್ಯಾಯಾಲಯವು ಈ ದೂರನ್ನು ತಿರಸ್ಕರಿಸಿತು. ಅದರ ವಿರುದ್ಧದ ಅರ್ಜಿಯ (ಮನವಿಯ) ಆಲಿಕೆಯ ಸಮಯದಲ್ಲಿ ನ್ಯಾಯಮೂರ್ತಿ ಅಕೀಲ ಕುರೇಶಿ ಮತ್ತು ನ್ಯಾಯಮೂರ್ತಿ ವಿಪುಲ ಪಂಚೋಲಿಯೂ ‘ಮತಾಂತರದ ಬಳಿಕ ವಿವಾಹ ರದ್ದಾಗುತ್ತದೆ’, ಎಂದು ಹೇಳಿದರು; ಆದರೆ ‘ಮೊದಲಿನ ಧರ್ಮ ಯಾವುದು ? ಮದುವೆ ಮುಸ್ಲಿಂ ಪದ್ಧತಿಯಿಂದ ಆಗಿತ್ತೇ ? ತದನಂತರ ಪುನಃ ಮೂಲ ಧರ್ಮದಲ್ಲಿ ಪ್ರವೇಶವಾಯಿತೇ ?ಇದರ ದಾಖಲೆಗಳನ್ನು ಕೌಟುಂಬಿಕ ನ್ಯಾಯಾಲಯವು ಪರಿಗಣಿಸಬೇಕು’, ಹೀಗೆ ಸ್ವಲ್ಪ ಬೇರೆ ಧ್ವನಿ ತೆಗೆದರು.
೭. ಮತಾಂತರಗೊಳ್ಳುವುದರಿಂದ ಹಿಂದೂ ಮಹಿಳೆಯರು ಮುಸಲ್ಮಾನ ಪತಿಯ ಹಿಡಿತದಿಂದ ಮುಕ್ತಗೊಳ್ಳುವುದು : ಆದರೆ ಅವರಿಗೆ ಜೀವನಾಂಶ ಕೇಳಲು ಬರುವುದಿಲ್ಲ
‘ಮತಾಂತರಗೊಳ್ಳುವುದರಿಂದ ತಮ್ಮ ಪೀಡೆ, ತೊಂದರೆಗಳು ಮುಕ್ತಾಯಗೊಳ್ಳುತ್ತವೆ’, ಎಂದು ಹಿಂದೂ ಮಹಿಳೆಗೆ ಅನಿಸುತ್ತಿದ್ದರೆ, ಅದು ನಿಜವಾಗಿದೆ, ಆದರೆ ಅವಳಿಗೆ ಜೀವನಾಂಶ ಕೇಳಲು ಬರುವುದಿಲ್ಲ ಅಥವಾ ಯಾವ ‘ಮೆಹರ’ (ಒಂದು ರೀತಿಯ ವರದಕ್ಷಿಣೆ-ಇಸ್ಲಾಮಾನುಸಾರ ವಿವಾಹವು ಒಂದು ಕರಾರಾಗಿರುತ್ತದೆ. ಇದರಿಂದ ಕರಾರಿನ ಭಾಗವೆಂದು ಗಂಡನು ಹೆಂಡತಿಗೆ ಏನಾದರೂ ಕೊಡುವ ವ್ಯವಹಾರ) ಮದುವೆಯಲ್ಲಿ ಪತಿಯು ಪತ್ನಿಗೆ ಕೊಡಲು ಒಪ್ಪಿಕೊಂಡಿರುತ್ತಾನೆಯೋ, ಅದು ದೊರಕುವುದಿಲ್ಲ. ಅರ್ಥಾತ್ ಯಾವ ಹಿಂದೂ ಯುವತಿಯರು ಧರ್ಮವನ್ನು ಬದಲಾಯಿಸಿ ಮುಸಲ್ಮಾನರಾಗುತ್ತಾರೆಯೋ, ಆಗ ಅವರಿಗೆ ಈ ಸೂಕ್ಷ್ಮತೆಗಳು ಎಲ್ಲಿ ತಿಳಿದಿರುತ್ತವೆ ? ಇದರಿಂದ ಅವರಿಗೆ ಮೆಹರದ ಸಂದರ್ಭದಲ್ಲಿ ಮೋಸಗೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಇದರಿಂದ ಏನಿದೆಯೋ, ಅದನ್ನು ಉಪಯೋಗಿಸಿಕೊಳ್ಳಬಹುದು ಮತ್ತು ಯಾವುದು ಇಲ್ಲವೋ ಅದಕ್ಕಾಗಿ ಹೋರಾಟವನ್ನು ಮಾಡಬಹುದು.
– ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ರಾಷ್ಟ್ರೀಯ ಅಧ್ಯಕ್ಷ, ಹಿಂದೂ ವಿಧಿಜ್ಞ ಪರಿಷತ್ತು (೬.೨.೨೦೨೨)