ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ವ್ಯಕ್ತಿಯನ್ನು ಅವನ ಜಾತೀಯ ಉಲ್ಲೇಖ ಮಾಡದೆ ಮಾಡಿದ ಅವಮಾನ, ಇದು ದೌರ್ಜನ್ಯದ ಅಡಿಯಲ್ಲಿ ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ವ್ಯಕ್ತಿಯನ್ನು ಅವನ ಜಾತಿಯನ್ನು ಉಲ್ಲೇಖಿಸದೇ ಮಾಡಿದ ಅವಮಾನ, ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ 1989’ ರ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ.

ಆನ್‌ಲೈನ್ ಮಲಯಾಳಂ ಸುದ್ದಿವಾಹಿನಿಯ ಸಂಪಾದಕ (ನ್ಯೂಸ್ ಚಾನೆಲ್ ಎಡಿಟರ್) ಶಾಜನ್ ಸ್ಕಾರಿಯಾ ಅವರಿಗೆ ಬಂಧನ ಪೂರ್ವ ಜಾಮೀನು ನೀಡುವಾಗ ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ. ಸ್ಕಾರಿಯಾ ಅವರು ಮಾಕಪನ ದಲಿತ ಶಾಸಕ ಪಿ.ವಿ. ಶ್ರೀನಿಜನ್ ಅವರನ್ನು ‘ಮಾಫಿಯಾ ಡಾನ್’ ಎಂದು ಹೇಳಿದ್ದರು. ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯ ಮತ್ತು ಕೇರಳ ಉಚ್ಚ ನ್ಯಾಯಾಲಯವು ಅವರಿಗೆ ಬಂಧನ ಪೂರ್ವ ಜಾಮೀನು ನೀಡಲು ನಿರಾಕರಿಸಿದ್ದವು.