ತಮಿಳುನಾಡು ಸರಕಾರವು ವಾನಿಯಾರ ಸಮಾಜಕ್ಕೆ ನೀಡಿರುವ ಮೀಸಲಾತಿಯನ್ನು ಸರ್ವೋಚ್ಚ ನ್ಯಾಯಾಲಯದಿಂದ ರದ್ದು !

ಸಂವಿಧಾನಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಕೇವಲ ೧೦ ವರ್ಷಗಳ ವರೆಗೆ ಮೀಸಲಾತಿಯನ್ನು ಇಡುವಂತೆ ಸೂಚಿಸಿದ್ದರು; ಆದರೆ ಅದನ್ನು ಪಾಲಿಸದೇ ಮೀಸಲಾತಿಯನ್ನು ಇನ್ನೂ ಮುಂದುವರಿಸಲಾಗಿದೆ, ಇದರ ಉತ್ತರವನ್ನು ಎಲ್ಲ ಪಕ್ಷಗಳ ಆಡಳಿತಗಾರರು ನೀಡುವುದು ಆವಶ್ಯಕವಾಗಿದೆ !

ನವದೆಹಲಿ – ತಮಿಳುನಾಡು ಸರಕಾರವು ರಾಜ್ಯದ ವಾನಿಯಾರ ಸಮಾಜಕ್ಕೆ ಓಬಿಸಿ ಮೀಸಲಾತಿ ಕೋಟಾದಡಿಯಲ್ಲಿ ಶೇ. ೧೦.೫ ರಷ್ಟು ಮೀಸಲಾತಿಯನ್ನು ನಿಗದಿಪಡಿಸಿತ್ತು. ಈ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ರದ್ದು ಪಡಿಸಿದೆ. ಈ ನಿರ್ಣಯದಿಂದ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಓಬಿಸಿ ಮೀಸಲಾತಿಗಾಗಿ ನಡೆದಿರುವ ಪ್ರಯತ್ನಗಳ ಮೇಲೆ ಪರಿಣಾಮ ಬೀರುವುದೆಂದು ಹೇಳಲಾಗುತ್ತಿದೆ. ಸರಕಾರದ ನಿರ್ಣಯದ ವಿರುದ್ಧ ಮೊದಲು ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿತ್ತು. ಉಚ್ಚ ನ್ಯಾಯಾಲಯವೂ ತಮಿಳುನಾಡು ಸರಕಾರದ ಆದೇಶವನ್ನು ರದ್ದುಪಡಿಸಿತ್ತು. ಅದಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ಈಗ ಸರ್ವೋಚ್ಚ ನ್ಯಾಯಾಲಯವೂ ಇದೇ ನಿರ್ಣಯವನ್ನು ಎತ್ತಿ ಹಿಡಿಯಿತು.

ನ್ಯಾಯಾಲಯವು, ಯಾವುದೇ ಮಾಹಿತಿ ಮತ್ತು ಡೆಟಾಗಳ ಆಧಾರದಲ್ಲಿ ಮೀಸಲಾತಿಯನ್ನು ನೀಡಲಾಗಿಲ್ಲ. ವಾನಿಯಾರ ಸಮಾಜಕ್ಕೆ ನೀಡಿರುವ ಮೀಸಲಾತಿಯ ವಿಷಯದಲ್ಲಿ ಯಾವುದೇ ವರದಿ ಇಲ್ಲ. ಈ ಕುರಿತು ರಚಿಸಲಾಗಿದ್ದ ಸಮಿತಿ ಕೂಡಾ ವಾನಿಯಾರ ಸಮಾಜವು ಹಿಂದುಳಿದವರಾಗಿದ್ದಾರೆಂದು ಉಲ್ಲೇಖಿಸಿಲ್ಲವೆಂದು ತಿಳಿಸಿದೆ.