ಹಮಾಸ್ ನಿಂದ 3 ಒತ್ತೆಯಾಳುಗಳ ಬಿಡುಗಡೆ ಮತ್ತು ಇಸ್ರೇಲ್ ನೀಮದ 90 ಪ್ಯಾಲೆಸ್ಟೀನಿಯನ್ ಕೈದಿಗಳ ಬಿಡುಗಡೆ !
ತೆಲ್ ಅವಿವ್ – ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದ ಜಾರಿಗೆ ಬಂದ ನಂತರ ಜನರಲ್ಲಿ ಸಂತೋಷದ ವಾತಾವರಣವಿದೆ. ಇತ್ತೀಚೆಗೆ, ಹಮಾಸ್ 3 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ, ಇಸ್ರೇಲ್ 90 ಪ್ಯಾಲೆಸ್ಟೀನಿಯನ್ನರನ್ನು ಬಿಡುಗಡೆ ಮಾಡಿತು.
1. ಇಸ್ರೇಲ್ ಬಿಡುಗಡೆ ಮಾಡಿದ ಪ್ಯಾಲೆಸ್ಟೀನಿಯನ್ನರಲ್ಲಿ ಅನೇಕ ಪ್ರಮುಖ ವ್ಯಕ್ತಿಗಳು ಸೇರಿದ್ದಾರೆ. ಇದರಲ್ಲಿ ಪ್ಯಾಲೆಸ್ಟೀನಿಯನ್ ಎಡಪಂಥೀಯ ಗುಂಪು, ‘ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಶನ್ ಆಫ್ ಪ್ಯಾಲೆಸ್ಟೈನ್’ನ ಮುಖ್ಯಸ್ಥೆ 62 ವರ್ಷದ ಖಲೀದಾ ಜರಾರಾ ಕೂಡ ಸೇರಿದ್ದಾರೆ. ಇವರಲ್ಲಿ ಹಮಾಸ್ ಅಧಿಕಾರಿ ಸಲೇಹ್ ಅರೋರಿಯ ಸಹೋದರಿ ದಲಾಲ್ ಖಾಸಿಬ್ ಮತ್ತು ನಾಯಕ ಅಹ್ಮದ್ ಸಾದತ್ ಅವರ ಪತ್ನಿ ಅಬಲಾ ಅಬ್ದೆಲ್ ರಸೂಲ್ ಸೇರಿದ್ದಾರೆ.
2. ಕದನ ವಿರಾಮ ಒಪ್ಪಂದದ ಪ್ರಕಾರ, ಹಂತಹಂತವಾಗಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
3. ಅಕ್ಟೋಬರ್ 7, 2023 ರಂದು ಹಮಾಸ್ ದಾಳಿಯೊಂದಿಗೆ ಪ್ರಾರಂಭವಾದ ಇಸ್ರೇಲ್-ಹಮಾಸ್ ಯುದ್ಧದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಈ ಯುದ್ಧದಲ್ಲಿ, ಈಜಿಪ್ಟ್, ಕತಾರ್ ಮತ್ತು ಅಂಮೇರಿಕಾ ಸೇರಿದಂತೆ ಹಲವು ದೇಶಗಳು ಎರಡೂ ದೇಶಗಳ ನಡುವಿನ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಪ್ರಯತ್ನಿಸಿದವು. ಕೊನೆಗೆ ಜನವರಿ 15 ರಂದು ಇಸ್ರೇಲ್ ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಂಡು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒಪ್ಪಿತು.