ರಾಷ್ಟ್ರಧ್ವಜದ ದಾರ ಕತ್ತರಿಸಿದ ಮತಾಂತರಗೊಂಡ ಮುಸಲ್ಮಾನ ಮಹಿಳೆ !

ಮುಂಬಯಿ – ಮಾಲಾಡ ಪಶ್ಚಿಮ ಮಾಲವಣಿ ಪ್ರದೇಶದಲ್ಲಿ ಸುಖ ಶಾಂತಿ ಸೇವಾ ಸಂಘದ ಅಪಾರ್ಟ್ಮೆಂಟ್ ನಲ್ಲಿ ನಡೆದ ಧ್ವಜಾರೋಹಣದ ನಂತರ ಮನೆ ಎದುರಿಗೆ ರಾಷ್ಟ್ರಧ್ವಜ ಹಾಕಲು ವಿರೋಧಿಸಿದ ನಾಜಿಯ ಮತಿಯುಲ್ ಅಬ್ದುಲ್ ರಹಮಾನ್ ಅನ್ಸಾರಿ (ಮದುವೆಯ ಮುಂಚಿನ ಹೆಸರು ನಂದಿನಿ ಶಿಂದೆ) ಎಂಬ ಮಹಿಳೆಯು ಚಾಕುವಿನಿಂದ ರಾಷ್ಟ್ರಧ್ವಜದ ದಾರವನ್ನು ಕತ್ತರಿಸಿದಳು ಮತ್ತು ರಾಷ್ಟ್ರಧ್ವಜದ ಕಂಬ ಕೆಡವಲು ಪ್ರಯತ್ನಿಸಿದಳು. ಕಾರ್ಯಕ್ರಮಕ್ಕೆ ಬಂದಿದ್ದ ಜನರನ್ನು ಅವಾಚ್ಯ ಪದಗಳಲ್ಲಿ ಬೈದಳು. ಈ ಪ್ರಕ್ರಣಕ್ಕೆ ಸಂಬಂಧಿಸಿ ಅಪಾರ್ಟ್ಮೆಂಟ್ ಸದಸ್ಯರು ಈ ಮಹಿಳೆಯ ಮತ್ತು ಆಕೆಯ ಮತಾಂಧ ಕುಟುಂಬದ ವಿರುದ್ಧ ಎಫ್.ಐ.ಆರ್.ದಾಖಲಿಸಿದ್ದಾರೆ.
ಮತಾಂಧ ಮಹಿಳೆ ನಾಜಿಯಾ ಅನ್ಸಾರಿ, ಆಕೆಯ ಪತಿ ಮತ್ತು ಮಾವ ಈ ಮೂವರು ಹಿಂದುಗಳ ಬಗ್ಗೆ ಅವಾಚ್ಯ ಪದಗಳನ್ನು ಬಳಸಿರುವ ಆರೋಪವನ್ನು ಎಫ್. ಐ. ಆರ್ ನಲ್ಲಿ ಮಾಡಲಾಗಿದೆ. ಕಳೆದ ಬಾರಿ ಮನೆಯ ಹತ್ತಿರದ ಅಪಾರ್ಟ್ಮೆಂಟ್ ನಲ್ಲಿ ಫಲಕ ಹಾಕಿದ್ದಕ್ಕೆ ನಡೆದ ವಿವಾದವನ್ನು ಮನಸ್ಸಿನಲ್ಲಿಟ್ಟುಕೊಂಡ ಈ ಮಹಿಳೆ, ಆಗಸ್ಟ್ ೧೫ರಂದು ಆ ಫಲಕದ ಹತ್ತಿರ ರಾಷ್ಟ್ರಧ್ವಜ ಹಾಕಿದ್ದೇಕೆ? ಎಂದು ಕೇಳುತ್ತಾ ಧ್ವಜ ಕಂಬ ಕೆಡವಲು ಪ್ರಯತ್ನಿಸಿದಳು. ಮಹಿಳೆಯ ಈ ಕೃತ್ಯವನ್ನು ಅಲ್ಲಿನ ನಿವಾಸಿಗಳು ಸೆರೆಹಿಡಿದಿದ್ದರು ಮತ್ತು ಪೊಲೀಸರಿಗೆ ಇದರ ಕುರಿತು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. (ಭಾರತದ ಬಗ್ಗೆ ಇಷ್ಟೊಂದು ತಿರಸ್ಕಾರ ಅನಿಸುವವರ ಮೂಲವನ್ನು ಪೊಲೀಸರು ಹುಡುಕಿ ತೆಗೆಯುವುದು ಅತ್ಯಾವಶ್ಯಕವಾಗಿದೆ. ಅವರ ನಿಷ್ಠೆ ಯಾವ ದೇಶದ ಬಗ್ಗೆ ಇದೆ? ಎಂಬುದನ್ನು ನೋಡಬೇಕು! – ಸಂಪಾದಕರು).
|
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