ಜೋಧಪುರ (ರಾಜಸ್ಥಾನ) – ಇಲ್ಲಿನ ಒಂದು ದೇವಸ್ಥಾನದ ಹೊರಗೆ ಮಲಗಿದ್ದ 3 ವರ್ಷದ ಬಾಲಕಿಯನ್ನು ಅಪಹರಿಸಿ ಬಲಾತ್ಕಾರವೆಸಗಿದ ಘಟನೆ ನಡೆದಿದೆ. ಮೂಲತಃ ಮಧ್ಯಪ್ರದೇಶದ ಬಡ ಕುಟುಂಬ ಅವರು ಜೋಧ್‌ಪುರದ ಒಂದು ಗುಡಿಸಿಲಿನಲ್ಲಿ ವಾಸಿಸುತ್ತಿದ್ದರು. ಈ ಕುಟುಂಬ ಮಧ್ಯರಾತ್ರಿ ದೇವಸ್ಥಾನದ ಹೊರಗೆ ಮಲಗಿದ್ದಾಗ ಅವರ 3 ವರ್ಷದ ಬಾಲಕಿಯನ್ನು ಯಾರೋ ಅಪರಿಚಿತರು ಅಪಹರಿಸಿ ಬಲಾತ್ಕಾರ ಎಸಗಿದ್ದಾರೆ. ಬಟ್ಟೆಯಲ್ಲಿ ಸುತ್ತಿರುವ ಆ ಬಾಲಕಿ ಬೆಳಿಗ್ಗೆ ಆರೂವರೆಗೆ ಸುಮಾರಿಗೆ ಸಿಕ್ಕಳು. ಆಗ ಅವಳ ತುಟಿ ಮತ್ತು ಬೆನ್ನಿನ ಮೇಲೆ ಗಾಯದ ಗುರುತು ಇತ್ತು.
ಸಹಾಯಕ ಪೊಲೀಸ್ ಆಯುಕ್ತ ಅನಿಲ ಕುಮಾರ ಅವರು ಮಾತನಾಡಿ, ಸಿ.ಸಿ.ಟಿ.ವಿ. ದೃಶ್ಯಾವಳಿಯಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ಮಗುವನ್ನು ಹೊತ್ತುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಆರೋಪಿಗಳ ಗುರುತು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ. ಸಂತ್ರಸ್ತ ಬಾಲಕಿಯ ತಂದೆ ಕಸ ಹಾಯುವ ಕೆಲಸ ಮಾಡುತ್ತಿದ್ದು, ಮಗುವಿನ ತಾಯಿಗೆ ಮಾನಸಿಕ ತೊಂದರೆಯಿದೆ. ಮಗುವಿಗೆ 5 ವರ್ಷದ ಸಹೋದರೂ ಇದ್ದಾನೆ.
ಸಂಪಾದಕೀಯ ನಿಲುವುಸರಕಾರವು ಇಂತಹವರ ವಿರುದ್ಧ ಶೀಘ್ರಗತಿಯ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸುವ ಮೂಲಕ ಅವರನ್ನು ಗಲ್ಲಿಗೇರಿಸಲು ಪ್ರಯತ್ನಿಸಬೇಕು ! |