ಚಾರ್ಜ್ ಶೀಟ್ ತೆಗೆದುಕೊಳ್ಳಲು ಕಲ್ಯಾಣ ನ್ಯಾಯಾಲಯದಲ್ಲಿ ವಕೀಲರಿಂದ ನಿರಾಕರಣೆ !

  • ಬದಲಾಪುರ ದೌರ್ಜನ್ಯ ಪ್ರಕರಣ

  • ವಕೀಲರ ಸಂಘದ ಖಂಡತುಂಡ ನಿಲುವು !

  • ಸಮಾಜಕ್ಕೆ ಅಪಾಯಕಾರಿಯಾದ ಆರೋಪಿಗಳು ಹೊರಗೆ ಬರಬಾರದೆಂದು ಈ ನಿಲುವು ತಳೆದಿದ್ದೇವೆ !

ನ್ಯಾಯವಾದಿ ಉಜ್ವಲ್ ನಿಕಮ್

ಬದಲಾಪುರ – ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಅಕ್ಷಯ್ ಶಿಂದೆಯ ಆರೋಪ ಪತ್ರವನ್ನು ಸ್ವೀಕರಿಸಲು ಕಲ್ಯಾಣ ನ್ಯಾಯಾಲಯದ ವಕೀಲರು ನಿರಾಕರಿಸಿದ್ದಾರೆ. ಇದರೊಂದಿಗೆ ಬದಲಾಪುರ ರೈಲ್ವೆ ಪೊಲೀಸರು ಬಂಧಿಸಿರುವ ಪ್ರತಿಭಟನಾಕಾರರ ವಿರುದ್ಧ ಜಾಮೀನು ರಹಿತ ವಾರೆಂಟ್ ಅಪರಾಧಗಳ ವಿರುದ್ಧವೂ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಪ್ರತಿಭಟನಾಕಾರರ ಮೇಲಿನ ಕ್ರಿಮಿನಲ್ ಮೊಕದ್ದಮೆ ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.

ವಕೀಲರು, ‘ಹಿಂದಿನ ದಿನ ನಾವು ತೆಗೆದುಕೊಂಡ ನಿಲುವು ಇಂದು ಮತ್ತು ನಾಳೆ ಒಂದೇ ಆಗಿರುತ್ತದೆ’. ಬದಲಾಪುರದಲ್ಲಿ ನಡೆದಿರುವುದು ಹೇಯಕೃತ್ಯವಾಗಿದೆ. ಈ ಕೃತ್ಯ ಪ್ರಾಣಿಗಳಿಗೂ ನಾಚಿಸುವಂತೆಯಾಗಿದೆ. ಮೂರೂವರೆ ವರ್ಷದ ಹೆಗಲ ಮೇಲೆ ಆಡಬೇಕಿರುವ ಹೆಣ್ಣುಮಗುವಿನ ವಯಸ್ಸು ಆಗಿದೆ ಅಂತಹ ಹುಡುಗಿಯರಿಗೆ ಅತಿಪ್ರಸಂಗ ಮಾಡುವುದು ತುಂಬಾ ಅಪಾಯಕಾರಿಯಾಗಿದೆ. ಇಂತಹ ಆರೋಪಿಗಳು ಸಮಾಜದಲ್ಲಿ ಬದುಕುತ್ತಿರುವುದು ಸಮಾಜಕ್ಕೆ ಅಪಾಯಕಾರಿಯಾಗಿದೆ. ಹಾಗಾಗಿ ಅಂತಹ ಆರೋಪಿಗಳು ಹೊರಬರದಂತೆ ತಡೆಯಲು ಪ್ರಯತ್ನಿಸಬೇಕು. ಆದ್ದರಿಂದ ಅತ್ಯಾಚಾರ ಪ್ರಕರಣದ ಆರೋಪಿಗಳ ವಕೀಲರ ಪತ್ರವನ್ನು ತೆಗೆದುಕೊಳ್ಳದಿರಲು ನಮ್ಮ ಸಂಘಟನೆ ನಿರ್ಧರಿಸಿದೆ.” ಎಂದು ಹೇಳಿದರು.