ಢಾಕಾ (ಬಾಂಗ್ಲಾದೇಶ) – ಮುಸ್ಲಿಂ ಬಹುಸಂಖ್ಯಾತ ದೇಶವಾಗಿದ್ದರೂ, ಬಾಂಗ್ಲಾದೇಶವನ್ನು ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಮಾಡಲಾಗಿದೆ; ಆದರೆ, ಈಗ ಅಧಿಕಾರ ಬದಲಾದ ನಂತರ, ಅದನ್ನು ಇಸ್ಲಾಮಿಕ್ ದೇಶವನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆದಿವೆ. ದೇಶದ ಸಂವಿಧಾನವನ್ನು ಪುನಃ ಬರೆಯುವ ಬೇಡಿಕೆಗಳಿದ್ದರೂ, ಪ್ರಸ್ತುತ ಸಂವಿಧಾನದಿಂದ ‘ರಾಷ್ಟ್ರವಾದ’, ‘ಜಾತ್ಯತೀತ’ ಮತ್ತು ‘ಸಮಾಜವಾದ’ ಪದಗಳನ್ನು ತೆಗೆದುಹಾಕುವ ಬೇಡಿಕೆಗಳು ಬಂದಿವೆ. ಬಾಂಗ್ಲಾದೇಶದ ಎರಡು ರಾಜಕೀಯ ಪಕ್ಷಗಳು ಈ ಪದಗಳನ್ನು ತೆಗೆದುಹಾಕುವ ಪ್ರಸ್ತಾಪಗಳನ್ನು ಟೀಕಿಸಿವೆ.
ಬಾಂಗ್ಲಾದೇಶದ ಮಧ್ಯಂತರ ಸರಕಾರವು ಸಾಂವಿಧಾನಿಕ ಸುಧಾರಣಾ ಆಯೋಗವನ್ನು ನೇಮಿಸಿತ್ತು. ಈ ಸಮಿತಿಯು ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಸಮಾನತೆ, ಮಾನವ ಘನತೆ ಮತ್ತು ಸಾಮಾಜಿಕ ನ್ಯಾಯವನ್ನು ಶಿಫಾರಸ್ಸು ಮಾಡಿದೆ. ಸಂವಿಧಾನದ ಪೀಠಿಕೆಯಿಂದ ರಾಷ್ಟ್ರೀಯತೆ, ಸಮಾಜವಾದ ಮತ್ತು ಜಾತ್ಯತೀತತೆ ಎಂಬ ಪದಗಳನ್ನು ತೆಗೆದು ಅಲ್ಲಿ ‘ಬಹುವಚನವಾದ’ ಎಂಬ ಪದವನ್ನು ಸೇರಿಬೇಕು ಎಂದು ಹೇಳಲಾಗಿದೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ, ಜಿಹಾದಿಗಳು ತಮ್ಮ ಸಂವಿಧಾನದಿಂದ ಜಾತ್ಯತೀತ ಪದವನ್ನು ತೆಗೆದುಹಾಕಿ ‘ಇಸ್ಲಾಮಿಕ್ ದೇಶ’ ದಂತಹ ಪದಗಳನ್ನು ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರ ಹಿಂದೂದ್ವೇಷಿ ಮನಸ್ಥಿತಿಯನ್ನು ಜಗತ್ತು ಗಮನಿಸುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತೀಯ ಸಂವಿಧಾನದಿಂದ ಜಾತ್ಯತೀತ ಪದವನ್ನು ತೆಗೆದುಹಾಕಿ ಅಲ್ಲಿ ಹಿಂದೂ ರಾಷ್ಟ್ರ ಎಂಬ ಪದವನ್ನು ಸೇರಿಸಿದರೆ, ಭಾರತ ‘ವಿಶ್ವಗುರು’ ಆಗುವತ್ತ ಮೊದಲ ಹೆಜ್ಜೆಯಾಗುತ್ತದೆ. ಇದು ಎರಡೂ ಮನಸ್ಥಿತಿಗಳ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ! |