ಬಿಡುಗಡೆಗೆ ಪ್ರಯತ್ನ ನಡೆಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯ ಮೂಲಕ ಅಗ್ರಹ
ಕಳೆದ ೨೫ ವರ್ಷಗಳಿಂದ ಪಾಕಿಸ್ತಾನದ ಸೆರೆಮನೆಯಲ್ಲಿರುವ ಭಾರತೀಯ ಸೇನಾಧಿಕಾರಿಯ ಬಿಡುಗಡೆಗೆ ಭಾರತ ಸರಕಾರ ಯಾವುದೇ ಪ್ರಯತ್ನ ಮಾಡದಿರದೇ ಇದ್ದರೆ ಇದು ಅಕ್ಷಮ್ಯ ತಪ್ಪಾಗಿದೆ. ಅಂದಿನಿಂದ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ಇದಕ್ಕೆ ಕಾರಣಕರ್ತರಾಗಿದ್ದಾರೆ. ಇಂತಹವರು ಎಷ್ಟೇ ಪ್ರಾಯಶ್ಚಿತ ತೆಗೆದುಕೊಂಡರೂ ಅದು ಕಡಿಮೆ ಆಗುವುದು !
ನವದೆಹಲಿ : ಕಳೆದ ೨೫ ವರ್ಷಗಳಿಂದ ಪಾಕಿಸ್ತಾನದ ಸೆರೆಮನೆಯಲ್ಲಿರುವ ಸೇನಾಧಿಕಾರಿಯನ್ನು ಬಿಡುಗಡೆ ಮಾಡುವಂತೆ ಕೋರಿ ಅತನ ತಾಯಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಮಗನ ಬಿಡುಗಡೆಗೆ ರಾಜಕೀಯ ಮಟ್ಟದಲ್ಲಿ ಪ್ರಯತ್ನ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಆದೇಶ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಈ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಿಚಾರಣೆ ನಡೆಸಲಿದೆ. ಎಪ್ರಿಲ್‌ನ ಮೊದಲ ವಾರದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ೮೨ ವರ್ಷದ ಮಾಲಾ ಭಟ್ಟಾಚಾರ್ಯಜಿ ಅವರು ಅರ್ಜಿ ಸಲ್ಲಿಸಿದ್ದಾರೆ. ಅವರ ಮಗ ಕ್ಯಾಪ್ಟನ್ ಸಂಜಿತ್ ಭಟ್ಟಾಚಾರ್ಯ ಅವರು ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿದ್ದಾನೆ. ಏಪ್ರಿಲ್ ೧೯೯೭ ರ ಮಧ್ಯರಾತ್ರಿ ಗಸ್ತಿನ ಸಮಯದಲ್ಲಿ ಗುಜರಾತ್‌ನ ಕಚ್ ಗಡಿಯಲ್ಲಿ ಪಾಕ ಸೈನ್ಯದ ಕಡೆಯಿಂದ ಕ್ಯಾಪ್ಟನ್ ಸಂಜಿತ್ ಭಟ್ಟಾಚಾರ್ಯನನ್ನು ಬಂಧಿಸಲಾಗಿತ್ತು.
कैप्टन संजीत भट्टाचार्जी की मां ने लगाई अर्जी, तकरीबन 23 साल से पाकिस्तान की जेल में बंद हैं कैप्टन
(@mewatisanjoo ) https://t.co/W35mVuHjV1— AajTak (@aajtak) March 11, 2022