ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷದವರೆಗೂ ಬೀದಿ ನಾಯಿಯ ಸಮಸ್ಯೆ ಬಗೆಹರಿಸದಿರುವ ಏಕೈಕ ದೇಶವೆಂದರೆ ಭಾರತ !
ಬೆಂಗಳೂರು – ಬೆಂಗಳೂರು ಮತ್ತು ಉಳಿದ ಕರ್ನಾಟಕದಲ್ಲಿ ಬೀದಿ ನಾಯಿಯ ಪ್ರಶ್ನೆ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ. ವಿಧಾನಸಭೆಯಲ್ಲಿ ಈ ಕುರಿತು ಭಾಜಪದ ಶಾಸಕ ರವಿ ಸುಬ್ರಹ್ಮಣ್ಯ ಇವರು ಈ ಪ್ರಶ್ನೆ ಮುಂದಿಟ್ಟರು ಮತ್ತು ‘ಬೆಂಗಳೂರಿನ ಹೊರವಲಯದಲ್ಲಿ ‘ಪ್ರಾಣಿ ನಿವಾಸ ಕೆಂದ್ರ’ ನಿರ್ಮಿಸಿ ರಸ್ತೆಯಲ್ಲಿನ ಎಲ್ಲಾ ಬೀದಿನಾಯಿಗಳನ್ನು ತಕ್ಷಣ ಸ್ಥಳಾಂತರಿಸುವ ಅವಶ್ಯಕತೆ ಇದೆ,’ ಎಂದು ಹೇಳಿದರು. ಅದಕ್ಕೆ ಉತ್ತರ ನೀಡುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, “ಕಳೆದ ೪ ವರ್ಷಗಳಲ್ಲಿ ಬೆಂಗಳೂರಿನಲ್ಲಿನ ೧ ಲಕ್ಷ ೭೫ ಸಾವಿರ ನಾಯಿಗಳ ನಸಬಂದಿ ಮಾಡಲಾಗಿದೆ.”
‘Helpless’ over stray dog menace, will Karnataka govt now move SC? https://t.co/gFqIK8Df5A
— Hindustan Times (@HindustanTimes) March 16, 2022
ಸರ್ವೋಚ್ಚ ನ್ಯಾಯಾಲಯದ ಕಠಿಣ ಆದೇಶದಿಂದ ಬೀದಿನಾಯಿಗಳಿಗೆ ಮುಟ್ಟುವುದು ಅಸಾಧ್ಯವಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಧುಸ್ವಾಮಿ ಇವರು ಈ ಸಮಯದಲ್ಲಿ ಹೇಳಿದರು, ಮಾಜಿ ಸಚಿವರು ಮತ್ತು ಶಾಸಕರಾದ ಎಸ್.ಸುರೇಶ್ ಕುಮಾರ್ ಇವರು, ನಾಯಿಗಳಿಗೂ ಬದುಕುವ ಹಕ್ಕು ಇದ್ದರೂ ಈ ವಿಷಯದ ಗಾಂಭೀರ್ಯ ಅರ್ಥಮಾಡಿಕೊಂಡು ಈ ಕುರಿತು ನ್ಯಾಯಾಲಯದ ಆದೇಶಕ್ಕೆ ಪರಿಹಾರ ಹುಡುಕಲು ಕಾನೂನಿನ ಸಹಾಯ ಪಡೆಯಬೇಕು.