ಸಸ್ಯಾಹಾರಿ ಗ್ರಾಹಕರಿಗೆ ಮಾಂಸಾಹಾರಿ ಬರ್ಗರ್ ನೀಡಿದ್ದ ಕೆ.ಎಫ್‌.ಸಿ. ಸಂಸ್ಥೆಗೆ 12 ಸಾವಿರ ರೂಪಾಯಿ ದಂಡ

ಚಂಡೀಗಢ – ನಗರದ ಗ್ರಾಹಕ ನ್ಯಾಯಾಲಯವು ಕೆ.ಎಫ್.ಸಿ. ಆಹಾರ ಮಾರಾಟ ಸಂಸ್ಥೆಗೆ 12 ಸಾವಿರ ರೂಪಾಯಿ ದಂಡ ವಿಧಿಸಿದೆ. ಕೆಎಫ್‌ಸಿಯು ಸಸ್ಯಾಹಾರಿ ಗ್ರಾಹಕರೊಬ್ಬರಿಗೆ ಮಾಂಸಾಹಾರಿ ಬರ್ಗರ್ ನೀಡಿತ್ತು. ಬಳಿಕ ಆ ಗ್ರಾಹಕರು ದೂರು ನೀಡಿದ್ದರು. 2023ರಲ್ಲಿ ಚಂಡಿಗಢ ಸೆಕ್ಟರ್ 35ರಲ್ಲಿರುವ ಕೆ.ಎಫ್.ಸಿ. ಶಾಖೆಯಲ್ಲಿ ಈ ಘಟನೆ ನಡೆದಿತ್ತು.

1. ನಗರದ ಅನಿರುದ್ಧ್ ಗುಪ್ತಾ ಎಂಬವರು, ‘ನಾನು ಮತ್ತು ನನ್ನ ಪತ್ನಿ ಕೆಎಫ್‌ಸಿಯ ನಿಯಮಿತ ಗ್ರಾಹಕರಾಗಿದ್ದೇವೆ. ನನ್ನ ಹೆಂಡತಿ ಶುದ್ಧ ಸಸ್ಯಾಹಾರಿಯಾಗಿದ್ದಾರೆ. ಮೇ 3, 2023 ರಂದು, ನಾನು KFC ಯ ಆನ್‌ಲೈನ್ ಅಪ್ಲಿಕೇಶನ್‌ನಲ್ಲಿ ನನಗಾಗಿ ‘ಚಿಕನ್ ಬಕೆಟ್’ ಮಾಂಸಾಹಾರ ಮತ್ತು ನನ್ನ ಹೆಂಡತಿಗಾಗಿ ಸಸ್ಯಾಹಾರಿ ಐಟಂ ‘ಕ್ಲಾಸಿಕ್ ವೆಜ್ ಕ್ರಿಸ್ಪರ್’ ಅನ್ನು ಆರ್ಡರ್ ಮಾಡಿದ್ದೆ. ನನ್ನ ಹೆಂಡತಿ ಬರ್ಗರ್ ನ ಮೊದಲ ತುತ್ತು ತಿಂದಾಗ ಅವಳಿಗೆ ಏನೋ ವಿಚಿತ್ರ ಅನಿಸಿತು. ತಕ್ಷಣ ಆಕೆ ನನಗೆ ವಿಡಿಯೋ ಕರೆ ಮಾಡಿ ಬರ್ಗರ್ ತೋರಿಸಿದಳು. ಬರ್ಗರ್‌ನಲ್ಲಿ ಚಿಕನ್ ಇರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನನ್ನ ಹೆಂಡತಿ ಶುದ್ಧ ಸಸ್ಯಾಹಾರಿಯಾಗಿದ್ದರಿಂದ ಆಕೆಗೆ ವಾಂತಿ ಪ್ರಾರಂಭವಾಯಿತು. KFC ವ್ಯವಸ್ಥಾಪಕರ ನಿರ್ಲಕ್ಷ್ಯದಿಂದ ಪತ್ನಿ ಮಾನಸಿಕವಾಗಿ ಅಸ್ವಸ್ಥಳಾಗಿದ್ದು, ತೀವ್ರ ಒತ್ತಡಕ್ಕೆ ಒಳಗಾಗಿದ್ದಾಳೆ ಎಂದು ಸಂಸ್ಥೆಗೆ ದೂರು ನೀಡಿದ್ದೆ.

