|
ಪ್ರಯಾಗರಾಜ – ಮಹಾಕುಂಭಮೇಳದಲ್ಲಿ ಜನವರಿ 22 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರವರು ತಮ್ಮ ಸಂಪುಟದ ಎಲ್ಲಾ ಸಚಿವರೊಂದಿಗೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲಿದ್ದಾರೆ. ಅನಂತರ ಸಚಿವ ಸಂಪುಟ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಚಿತ್ರಕೂಟ ಮತ್ತು ಪ್ರಯಾಗರಾಜನಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು, ಹಾಗೆಯೇ ಧಾರ್ಮಿಕ ಸ್ಥಳಗಳ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯಲಿದೆ. ಜನವರಿ 22, ಈ ದಿನವು ಶ್ರೀರಾಮಮಂದಿರದ ಲೋಕಾರ್ಪಣೆಯ ಮೊದಲ ವಾರ್ಷಿಕೋತ್ಸವಕ್ಕೆ ಸಂಬಂಧಿಸಿದೆ. ಧಾರ್ಮಿಕ ಮತ್ತು ಆಡಳಿತಾತ್ಮಕ ದೃಷ್ಟಿಕೋನದಿಂದ ಈ ದಿನವನ್ನು ಮಹತ್ವದ್ದೆಂದು ಪರಿಗಣಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ಈಗಾಗಲೇ ಸರಕಾರ ಮತ್ತು ಮೇಳದ ಆಡಳಿತಕ್ಕೆ ಇಂತಹ ಸಭೆಯನ್ನು ನಡೆಸುವಂತೆ ಸೂಚಿಸಿದ್ದರು; ಆದರೆ ಯಾವ ದಿನ ಮುಖ್ಯ ಸ್ನಾನ ಮತ್ತು ಸಭೆಯನ್ನು ನಡೆಸಬೇಕು? ಎಂಬುದರ ನಿರ್ಧಾರ ಬಾಕಿ ಇತ್ತು. ಮುಖ್ಯ ಸ್ನಾನದ ದಿನದಂದು ಸಭೆಯನ್ನು ಇಡಬಾರದು ಮತ್ತು ಅತ್ಯಂತ ಗೌರವಾನ್ವಿತ ಜನರ ದರ್ಶನನಿರ್ಬಂಧ ಇಡಬೇಕು. ಇದರಿಂದ ಸಾಮಾನ್ಯ ಭಕ್ತರು ಸ್ನಾನದ ಪ್ರಯೋಜನವನ್ನು ಸುಲಭವಾಗಿ ಪಡೆಯಬಹುದು. ಸಚಿವ ಸಂಪುಟದ ಸಭೆಯಲ್ಲಿ ಪ್ರವಾಸೋದ್ಯಮ, ಧಾರ್ಮಿಕ ಕಾರ್ಯಗಳು ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಮಂಡಿಸಲಾಗುವುದು. 2019 ರಲ್ಲಿ ನಡೆದ ಕುಂಭಮೇಳದಲ್ಲಿ, ಯೋಗಿ ಆದಿತ್ಯನಾಥ ಸರಕಾರವು ಗಂಗಾ ಎಕ್ಸ್ಪ್ರೆಸ್ವೇ ಮತ್ತು ಇತರ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿತ್ತು.