ISKCON Restaurant Attacked In B’desh : ಬಾಂಗ್ಲಾದೇಶದಲ್ಲಿ ಜಿಹಾದಿ ಮುಸ್ಲಿಮರಿಂದ ‘ಇಸ್ಕಾನ್’ ಉಪಾಹಾರಗೃಹಕ್ಕೆ ಬೆಂಕಿ ಇಟ್ಟು ಧ್ವಂಸ !

ಇಸ್ಕಾನ್ ಉಪಾಹಾರಗೃಹಗಳು ಹಿಂದುತ್ವ ಸಿದ್ಧಾಂತ ಹರಡುವ ಕೇಂದ್ರಗಳಾಗಿದ್ದರಿಂದ ದಾಳಿ

‘ಗೋವಿಂದಾಜ ಕಿಚನ’ ಇಸ್ಕಾನ ಸಸ್ಯಾಹಾರಿ ಹಿಂದೂ ಉಪಾಹಾರಗೃಹ

ಢಾಕಾ (ಬಾಂಗ್ಲಾದೇಶ) – ಢಾಕಾದ ಮಾಲಿಬಾಗ್ ಪ್ರದೇಶದಲ್ಲಿರುವ ‘ಗೋವಿಂದಾಜ ಕಿಚನ’ ಈ ಇಸ್ಕಾನ ಸಸ್ಯಾಹಾರಿ ಹಿಂದೂ ಉಪಾಹಾರಗೃಹವನ್ನು ಜಿಹಾದಿ ಮುಸ್ಲಿಮರು ಧ್ವಂಸಗೊಳಿಸಿ ಬಲವಂತವಾಗಿ ಮುಚ್ಚಿಸಿದರು. ತಮ್ಮನ್ನು ‘ತೌಹೀದಿ ಜನತಾ’ ಗುಂಪಿನ ಸದಸ್ಯರೆಂದು ಗುರುತಿಸಿಕೊಂಡ ಜಿಹಾದಿಗಳು, ‘ಗೋವಿಂದಾಜ ಕಿಚನ’ ಉಪಾಹಾರ ಗೃಹದರಲ್ಲಿ ಗೋಮಾಂಸವನ್ನು ನೀಡದೇ ಇದ್ದರಿಂದ ಗುರಿಯಾಗಿಸಿಕೊಂಡಿದ್ದರು. ಈ ಘಟನೆ ಜನವರಿ 16 ರಂದು ನಡೆದಿತ್ತು. ಉಪಾಹಾರಗೃಹ ಮುಚ್ಚಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಹಿಂಸಾಚಾರವನ್ನು ಖಂಡಿಸಿದ್ದಾರೆ ಮತ್ತು ಪೊಲೀಸ್ ಅಧಿಕಾರಿಗಳಿಂದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

1. ಪ್ರತ್ಯಕ್ಷದರ್ಶಿಗಳು ನೀಡದ ಮಾಹಿತಿಯನುಸಾರ, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದ ಪೋಸ್ಟ್‌ನಿಂದ ಕೆರಳಿದ ಜಿಹಾದಿ ಮುಸ್ಲಿಮರು ಉಪಾಹಾರಗೃಹದ ಸಿಬ್ಬಂದಿ, ವ್ಯವಸ್ಥಾಪಕ ಮತ್ತು ಮಾಲೀಕರ ಮೇಲೆ ದಾಳಿ ನಡೆಸಿದರು. ಇದರಲ್ಲಿ ಅನೇಕ ಜನರು ಗಾಯಗೊಂಡಿದ್ದರು.

2. ಗೋಮಾಂಸದ ಕಾರಣ ನಿಮಿತ್ತ ಮಾತ್ರವಾಗಿದ್ದು, ಈ ಉಪಾಹಾರಗೃಹದ ಮೇಲಿನ ದಾಳಿ ‘ಪ್ಯಾರಡಾಕ್ಸಿಕಲ ಸಾಜಿದ್’ ಎಂಬ ಫೇಸ್ಬುಕ್ ಖಾತೆಯಿಂದ ಹರಡಿದ ಪ್ರಚೋದನಕಾರಿ ಪೋಸ್ಟ್‌ಗಳಿಂದಾಗಿ ನಡೆದಿದೆ. ಈ ಪೋಸ್ಟನಲ್ಲಿ ‘ಇಸ್ಕಾನ್’ ನಡೆಸುವ ಸಸ್ಯಾಹಾರಿ ಉಪಾಹಾರಗೃಹಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿತ್ತು. ಈ ಉಪಾಹಾರಗೃಹಗಳು ಹಿಂದುತ್ವ ಸಿದ್ಧಾಂತವನ್ನು ಹರಡುವ ಕೇಂದ್ರಗಳಾಗಿವೆ ಎಂದು ಅದರಲ್ಲಿ ದಾವೆ ಮಾಡಿತ್ತು.

