ವಕ್ಫ್ ಬೋರ್ಡ್ ರದ್ದು ಗೊಳಿಸುವುದರೊಂದಿಗೆ ಕಾಶಿ ಮತ್ತು ಮಥುರಾ ಇದರ ಬಗ್ಗೆ ದಿಕ್ಕು ನಿರ್ಧರಿಸಲಾಗುವುದು !
ಪ್ರಯಾಗರಾಜ್ (ಉತ್ತರ ಪ್ರದೇಶ) – ಕಳೆದ ಅನೇಕ ಕುಂಭ ಮೇಳದಲ್ಲಿ, ವಿಶ್ವ ಹಿಂದೂ ಪರಿಷತ್ತಿನ ಶಿಬಿರದಲ್ಲಿ ಸಂತರ ಸಮ್ಮೇಳನ ನಡೆದು ಬಂದಿದೆ. ಈ ಸಂಪ್ರದಾಯವನ್ನು ಈ ವರ್ಷವೂ ಮುಂದುವರಿಸಲಾಗುವುದು. ಈ ಸಂತರ ಸಮ್ಮೇಳನದಲ್ಲಿ ವಕ್ಫ್ ಬೋರ್ಡ್ ರದ್ದುಗೊಳಿಸುವ ಸೂತ್ರದ ಕುರಿತು ಸಂತರು ಚರ್ಚೆ ಮಾಡುವರು ಎಂದು ಹೇಳಲಾಗುತ್ತಿದೆ. ಈ ಸಭೆಗೂ ಮುನ್ನ ವಿ.ಹಿಂ.ಪ. ನ ಕೇಂದ್ರೀಯ ಮಾರ್ಗದರ್ಶಕ ಸಮಿತಿಯ ಸಭೆಯಲ್ಲಿ ವಕ್ಫ್ ಬೋರ್ಡ್‌ನ ಸೂತ್ರದ ಬಗ್ಗೆಯೂ ಚರ್ಚೆ ನಡೆಯಲಿದೆ. ಈ ಸಂತ ಸಮ್ಮೇಳನದಲ್ಲಿ ಮತಾಂತರ, ದೇವಸ್ಥಾನಗಳ ಮೇಲೆ ಸರಕಾರದ ನಿಯಂತ್ರಣ ಮತ್ತು ಜ್ಞಾನವಾಪಿ ಹಾಗೂ ಮಥುರಾ ಸೂತ್ರಗಳ ಬಗ್ಗೆಯೂ ಚರ್ಚಿಸಲಾಗುವುದು. ಕೇಂದ್ರೀಯ ಮಾರ್ಗದರ್ಶನ ಮಂಡಳಿಯ
ಸಭೆಯಲ್ಲಿ ಸಂತ ಪರಿಷತ್‌ನ ಕಾರ್ಯಸೂಚಿಯನ್ನು ನಿರ್ಧರಿಸಲಾಗುವುದು ಎಂದು ವಿ.ಹಿಂ.ಪ. ನ ಅಖಿಲ ಭಾರತೀಯ ಸಂತ ಸಂಪರ್ಕ ಮುಖ್ಯಸ್ಥ ಅಶೋಕ್ ತಿವಾರಿ ಇವರು ಮಾಹಿತಿ ನೀಡಿದರು.
ಮಹಾಕುಂಭನಗರಿಯಲ್ಲಿ ವಿ.ಹಿಂ.ಪ. ನ ಶಿಬಿರದಲ್ಲಿ ನಡೆಯಲಿರುವ ಕಾರ್ಯಕ್ರಮಗಳು
ಜನವರಿ 24: ಕೇಂದ್ರೀಯ ಮಾರ್ಗದರ್ಶನ ಮಂಡಳಿಯ ಸಭೆ
ಜನವರಿ 25: ಸಾಧ್ವಿ ಪರಿಷತ್
ಜನವರಿ 25-26: ಸಂತರ ಸಮ್ಮೇಳನ
ಜನವರಿ 27: ಯುವ ಸಂತರ ಸಮ್ಮೇಳನ