ನಾಟಕದಲ್ಲಿ ಹುಡುಗರ ಕೈಯಲ್ಲಿ ಪಾಕಿಸ್ತಾನಿ ರಾಷ್ಟ್ರಧ್ವಜ : ಶಾಲೆಯ ಅನುಮತಿ ರದ್ದು !

  • ರತಲಾಮ (ಮಧ್ಯಪ್ರದೇಶ) ಇಲ್ಲಿಯ ಪ್ರಾರ್ಥಮಿಕ ಶಾಲೆಯಲ್ಲಿನ ಘಟನೆ

  • ವಿಭಜನೆಯ ಸಮಯದಲ್ಲಿನ ದೃಶ್ಯ ತೋರಿಸುವದಕ್ಕಾಗಿ ಧ್ವಜದ ಬಳಕೆ; ಶಾಲೆಯ ದಾವೆ

ರತಲಾಮ (ಮಧ್ಯಪ್ರದೇಶ) – ಇಲ್ಲಿಯ ಒಂದು ಪ್ರಾಥಮಿಕ ಶಾಲೆಯಲ್ಲಿ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ದಿನದಂದು ಆಯೋಜಿಸಿದ್ದ ನಾಟಕದಲ್ಲಿ ಪಾಕಿಸ್ತಾನಿ ರಾಷ್ಟ್ರಧ್ವಜದ ಉಪಯೋಗ ಮಾಡಲಾಯಿತು. ಈ ಪ್ರಕರಣದ ಮಾಹಿತಿ ದೊರೆತ ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವತಿಯಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುತ್ತಾ ಪ್ರಸ್ತುತ ಪ್ರಾಥಮಿಕ ಶಾಲೆಯ ವಿರುದ್ಧ ದೂರು ದಾಖಲಿಸಲು ಆಗ್ರಹಿಸಲಾಯಿತು. ಇದರ ನಂತರ ರತಲಾಮ ಜಿಲ್ಲ ಆಡಳಿತದಿಂದ ಈ ಆರೋಪದ ವಿಚಾರಣೆ ನಡೆಸಲಾಗುತ್ತಿದೆ. ರತಲಾಮದ ಬಾಲ ಕಲ್ಯಾಣ ಸಮಿತಿಯಿಂದ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಶಾಲೆಯ ಮಾನ್ಯತೆ ರದ್ದು ಪಡಿಸಲು ಆದೇಶ ನೀಡಲಾಗಿದೆ. ಈ ಘಟನೆಯ ಕುರಿತು ಶಾಲೆಯ ಸಂಚಾಲಕ ದೀಪಕ ಪಂಥ ಇವರು, ಈ ನಾಟಕ ಸ್ವಾತಂತ್ರ್ಯ ಹೋರಾಟದ ಆಧಾರಿತವಾಗಿದ್ದು ಭಾರತದ ವಿಭಜನೆಯ ಸಮಯದಲ್ಲಿನ ದೃಶ್ಯ ತೋರಿಸಲು ರಾಷ್ಟ್ರಧ್ವಜವನ್ನು ಉಪಯೋಗಿಸಲಾಗಿದೆ. ಆದ್ದರಿಂದ ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡು ದೇಶದ ಧ್ವಜಗಳು ಇದ್ದವು. ಪಾಕಿಸ್ತಾನಿ ಧ್ವಜದ ಪ್ರಚಾರ ಮಾಡುವುದು, ಇದು ನಮ್ಮ ಉದ್ದೇಶವಾಗಿರಲಿಲ್ಲ. ಯಾರಿಂದಲೋ ಇದರ ಒಂದು ದೃಶ್ಯ ಚಿತ್ರಿಸಲಾಗಿದೆ. ಅದು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗಿದೆ. ನಮ್ಮ ಹತ್ತಿರ ನಾಟಕದ ಸಂಹಿತೆ ಇದೆ. ಮಕ್ಕಳಿಗೆ ಸ್ವಾತಂತ್ರ್ಯದ ವಿಷಯ ತಿಳಿಸಿ ಹೇಳುವುದಕ್ಕಾಗಿ ನಾವು ಈ ನಾಟಕ ಆಯೋಜಿಸಿದ್ದೇವು. ನಾವು ಕ್ಷಮೆ ಕೂಡ ಯಾಚಿಸಿದ್ದೇವೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಪ್ರಕರಣದಲ್ಲಿ ಸರಕಾರವು ಯೋಗ್ಯ ವಿಚಾರಣೆ ನಡೆಸಿ ನಿರ್ಣಯ ತೆಗೆದುಕೊಳ್ಳಬೇಕು !