ಹಿಂದು ರಾಷ್ಟ್ರ ಸ್ಥಾಪನೆಗೆ ಒತ್ತಾಯಿಸಿ ಜನವರಿ ೨೨ ರಂದು ಕುಂಭಕ್ಷೇತ್ರದಲ್ಲಿ ಹಿಂದೂ ಏಕತಾ ಪಾದಯಾತ್ರೆಯ ಆಯೋಜನೆ !

ಹಿಂದು ಜನಜಾಗೃತಿ ಸಮಿತಿಯಿಂದ ಆಯೋಜನೆ !

ಪ್ರಯಾಗರಾಜ, ೨೧ ಜನವರಿ (ವಾರ್ತೆ.) – ಹಿಂದು ರಾಷ್ಟ್ರ ಸ್ಥಾಪನೆಗೆ ಒತ್ತಾಯಿಸಿ ಹಿಂದು ಜನಜಾಗೃತಿ ಸಮಿತಿಯು ಜನವರಿ ೨೨ ರಂದು ಕುಂಭಕ್ಷೇತ್ರ ಪಾದಯಾತ್ರೆಯನ್ನು ಆಯೋಜಿಸಿದೆ. ಜನವರಿ ೨೨ ರಂದು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ನಡೆದು ಒಂದು ವರ್ಷ ಪೂರ್ಣಗೊಂಡ ನಿಮಿತ್ತ ಈ ಪಾದಯಾತ್ರೆಯನ್ನು ಆಯೋಜಿಸಲಾಗಿದೆ. ಈ ಪಾದಯಾತ್ರೆಯಲ್ಲಿ ವಿವಿಧ ಸಂತರು, ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ಧರ್ಮಪ್ರೇಮಿಗಳು, ಭಕ್ತರು, ಮುಂತಾದವರು ಭಾಗವಹಿಸಲಿದ್ದಾರೆ. ಈ ಪಾದಯಾತ್ರೆಯು ಕುಂಭಕ್ಷೇತ್ರದ ಸೆಕ್ಟರ್ ೧೯ ರಲ್ಲಿರುವ ಮೊರಿ-ಮುಕ್ತಿ ಮಾರ್ಗದ ಚೌಕ್‌ದಿಂದ ಮಧ್ಯಾಹ್ನ ೨.೩೦ ಕ್ಕೆ ಆರಂಭವಾಗಲಿದೆ. ಈ ಪಾದಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿರಬೇಕೆಂದು ಆಯೋಜಕರ ವತಿಯಿಂದ ಮನವಿಯನ್ನು ಮಾಡಲಾಗಿದೆ.