2. ಕೆಎಫ್‌ಸಿ ಸಂಸ್ಥೆಯು ಗುಪ್ತಾ ಅವರ ದೂರಿನ ಬಗ್ಗೆ ಪ್ರತಿಕ್ರಿಯಿಸಿ, ಸುಳ್ಳು ಮತ್ತು ಕ್ಷುಲ್ಲಕ ಆಧಾರದ ಮೇಲೆ ಕೆ.ಎಫ್‌.ಸಿ. ಇಂದ ಹಣ ವಸೂಲಿ ಮಾಡಲು ಮತ್ತು ಸಂಸ್ಥೆಗೆ ಮಾನಹಾನಿ ಮಾಡುವ ದುರುದ್ದೇಶದಿಂದ ಈ ದೂರು ನೀಡಲಾಗಿದೆ ಎಂದು ಹೇಳಿತ್ತು. ಪರಿಶೀಲನೆಯ ನಂತರ ವ್ಯಕ್ತಿಯು ಆ ವಸ್ತುವನ್ನು ತೆಗೆದುಕೊಂಡಿದ್ದಾರೆ ಎಂಬ ಅಂಶವನ್ನು ದೂರುದಾರರು ಮರೆಮಾಚಿದ್ದಾರೆ. ನಮ್ಮ ಪ್ಯಾಕೇಜಿಂಗ್‌ನಲ್ಲಿ ಸಸ್ಯಾಹಾರಿ ಆಹಾರಕ್ಕಾಗಿ ಹಸಿರು ಚಿಹ್ನೆ ಮತ್ತು ಮಾಂಸಾಹಾರಿ ಆಹಾರಕ್ಕಾಗಿ ಕೆಂಪು ಚಿಹ್ನೆ ಇದೆ ಎಂದು ಉತ್ತರ ನೀಡಿತ್ತು.

3. ಬೇಡಿಕೆಯ ರಸೀದಿಗಳನ್ನು ಪರಿಶೀಲಿಸಿದ ನಂತರ, ಗ್ರಾಹಕ ನ್ಯಾಯಾಲಯವು, ಕೆಎಫ್‌ಸಿಯು ರಸೀದಿಗಳಲ್ಲಿ ನಮೂದಿಸಲಾದ ‘ವೆಜ್ ಕ್ರಿಸ್ಪರ್ ಬರ್ಗರ್’ ಬದಲಿಗೆ ಚಿಕನ್ ತುಂಬಿದ ಮಾಂಸಾಹಾರಿ ಕ್ರಿಸ್ಪರ್ ಬರ್ಗರ್‌ಗಳನ್ನು ಪೂರೈಸಿದೆ ಎಂಬುದು ದೂರುದಾರರು ತೆಗೆದ ಬರ್ಗರ್‌ಗಳ ಫೋಟೋಗಳಿಂದ ಸ್ಪಷ್ಟವಾಗಿದೆ. ಇದರಿಂದ ಕೆ.ಎಫ್.ಸಿ. ನಿರ್ವಾಹಕರ ಕಡೆಯಿಂದ ಸೇವೆಯ ಕೊರತೆ ಮತ್ತು ಅಸಡ್ಡೆ ಕಾಣಿಸುತ್ತದೆ. ದೂರುದಾರರು ನೀಡಿದ ಸಾಕ್ಷ್ಯವನ್ನು ನಿರಾಕರಿಸುವಲ್ಲಿ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ. ದೂರುದಾರರಿಗೆ ಸೇವೆ ಸಲ್ಲಿಸುವಾಗ ಕೆ.ಎಫ್.ಸಿ. ನಿರ್ವಾಹಕರು ನಿರ್ಲಕ್ಷ್ಯ ವಹಿಸಿದ್ದು, ಶುದ್ಧ ಸಸ್ಯಾಹಾರಿಯಾಗಿರುವ ದೂರುದಾರರ ಪತ್ನಿಗೆ ಮಾಂಸಾಹಾರವನ್ನು ತಪ್ಪಾಗಿ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದರಿಂದಾಗಿ ಆಕೆಯ ಭಾವನೆಗಳು ಘಾಸಿಗೊಂಡವು ಮತ್ತು ಅವಳು ಮಾನಸಿಕ ಯಾತನೆ ಮತ್ತು ಒತ್ತಡವನ್ನು ಎದುರಿಸಿದಳು. ಮಾನಸಿಕ ಯಾತನೆ ಮತ್ತು ಹಿಂಸೆಗೆ ಪರಿಹಾರವಾಗಿ ದೂರುದಾರರಿಗೆ 7 ಲಕ್ಷ ರೂಪಾಯಿ ಮತ್ತು ಮೊಕದ್ದಮೆ ವೆಚ್ಚಕ್ಕಾಗಿ 5 ಸಾವಿರ ರೂಪಾಯಿಗಳನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿತು.

ಸಂಪಾದಕೀಯ ನಿಲುವು

ಕೇವಲ ದಂಡ ವಿಧಿಸುವುದಲ್ಲ, ಬದಲಾಗಿ ಜೈಲು ಶಿಕ್ಷೆಯನ್ನೂ ವಿಧಿಸಬೇಕು !