ಕೊಲಕಾತಾ (ಬಂಗಾಳ) – ‘ಹೆಣ್ಣುಮಕ್ಕಳು ತಮ್ಮ ಲೈಂಗಿಕ ಬಯಕೆಗಳನ್ನು ನಿಯಂತ್ರಿಸಬೇಕು’ ಎಂದು ಕೊಲಕಾತಾ ಹೈಕೋರ್ಟ್ ಕೆಲವು ವಾರಗಳ ಹಿಂದೆ ಸಲಹೆ ನೀಡಿತ್ತು. ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ಈ ಟಿಪ್ಪಣೆಯನ್ನು ತಳ್ಳಿಹಾಕಿದ್ದು ಕೆಳ ನ್ಯಾಯಾಲಯವು ಅತ್ಯಾಚಾರ ಆರೋಪಿಗೆ ನೀಡಿದ್ದ 20 ವರ್ಷಗಳ ಶಿಕ್ಷೆಯನ್ನು ಎತ್ತಿಹಿಡಿದಿದೆ. ಈ ಆರೋಪಿಯನ್ನು ಹೈಕೋರ್ಟ್ ಖುಲಾಸೆಗೊಳಿಸಿತ್ತು.
1. ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್: “ನಾವು POCSO ಕಾಯಿದೆಯ ಸರಿಯಾದ ಉಪಯೋಗಕ್ಕೆ ಸಮಗ್ರ ಮಾರ್ಗಸೂಚಿಗಳನ್ನು ಜಾರಿಗೊಳಿಸುತ್ತಿದ್ದೇವೆ ಮತ್ತು ನ್ಯಾಯಾಧೀಶರು ಅದರಂತೆ ತಮ್ಮ ತೀರ್ಪನ್ನು ನೀಡಬೇಕು” ಎಂದು ಹೇಳಿದೆ.
2. ಅಕ್ಟೋಬರ್ 2023ರಲ್ಲಿ, ನ್ಯಾಯಮೂರ್ತಿ ಚಿತ್ತರಂಜನ್ ದಾಸ್ ಮತ್ತು ನ್ಯಾಯಮೂರ್ತಿ ಪಾರ್ಥಸಾರಥಿ ಸೇನ್ ಅವರ ಪೀಠವು ಕೊಲಕತಾ ಹೈಕೋರ್ಟ್ ನ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಯುವಕನನ್ನು ಖುಲಾಸೆಗೊಳಿಸಿತು. ಇಬ್ಬರು ಹದಿಹರೆಯದ ಯುವಕ ಯುವತಿಯರು ಪ್ರೇಮ ಸಂಬಂಧ ಹೊಂದಿದ್ದರು ಮತ್ತು ಒಮ್ಮತದ ದೈಹಿಕ ಸಂಬಂಧ ಹೊಂದಿದ್ದರು.
3. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಹದಿಹರೆಯದ ಹುಡುಗಿಯರು ಕೇವಲ ಎರಡು ನಿಮಿಷದ ಆನಂದ ಬದಲು ತಮ್ಮ ಲೈಂಗಿಕ ಇಚ್ಛೆಯನ್ನು ನಿಯಂತ್ರಿಸಬೇಕು ಎಂದು ಹೇಳಿತ್ತು. ಹದಿಹರೆಯದ ಯುವಕ-ಯುವತಿಯರ ಮತ್ತು ಮಹಿಳೆಯರ ಘನತೆ ಮತ್ತು ದೈಹಿಕ ಸ್ವಾಯತ್ತತೆಯನ್ನು ಗೌರವಿಸಬೇಕು.
Supreme Court sets aside the
Calcutta High Court’s order which asked adolescent girls to “control their sexual urges” pic.twitter.com/6dAYEMlUyp— Sanatan Prabhat (@SanatanPrabhat) August 20, 2024
ಹೈಪೋಥಾಲಮಸ್’ ಮತ್ತು ‘ಪಿಟ್ಯುಟರಿ’ ಗ್ರಂಥಿಗಳು ‘ಟೆಸ್ಟೋಸ್ಟೆರಾನ್’ ಪ್ರಮಾಣವನ್ನು ನಿಯಂತ್ರಿಸುತ್ತವೆ, ಇದು ಮುಖ್ಯವಾಗಿ ಪುರುಷರಲ್ಲಿ ಲೈಂಗಿಕತೆಗೆ ಸಂಬಂಧಿಸಿದೆ. ಇವು ದೇಹದಲ್ಲಿರುವುದರಿಂದ ಪ್ರಚೋದನೆಗೆ ಸಂಬಂಧಿಸಿದ ಗ್ರಂಥಿಗಳು ಸಕ್ರಿಯಗೊಂಡಾಗ, ಲೈಂಗಿಕ ಬಯಕೆ ಉಂಟಾಗುತ್ತದೆ; ಆದರೆ ಈ ಗ್ರಂಥಿಯು ತಾನಾಗಿಯೇ ಸಕ್ರಿಯಗೊಳ್ಳುವುದಿಲ್ಲ; ನಮ್ಮ ದೃಷ್ಟಿ, ಶ್ರವಣ, ಕಾಮಪ್ರಚೋದಕ ವಸ್ತುಗಳನ್ನು ಓದುವುದು ಮತ್ತು ವಿರುದ್ಧ ಲಿಂಗದವರೊಂದಿಗಿನ ಸಂವಹನದಿಂದ ಪ್ರಚೋದಿಸಲ್ಪಡುತ್ತದೆ. ನಮ್ಮ ಕ್ರಿಯೆಗಳಿಂದ ಲೈಂಗಿಕ ಬಯಕೆ ಉಂಟಾಗುತ್ತದೆ.
ಏನಿದು ಪ್ರಕರಣ ?ಕೊಲಕಾತಾ ಹೈಕೋರ್ಟ್ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತ್ತು. ಓರ್ವ ಹದಿಹರೆಯದ ಯುವಕ ತನ್ನ ಗೆಳತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ಯುವಕನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಂತರ ಇಬ್ಬರೂ ಪರಸ್ಪರ ಮದುವೆಯಾಗಲು ನಿರ್ಧರಿಸಿದರು ಮತ್ತು ‘ಪರಸ್ಪರ ಒಪ್ಪಿಗೆಯಿಂದ ಈ ದೈಹಿಕ ಸಂಬಂಧ ಆಗಿತ್ತು’ ಎಂದು ಹುಡುಗಿ ಒಪ್ಪಿಕೊಂಡ ನಂತರ ಪೀಠವು ಯುವಕನನ್ನು ಖುಲಾಸೆಗೊಳಿಸಿತು. ‘ಭಾರತೀಯ ಕಾನೂನಿನ ಪ್ರಕಾರ ದೈಹಿತ ಸಂಬಂಧ ಹೊಂದಲು ಕನಿಷ್ಠ 18 ವರ್ಷ ವಯಸ್ಸಿರಬೇಕು ಎಂಬುದು ಅವರಿಗೆ ತಿಳಿದಿರಲಿಲ್ಲ. ಇಬ್ಬರೂ ಗ್ರಾಮೀಣ ಪ್ರದೇಶದವರಾಗಿದ್ದರು. |