ತಿರುಮಲ ದೇವಸ್ಥಾನದಲ್ಲಿ ಮೊಟ್ಟೆ ಬಿರಿಯಾನಿ ತಿನ್ನುತ್ತಿದ್ದವರ ಬಂಧನ ಮತ್ತು ಬಿಡುಗಡೆ

ತಿರುಪತಿ (ಆಂಧ್ರಪ್ರದೇಶ) – ಇಲ್ಲಿನ ತಿರುಮಲ ದೇವಸ್ಥಾನದಲ್ಲಿ ಮೊಟ್ಟೆ ಬಿರಿಯಾನಿ ತಿನ್ನುತ್ತಿದ್ದ ಕೆಲವರು ಸಿಕ್ಕಿಬಿದ್ದಿದ್ದಾರೆ. ಅಲಿಪಿರಿ ಚೆಕ್‌ಪೋಸ್ಟ್‌ನಲ್ಲಿ ಭದ್ರತಾ ಲೋಪಗಳಿಗಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅನ್ನು ವಿವಿಧ ವಿರೋಧ ಪಕ್ಷಗಳು ಟೀಕಿಸಿವೆ. ತಿರುಮಲದಲ್ಲಿ ಮದ್ಯಪಾನ, ಮಾಂಸಾಹಾರ, ಸಿಗರೇಟ್ ಸೇದುವುದು ಮತ್ತು ತಂಬಾಕು ಸೇವನೆ ಮೇಲೆ ಕಟ್ಟುನಿಟ್ಟಿನ ನಿಷೇಧವಿದೆ; ಆದರೆ ಭಕ್ತರ ಗುಂಪೊಂದು ಮೊಟ್ಟೆ ಬಿರಿಯಾನಿ ತಿನ್ನುವಾಗ ಸಿಕ್ಕಿಬಿದ್ದಾಗ ಜನರು ಬೆಚ್ಚಿಬಿದ್ದರು.

ತಿರುಮಲ ಪೊಲೀಸರು ಬಂಧಿತ ಜನರಿಗೆ ತಿರುಮಲದಲ್ಲಿ ಮದ್ಯಪಾನ, ಮಾಂಸಾಹಾರ, ಸಿಗರೇಟ್ ಸೇದುವುದು ಮತ್ತು ತಂಬಾಕು ಸೇವನೆ ಮೇಲೆ ಕಟ್ಟುನಿಟ್ಟಿನ ನಿಷೇಧವಿದೆ ಎಂದು ಹೇಳಿದಾಗ, ಭಕ್ತರು ಈ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ಹೇಳಿದರು. ತಿರುಮಲ ಪೊಲೀಸರು ಅವರನ್ನು ಕಠಿಣ ಎಚ್ಚರಿಕೆ ನೀಡಿ ಬಿಟ್ಟುಬಿಟ್ಟರು.

ಸಂಪಾದಕೀಯ ನಿಲುವು

ತಿರುಮಲ ದೇವಸ್ಥಾನ ಮಾತ್ರವಲ್ಲ, ಯಾವುದೇ ಹಿಂದೂ ದೇವಸ್ಥಾನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಂಸಾಹಾರವನ್ನು ಅನುಮತಿಸಲಾಗುವುದಿಲ್ಲ ಎಂದು ತಥಾಕಥಿತ ಈ ಭಕ್ತರಿಗೆ ತಿಳಿದಿಲ್ಲವೇ? ದೇವಾಲಯದ ಪಾವಿತ್ರ್ಯವನ್ನು ಉಲ್ಲಂಘಿಸುವ ಇಂತಹ ಆರೋಪಿ ಭಕ್ತರಿಗೆ ಶಿಕ್ಷೆಯಾಗಬೇಕು!