3. ಈ ಪೋಸ್ಟ್‌ನಲ್ಲಿ ಜನರಿಗೆ `ಇಸ್ಕಾನ ಉಪಾಹಾರಗೃಹವನ್ನು ನಡೆಸಲು ಆಸ್ತಿಯನ್ನು ಬಾಡಿಗೆಗೆ ನೀಡದಂತೆ ಮನವಿ ಮಾಡಲಾಗಿತ್ತು ಮತ್ತು ಇಸ್ಕಾನ್ ಉಪಾಹಾರಗೃಹಗಳಲ್ಲಿ ತಮ್ಮ ಅಡುಗೆಗಳಲ್ಲಿ ಗೋಮೂತ್ರ ಮತ್ತು ಗೋಮಯವನ್ನು ಬೆರೆಸುತ್ತವೆ ಎಂದು ಆರೋಪಿಸಲಾಗಿದೆ. ಈ ಪೋಸ್ಟನಿಂದಾಗಿ ಉಪಾಹಾರಗೃಹದ ಮೇಲೆ ದಾಳಿಗೆ ಕಾರಣವಾಯಿತು.

4. ‘ಗೋವಿಂದಾಜ ಕಿಚನ’ ಒಂದು ಜನಪ್ರಿಯ ಉಪಾಹಾರ ಗೃಹವಾಗಿತ್ತು. ಇಲ್ಲಿನ ಕೈಗೆಟುಕುವ ಸಸ್ಯಾಹಾರಿ ಆಹಾರಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿನ ಗ್ರಾಹಕರು ಕೇವಲ ಹಿಂದೂಗಳು ಮಾತ್ರವಲ್ಲ, ಕಡಿಮೆ ಆದಾಯದ ಗುಂಪಿನ ಮುಸ್ಲಿಮರೂ ಆಗಿದ್ದರು.

ಹಿಂದೂ ಉಪಾಹಾರಗೃಹಗಳು ಹಿಂದೂ ಭಯೋತ್ಪಾದಕರ ಅಡಗುತಾಣಗಳಾಗಿವೆ ಎಂಬ ಸುಳ್ಳು ಪ್ರಚಾರ !

ಗೋವಿಂದಾಜ ಹೋಟೆಲ್ ಮೇಲೆ ದಾಳಿ ನಡೆಸಲು ವಾತಾವರಣವನ್ನು ನಿರ್ಮಿಸಲು ವಿವಿಧ ಪ್ರಚೋದನಕಾರಿ ಪೋಸ್ಟ್‌ಗಳನ್ನು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. “ಬಾಂಗ್ಲಾದೇಶದ ಹಿಂದೂ ಉಪಾಹಾರಗೃಹಗಳಿಂದ ಪಿತೂರಿಗಳು ನಡೆಯುತ್ತಿವೆ. ಈ ಉಪಾಹಾರಗೃಹಗಳಲ್ಲಿ ಹಿಂದೂ ಭಯೋತ್ಪಾದಕರು ಅಡಗುತಾಣಗಳನ್ನು ಸ್ಥಾಪಿಸಿದ್ದಾರೆ ಮತ್ತು ಈ ಉಪಾಹಾರಗೃಹಗಳು ಭಾರತೀಯ ಗುಪ್ತಚರ ಸಂಸ್ಥೆಗಳ ಶಾಖೆಗಳಾಗಿ ಕಾರ್ಯನಿರ್ವಹಿಸುತ್ತಿವೆ’, ಎಂದು ಅದು ಹೇಳಿದೆ.

ಹಿಂದೂ ಬೆಂಬಲಿತ ಮುಸಲ್ಮಾನರ ‘ರಾಜಧಾನಿ ಹೋಟೆಲ್’ ಮೇಲೂ ದಾಳಿ

‘ಗೋವಿಂದಾಜ ಕಿಚನ’ ಮೇಲೆ ದಾಳಿ ನಡೆದಂತೆಯೇ, ಢಾಕಾದ ‘ರಾಜಧಾನಿ ಹೋಟೆಲ್’ ಮೇಲೂ ದಾಳಿ ನಡೆಸಲಾಯಿತು. ಈ ಹೊಟೆಲ ಮುಸ್ಲಿಂ ಒಡೆತನದ್ದಾಗಿದ್ದು, ಅದು ಹಿಂದೂಗಳ ಬಗ್ಗೆ ಸಹಾನುಭೂತಿ ಹೊಂದಿತ್ತು ಮತ್ತು ಗೋಮಾಂಸವನ್ನು ನೀಡುವುದಿಲ್ಲ ಎಂಬ ಕಾರಣಕ್ಕಾಗಿ ಅದರ ಮೇಲೆ ದಾಳಿ ಮಾಡಲಾಯಿತು.